-->
ಬಿಗ್ ಬಾಸ್ ಗೆ ಎಂಟ್ರಿಯಿಂದ ಇಬ್ಬರ ಪ್ರೇಮ ಪ್ರಕರಣಗಳಿಗೆ ಬ್ರೇಕ್ ಅಪ್: ಯಾರವರು ಗೊತ್ತೇ?

ಬಿಗ್ ಬಾಸ್ ಗೆ ಎಂಟ್ರಿಯಿಂದ ಇಬ್ಬರ ಪ್ರೇಮ ಪ್ರಕರಣಗಳಿಗೆ ಬ್ರೇಕ್ ಅಪ್: ಯಾರವರು ಗೊತ್ತೇ?

ಹೈದರಾಬಾದ್​: ಮೊದಲೇ ಪ್ರೀತಿಯ ಬಲೆಗೆ ಬಿದ್ದಿದ್ದ ಇಬ್ಬರು ಸ್ಪರ್ಧಿಗಳು ಬಿಗ್​ಬಾಸ್​ ಮನೆಗೆ ಪ್ರವೇಶ ಮಾಡಿ ರಿಯಾಲಿಟಿ ಶೋ ಮುಗಿಸಿಕೊಂಡು ಹೊರ ಬರುತ್ತಿದ್ದಂತೆ ಈರ್ವರ ಪ್ರೀತಿಯಲ್ಲೂ ಬಿರುಗಾಳಿ ಎದ್ದಿದೆ. ಈ ಮೂಲಕ ಮೊದಲ ಪ್ರೀತಿಯನ್ನು, ಪ್ರೀತಿಸಿದವರನ್ನೂ ಮರೆತ ಇಬ್ಬರು ಬಿಗ್​ಬಾಸ್​ ಮನೆಯಲ್ಲಿ ಬೇರೆಯವರೊಂದಿಗೆ ಸಲುಗೆ ಬೆಳೆಸಿದ್ದೇ ಬಿರುಗಾಳಿ ಏಳಲು ಕಾರಣವಾಗಿದೆ. ಆ ಕುರಿತ ಒಂದು ಸ್ಟೋರಿ ಇಲ್ಲಿದೆ.  

ತೆಲುಗು ಯೂಟ್ಯೂಬರ್ ವಲಯದಲ್ಲಿ ಖ್ಯಾತರಾಗಿರುವ ಮುದ್ದಾದ ಜೋಡಿಗಳಾದ ಶಾನು ಅಲಿಯಾಸ್​ ಷಣ್ಮುಖ​ ಜಸ್ವಂತ್​ ಹಾಗೂ ದೀಪ್ತಿ ಸುನೈನಾ ಪರಸ್ಪರ ಪ್ರೀತಿಸುತ್ತಿರುವುದು ಎಲ್ಲರಿಗೆ ಗೊತ್ತಿರುವ ವಿಚಾರ. ಈ ಬಗ್ಗೆ ಸ್ವತಃ ಷಣ್ಮುಖ್​ ಹಾಗೂ ದೀಪ್ತಿಯೂ ಹೇಳಿಕೊಂಡಿದ್ದರು. ಈ ನಡುವೆ ಷಣ್ಮುಖ್ ಬಿಗ್​​ಬಾಸ್​ ಮನೆಗೆ ಪ್ರವೇಶಿಸಿದ್ದರು. ಆಗ ಆತನಿಗೆ ಓಟ್​ ಮಾಡುವಂತೆ ಅಭಿಮಾನಿಗಳ ಬಳಿ ದೀಪ್ತಿ ಕೇಳಿಕೊಳ್ಳುತ್ತಿದ್ದರು. ಆದರೂ ಅದಾಗಲೇ ಇರುವ ಖ್ಯಾತಿ ಹಾಗೂ ದೀಪ್ತಿಯ ಪ್ರಯತ್ನದ ಮಧ್ಯೆಯೂ ಶಾನು ಬಿಗ್​ಬಾಸ್​ -5 ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ. ಕೊನೆಗೆ ಮೊದಲನೆಯ ರನ್ನರ್​ ಅಪ್​ ಆಗಿ ತೃಪ್ತಿಪಟ್ಟುಕೊಂಡಿದ್ದರು. 

ಆದರೆ ಇದೀಗ ಷಣ್ಮಖ್ ಹಾಗೂ ದೀಪ್ತಿ ಮಧ್ಯೆ ಬ್ರೇಕಪ್ ಆಗಿದೆ ಎಂಬ ವಿಚಾರ ಸುದ್ದಿಲ್ಲಿದೆ. ಬಿಗ್​ಬಾಸ್​ನಲ್ಲಿ ಷಣ್ಮುಖ ಕ್ಯಾಪ್ಟನ್​ ಆದ ಬಳಿಕದ ಎಪಿಸೋಡ್​ನಲ್ಲಿ ಒಂದಷ್ಟು ಘಟನೆಗಳು ನಡೆದಿತ್ತು. ಪ್ರತಿಸ್ಪರ್ಧಿ ಸಿರಿಯವರು ಆತನ ಹಣೆಗೆ ಮುತ್ತಿಟ್ಟಿದ್ದರು. ಅಲ್ಲದೆ, ಒಂದು ರಾತ್ರಿ ಇಬ್ಬರು ಮಾತನಾಡುತ್ತಿರುವಾಗ ಸಿರಿ, ಷಣ್ಮುಖ್ ಎದೆಯ ಮೇಲೆ ಮಲಗಿದ್ದರು. ಇದು ಇವರಿಬ್ಬರ ನಡುವೆ ಭಾರೀ ಸಲುಗೆ ಇರುವಂತೆ ತೋರುತ್ತಿತ್ತು. 

ಇದನ್ನು ಕಂಡ ದೀಪ್ತಿ ಭಾರೀ ಕೋಪಗೊಂಡಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿತ್ತು. ಷಣ್ಮುಖ ಹಾಗೂ ಸಿರಿ ತುಂಬಾ ಸಲುಗೆಯಿಂದ ಇರುವ ಫೋಟೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ದೀಪ್ತಿಗೆ ಬೇಸರ ತರಿಸಿದೆ. ಹೀಗಾಗಿ ದೀಪ್ತಿ ತನ್ನ ಇನ್​ಸ್ಟಾಗ್ರಾಂ ಫಾಲೋವರ್ಸ್​ ಲೀಸ್ಟ್​ನಿಂದ ಶಾನು ಅನ್ನು ಅನ್​​ ಫಾಲೋ ಮಾಡಿರುವ ವಿಚಾರವೂ ಬೆಳಕಿಗೆ ಬಂದಿತ್ತು. ಇದೀಗ ಶೋನಿಂದ ಹೊರಬಂದ ಬಳಿಕ ದೀಪ್ತಿಯನ್ನು ಷಣ್ಮುಖ ನಿರ್ಲಕ್ಷಿಸುತ್ತಿರುವಂತೆ ಕಾಣುತ್ತಿದ್ದು, ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. 

ಇತ್ತ ಸಿರಿಗೂ ಮೊದಲೇ ಶ್ರೀಹಾನ್ ಬಾಯ್​ಫ್ರೆಂಡ್​ ಇದ್ದಾನೆ. ಇದೀಗ ಆತ ತನ್ನ ಮೊಬೈಲ್​ನಲ್ಲಿದ್ದ ಸಿರಿಯ ಫೋಟೋಗಳನ್ನೆಲ್ಲ ಡಿಲೀಟ್​ ಮಾಡಿದ್ದಾನೆಂದು ತಿಳಿದುಬಂದಿದೆ. ಷಣ್ಮಖನೊಂದಿಗಿನ ಸಿರಿಯ ಸಂಬಂಧದಿಂದ ಅಸಮಾಧಾನಗೊಂಡಿರುವ ಶ್ರೀಹಾನ್​ ಆಕೆಯೊಂದಿಗೆ ಮಾತು ಬಿಟ್ಟಿದ್ದಾನಂತೆ. ಅಲ್ಲದೆ, ಆಕೆಯಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂಬ ಸುದ್ದಿಯು ಹರಿದಾಡುತ್ತಿದೆ. ಒಟ್ಟಾರೆ, ಬಿಗ್​ಬಾಸ್​ ಶೋ ಮುಗಿಸಿಕೊಂಡು ಬಂದ ಮೇಲೆ ಇಬ್ಬರ ಪ್ರೀತಿಯಲ್ಲಿ ಬಿರುಗಾಳಿ ಎದ್ದಿದ್ದು, ಮುಂದೇನಾಗುತ್ತದೋ ಎಂದು ಕಾದು ನೋಡಬೇಕಿದೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

Advertise under the article

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100