-->

ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡ ಸಂಸದ ಶಶಿತರೂರ್: ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ನೆಟ್ಟಿಗರು

ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡ ಸಂಸದ ಶಶಿತರೂರ್: ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ನೆಟ್ಟಿಗರು

ನವದೆಹಲಿ: ದೇಶದ ಉತ್ತಮ ಬರಹಗಾರರೂ, ತಮ್ಮ ಇಂಗ್ಲಿಷ್​ ಜ್ಞಾನದ ಭಂಡಾರವೆನಿಸಿರುವ ಕೇರಳದ ಕಾಂಗ್ರೆಸ್​ ಸಂಸದ ಶಶಿ ತರೂರ್​ ವಿವಾದಕ್ಕೆ ಹೆಸರುವಾಸಿಯಾದವರು. ಇಂದು ಅವರು ತಮ್ಮ ಟ್ವಿಟರ್​ನಲ್ಲಿ ಫೋಟೊವೊಂದನ್ನು ಶೇರ್ ಮಾಡಿ ಬರೆದಿರುವ ಬರಹದಿಂದ ನೆಟ್ಟಿಗರಿಂದ ಟ್ರೋಲ್​ ಗೆ ಆ
ಒಳಗಾಗುತ್ತಿದ್ದಾರೆ. 

ಸಂಸತ್ತಿನ ಚಳಿಗಾಲ ಅಧಿವೇಶನದ ಮೊದಲ ದಿನವಾದ ಇಂದು ಅವರು ಕಾಂಗ್ರೆಸ್ ನ ಸಂಸದೆಯರೊಂದಿಗೆ  ಸೆಲ್ಫಿ ತೆಗೆಸಿಕೊಂಡಿದ್ದು, ಅದನ್ನು ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ‌. ಆದರೆ ಅದಕ್ಕೆ ಕೊಟ್ಟಿರುವ ಶೀರ್ಷಿಕೆ ಮಹಿಳೆಯರಿಗೆ ಅಗೌರವ ಸೂಚಿಸುವಂಥದ್ದು ಎಂದು ನಟ್ಟಿಗರು ಕೆಂಡಾಮಂಡವಾಗಿ ಹಿಗ್ಗಾಮುಗ್ಗಾ ಜರೆಯುದ್ದಾರೆ. 


ಲೋಕಸಭೆಯ ಮಹಿಳಾ ಸಂಸದೆಯರೊಂದಿಗೆ ಇರುವ ಆ ಚಿತ್ರಕ್ಕೆ “ನನ್ನ ಆರು ಜನ ಸಹಸಂಸದರೊಂದಿಗೆ ಇಂದು ಬೆಳಿಗ್ಗೆ” ಎಂದು ಬರೆದು, “ಲೋಕಸಭೆಯು ಕೆಲಸ ಮಾಡಲು ಆಕರ್ಷಕ ಸ್ಥಳವಲ್ಲ ಎಂದು ಯಾರು ಹೇಳುತ್ತಾರೆ” ಎಂಬ ಪ್ರಶ್ನೆಯನ್ನು ತರೂರ್​ ಟ್ವೀಟ್ ಮಾಡಿದ್ದಾರೆ.

 ಶಶಿ ತರೂರ್​ರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ಸಂಸದೆಯರು ಬಾರಾಮತಿಯ ಸುಪ್ರಿಯ ಸುಳೆ, ಪಟಿಯಾಲಾದ ಪ್ರಣೀತ್ ಕೌರ್​, ದಕ್ಷಿಣ ಚೆನ್ನೈನ ತಮಿಜಾಚಿ ತಂಗಪಾಡಿಯನ್​, ಜಾಧವ್​ಪುರದ ಮೀಮಿ ಚಕ್ರಬೋರ್ತಿ, ಬಸೀರ್ಹತ್​ನ ನುಶ್ರತ್​ ಜಹಾನ್ ಮತ್ತು ಕರೂರಿನ ಎಸ್​.ಜೋತಿಮಣಿ. ಶಶಿ ತರೂರ್​ರ ಈ ವೈರಲ್​ ಟ್ವೀಟ್​ ಬಗ್ಗೆ ನೆಟ್ಟಿಗರ ವೈವಿಧ್ಯಮಯ ಕಾಮೆಂಟುಗಳು ಹರಿದಾಡುತ್ತಿದೆ.

“ಆಕರ್ಷಕ? ಛೇ! ಬೇರೆ ಯಾವುದೇ ಕ್ಷೇತ್ರದಲ್ಲಿ ನಿಮ್ಮ ಮಹಿಳಾ ಸಹೋದ್ಯೋಗಿಗಳಿಗೆ ಈ ಶಬ್ದ ಬಳಸಿದ್ದರೆ ನಿಮ್ಮನ್ನು ವಜಾಗೊಳಿಸುತ್ತಿದ್ದರು” ಎಂದೊಬ್ಬರು ಹೇಳಿದ್ದಾರೆ. ಮತ್ತೊಬ್ಬರು, “ಮಹಿಳೆಯರನ್ನು ಈ ರೀತಿಯಾಗಿ ವರ್ಣಿಸುವುದು ಎಷ್ಟು ಸರಿ?” ಎಂದು ಕೇಳಿದ್ದರೆ, ಇನ್ನೊಬ್ಬರು “ಇದು ನಿಜಕ್ಕೂ ಅಸಮಂಜಸ” ಎಂದಿದ್ದಾರೆ.

Ads on article

Advertise in articles 1

advertising articles 2

Advertise under the article