-->
ಶಿಕ್ಷಕನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ವಿದ್ಯಾರ್ಥಿನಿ ಆತ್ಮಹತ್ಯೆ: ವಾಟ್ಸ್ಆ್ಯಪ್​ ಚಾಟ್​, ಆಡಿಯೋ ಸಂಭಾಷಣೆ ವೈರಲ್

ಶಿಕ್ಷಕನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ವಿದ್ಯಾರ್ಥಿನಿ ಆತ್ಮಹತ್ಯೆ: ವಾಟ್ಸ್ಆ್ಯಪ್​ ಚಾಟ್​, ಆಡಿಯೋ ಸಂಭಾಷಣೆ ವೈರಲ್

ಕೊಯಮತ್ತೂರು: ಶಿಕ್ಷಕನೇ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆಂದು ಆರೋಪಿಸಿ ತಮಿಳುನಾಡಿನ ಕೊಯಮತ್ತೂರಿನ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾಳೆ. ಇದೀಗ ಆರೋಪಿ ವಿಜ್ಞಾನ ಶಿಕ್ಷಕ ಹಾಗೂ ಶಾಲೆಯ ಮುಖ್ಯ ಶಿಕ್ಷಕಿಯನ್ನು ಕೊಯಮತ್ತೂರು ಪೊಲೀಸರು ಬಂಧಿಸಿದ್ದಾರೆ.

ಕೊಯಮತ್ತೂರಿನ ಖಾಸಗಿ ಶಾಲೆಯೊಂದರ 31 ವರ್ಷದ ಭೌತಶಾಸ್ತ್ರ ಶಿಕ್ಷಕನು ಮೃತ 12ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಕೆಲವು ತಿಂಗಳ ಹಿಂದೆ ಲೈಂಗಿಕ ದೌರ್ಜನ್ಯ ನಡೆಸಿದ್ದ. ಅದೇ ಶಿಕ್ಷಕ ಇನ್ನೂ ಇಬ್ಬರು ಹುಡುಗಿಯರಿಗೆ ಲೈಂಗಿಕ ಕಿರುಕುಳ ಕೊಟ್ಟಿರುವುದನ್ನು ಸೂಚಿಸುವ ವಾಟ್ಸ್ಆ್ಯಪ್​ ಚಾಟ್​ಗಳು ಮತ್ತು ಆಡಿಯೋ ಸಂಭಾಷಣೆ ಮಂಗಳವಾರ ವೈರಲ್​ ಆಗಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸಂಬಂಧಪಟ್ಟ ಶಿಕ್ಷಕನ ವಿರುದ್ಧ ತೀವ್ರ ಕ್ರಮ ಕೈಗೊಳ್ಳಬೇಕು ಎಂದು ಕೋರಿ ಪ್ರತಿಭಟನೆ ನಡೆಸಿದ್ದರು ಎನ್ನಲಾಗಿದೆ.
 
ವಿದ್ಯಾರ್ಥಿನಿಯ ಆತ್ಮಹತ್ಯೆಯ ಹಿಂದೆ ಇನ್ನೂ ಇಬ್ಬರ ಪಾತ್ರವಿದೆ ಎಂಬ ಶಂಕೆ ಮೂಡಿದೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಸಂತ್ರಸ್ತ ವಿದ್ಯಾರ್ಥಿನಿ ದೂರು ನೀಡಿದಾಗ ಸೂಕ್ತ ಕ್ರಮ ಕೈಗೊಳ್ಳದ ಶಾಲೆಯ ಮುಖ್ಯಶಿಕ್ಷಕಿಯನ್ನು ಕೂಡ ಪೊಕ್ಸೊ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.

ಕೆಲವರ ವಿಕೃತ ನಡವಳಿಕೆಯಿಂದಾಗಿ ಓರ್ವ ವಿದ್ಯಾರ್ಥಿನಿ ಬಲಿಯಾಗಿದ್ದಾಳೆ. ಶಾಲೆಗಳು ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯದಂತೆ ಎಚ್ಚರ ವಹಿಸಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ಮಹಿಳೆಯರ ಸುರಕ್ಷತೆಯನ್ನು ಕಾಪಾಡುತ್ತೇವೆ ಎಂದು ತಮಿಳುನಾಡಿನ ಸಿಎಂ ಎಂ.ಕೆ.ಸ್ಟಾಲಿನ್​ ಹೇಳಿದ್ದಾರೆ. 

Ads on article

Advertise in articles 1

advertising articles 2

Advertise under the article