
ಹಾಟ್ ಲುಕ್ ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಸಮಂತಾ ಮಾಜಿ ಪತಿಯ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆಯೇ?: ನೆಟ್ಟಿಗರಿಂದ ಹೊಸ ಚರ್ಚೆ
Thursday, November 25, 2021
ಹೈದರಾಬಾದ್: ವಿಚ್ಛೇದನ ಬಳಿಕ ನಾಗಚೈತನ್ಯ ಹಾಗೂ ಸಮಂತಾ ತಮ್ಮ ವೃತ್ತಿ ಜೀವನದ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಸಾಕಷ್ಟು ಚಿತ್ರಗಳಿಗೆ ಸಮಂತಾ ಸಹಿ ಹಾಕಿದ್ದಾರೆ. ತಮ್ಮ ವಿರುದ್ಧ ಎಂಥಹದ್ದೇ ಆರೋಪಗಳು ಕೇಳಿಬಂದರೂ ಅದಾವುದಕ್ಕೂ ಕಿವಿಗೊಡದೆ ಸಮಂತಾ ಸಂಪೂರ್ಣ ತಮ್ಮ ಸಿನಿ ಕೆರಿಯರ್ ಕಡೆಗೆ ಗಮನ ಹರಿಸಿದ್ದಾರೆ.
ಇತ್ತೀಚೆಗೆ ಗೋವಾದಲ್ಲಿ ನಡೆದಿರುವ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಂಡಿದ್ದ ನಟಿ ಸಮಂತಾ ತಾವು ಧರಿಸಿರುವ ಉಡುಗೆಯಿಂದಲೇ ಭಾರೀ ಸುದ್ದಿಯಾಗಿದ್ದರು. ಕೆಂಪು ಬಣ್ಣದ ಬಟ್ಟೆಯಲ್ಲಿ ಅವರು ಸಖತ್ ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ, ಡೈವೋರ್ಸ್ ಬಳಿಕ ಸಮಂತಾ ಬಹಖ ಬೋಲ್ಡ್ ಆಗಿ ಕಾಣಿಸಿಕೊಳ್ಳಲು ಆರಂಭಿಸಿದ್ದಾರೆ.
ಇದುವರೆಗೂ ಯಾವುದೇ ಐಟಂ ಸಾಂಗ್ಗಳಲ್ಲಿ ಕಾಣಿಸಿಕೊಳ್ಳದ ಸಮಂತಾ, ಇದೀಗ ಅಲ್ಲು ಅರ್ಜುನ್ ನಟಿಸಿರುವ 'ಪುಷ್ಪಾ' ಸಿನಿಮಾದಲ್ಲಿ ತಮ್ಮ ಮೈಮಾಟ ಪ್ರದರ್ಶಿಸಲು ಮುಂದಾಗಿದ್ದಾರೆ. ಡಿವೋರ್ಸ್ ಬಳಿಕ ಸಮಂತಾ ತಮ್ಮ ನಿಲುವು ಬದಲಿಸಿಕೊಂಡಿದ್ದು, ಇದರ ಹಿಂದೆ ಬಲವಾದ ಕಾರಣ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.
ವಿಭಿನ್ನ ಉಡುಗೆಗಳು ಮತ್ರು ಹಾಟ್ ಲುಕ್ ಗಳ ಫೋಟೋಗಳನ್ನು ಹರಿಯಬಿಡುವ ಮೂಲಕ ಸಮಂತಾ ತಮ್ಮ ಮಾಜಿ ಪತಿ ನಾಗಚೈತನ್ಯ ವಿರುದ್ಧ ಸೇಡು ತೀರಿಸಿಕೊಳ್ಳಲು ಆರಂಭಿಸಿದ್ದಾರೆ ಎಂಬ ಮಾತುಗಳು ಟಾಲಿವುಡ್ ಗಲ್ಲಿಯಲ್ಲಿ ಕೇಳಿಬರುತ್ತಿದೆ. ನಾಗಚೈತನ್ಯ ಹೊಟ್ಟೆ ಉರಿಯಲೆಂಬಂತೆ ಸಾರ್ವಜನಿಕವಾಗಿ ಸಮಂತಾ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರ ಮುಂದುವರಿದ ಭಾಗವೇ ಪುಷ್ಪಾ ಸಿನಿಮಾದ ಐಟಂ ಸಾಂಗ್. ಸಿನಿಮಾ ಬಿಡುಗಡೆಯಾಗಿ ಸಮಂತಾ ಐಟಂ ಸಾಂಗ್ ತೆರೆಯ ಮೇಲೆ ಬಂದಲ್ಲಿ ಮತ್ತಾವ ಬೆಳವಣಿಗೆ ಸಂಭವಿಸಲಿದೆಯೋ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.
ಇನ್ನು ಸಮಂತಾ ಸಿನಿಮಾ ವಿಚಾರಕ್ಕೆ ಬಂದಲ್ಲಿ, ಇನ್ನೂ ಹೆಸರಿಡ ದ್ವಿಭಾಷಾ ಸಿನಿಮಾವೊಂದರಲ್ಲಿ ಅವರು ನಟಿಸಲಿದ್ದಾರೆ. ತಮಿಳು ಸಿನಿಮಾ ನಿರ್ಮಾಣ ಸಂಸ್ಥೆ ಡ್ರೀಮ್ ವಾರಿಯರ್ ಪಿಕ್ಚರ್ ಸಮಂತಾ ಅವರು ನಟಿಸಲಿರುವ ಹೊಸ ಸಿನಿಮಾಕ್ಕೆ ಬಂಡವಾಳ ಹೂಡಲಿದೆ. ಅಲ್ಲದೆ, ಅಲ್ಲು ಅರ್ಜುನ್ ಅವರ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪಾದಲ್ಲಿ ಐಟಂ ಸಾಂಗ್ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಷ್ಟೇ ಅಲ್ಲದೆ, ಶಾಕುಂತಲಂ ಸಿನಿಮಾ ಶೂಟಿಂಗ್ ಮುಕ್ತಾಯಗೊಂಡಿದ್ದು ಬಿಡುಗಡೆಗೆ ಸಿದ್ಧವಾಗಿದೆ. ಇದರೊಂದಿಗೆ ವಿಜಯ್ ಸೇತುಪತಿ ನಟನೆಯ ಕಾಥುವಾಕಲ ರೆಂಡು ಕಾದಲಂ ಚಿತ್ರದಲ್ಲಿಯೂ ನಟಿಸಿದ್ದಾರೆ. ಈ ಚಿತ್ರದಲ್ಲಿ ನಯನತಾರಾ ಕೂಡ ನಾಯಕಿ. ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಸಮಂತಾ ಬಿಜಿಯಾಗಿದ್ದಾರೆ.