-->
ಅದ್ದೂರಿಯಾಗಿ ಟೆಕ್ಕಿಗಳಿಬ್ಬರ ಆರತಕ್ಷತೆ ನಡೆದಿದ್ದರೂ ಮಧ್ಯರಾತ್ರಿ ವಧು ಮಾಡಿರುವ ಆ ಒಂದು ಕಾರ್ಯದಿಂದ ಮದುವೆಯೇ ಮುರಿದು ಬಿತ್ತು!

ಅದ್ದೂರಿಯಾಗಿ ಟೆಕ್ಕಿಗಳಿಬ್ಬರ ಆರತಕ್ಷತೆ ನಡೆದಿದ್ದರೂ ಮಧ್ಯರಾತ್ರಿ ವಧು ಮಾಡಿರುವ ಆ ಒಂದು ಕಾರ್ಯದಿಂದ ಮದುವೆಯೇ ಮುರಿದು ಬಿತ್ತು!

ಚನ್ನಪಟ್ಟಣ: ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಟೆಕ್ಕಿಗಳಿಬ್ಬರ ಮದುವೆ ಸಂಭ್ರಮವು ಎರಡೂ ಕುಟುಂಬದಲ್ಲಿ ಕಳೆ ಗಟ್ಟಬೇಕಿತ್ತು. ಆದರೆ ಅದಾಗಲೇ ಇಲ್ಲ.  ಮದುಮಗಳು ರಾತ್ರೋರಾತ್ರಿ ಮಾಡಿದ ಆ ಒಂದು ಕೆಲಸದಿಂದ ಇಡೀ ಮದುವೆ ಮನೆಯಲ್ಲಿ ಗದ್ದಲ್ಲ ನಿರ್ಮಾಣವಾಗಿತ್ತು. ಜೊತೆಗೆ ಮದುವೆ ಮುರಿದು ಬಿದ್ದು, ವರನ ಕಡೆಯುವರು ಬೇಸರದಿಂದಲೇ ವಾಪಸ್​ ಹೋದರೆ. ವಧುವಿನ ಕಡೆಯವರು ಭಾರೀ ಮುಜುಗರಕ್ಕೊಳಗಾಗಿ ಮನೆಯತ್ತ ತೆರಳಿದರು. 

ರಾಮನಗರ ಜಿಲ್ಲೆಯ ಚನ್ನಪಟ್ಟಣದ ಹೊರವಲಯದಲ್ಲಿರುವ ಕಲ್ಯಾಣಮಂಟಪದಲ್ಲಿ ಬುಧವಾರ ಬೆಳಗ್ಗೆ ಈ ಘಟನೆ ನಡೆದಿತ್ತು. ಬೆಂಗಳೂರು ಮೂಲದ ಯುವಕನೊಂದಿಗೆ ಚನ್ನಪಟ್ಟಣದ ಯುವತಿಯ ವಿವಾಹವು ಹಿರಿಯರ ಸಮ್ಮುಖದಲ್ಲಿ ನಿಶ್ಚಯವಾಗಿತ್ತು. ಯುವಕ-ಯುವತಿ ಇಬ್ಬರೂ ಬಿಇ ಪದವೀಧರರು. 

ಇವರಿಬ್ಬರ ವಿವಾಹವು ಚನ್ನಪಟ್ಟಣದ ಕಲ್ಯಾಣ ಮಂಟಪವೊಂದರಲ್ಲಿ ನಿಗದಿಯಾಗಿತ್ತು. ಅದರಂತೆ ಮಂಗಳವಾರ ರಾತ್ರಿ ಆರತಕ್ಷತೆ ಕಾರ್ಯಕ್ರಮ ಅದ್ದೂರಿಯಾಗಿ ನೇರವೇರಿತ್ತು. ಆರತಕ್ಷತೆಯಲ್ಲಿ ವಧು ಸಂತೋಷದಿಂದಲೇ ಮದುಮಗನೊಂದಿಗೆ ಫೋಟೋಶೂಟ್​  ಮಾಡಿಸಿಕೊಂಡಿದ್ದಳು.

ಬುಧವಾರ ಬೆಳಗ್ಗೆ ಧಾರಾಮುಹೂರ್ತ ಇದ್ದು, ಆರತಕ್ಷತೆ ಮುಗಿದ ಬಳಿಕ ಕುಟುಂಬದ ಎಲ್ಲರೂ ನಿದ್ರೆಗೆ ಜಾರಿದ್ದರು. ಆದರೆ ವಧು ಮಧ್ಯರಾತ್ರಿಯೇ ಪರಾರಿಯಾಗಿದ್ದಾಳೆ. ಆತಂಕಕ್ಕೆ ಒಳಗಾದ ವಧುವಿನ ಕುಟುಂಬಸ್ಥರು ಬುಧವಾರ ಬೆಳಗ್ಗೆಯೇ ಕಲ್ಯಾಣಮಂಟಪ ಖಾಲಿ ಮಾಡಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಿಯಕರನೊಂದಿಗೆ ಮದುಮಗಳು ಪರಾರಿಯಾಗಿದ್ದಾಳೆ ಎಂದು ಮೂಲಗಳು ತಿಳಿಸಿವೆ.

Ads on article

Advertise in articles 1

advertising articles 2

Advertise under the article