-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
Mangaluru: ಪ್ರೀತಿಸಿದಾಕೆಯ ಚಿಕ್ಕಮ್ಮನಿಗೆ ಅಶ್ಲೀಲ ವೀಡಿಯೋ ಕಳುಹಿಸಿ, ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿದ ಆರೋಪಿ ಅಂದರ್

Mangaluru: ಪ್ರೀತಿಸಿದಾಕೆಯ ಚಿಕ್ಕಮ್ಮನಿಗೆ ಅಶ್ಲೀಲ ವೀಡಿಯೋ ಕಳುಹಿಸಿ, ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿದ ಆರೋಪಿ ಅಂದರ್

ಮಂಗಳೂರು: ಪ್ರೀತಿಸುತ್ತಿದ್ದ ಯುವತಿಯನ್ನು ಬಚ್ಚಿಟ್ಟಿರೋದರಿಂದ ಸಿಟ್ಟಿಗೆದ್ದ ಯುವಕನೋರ್ವನು ಪ್ರೇಯಸಿಯ ಚಿಕ್ಕಮ್ಮನ ಮೊಬೈಲ್ ಗೆ ತನ್ನದೇ ಅಶ್ಲೀಲ ವೀಡಿಯೋ ಕಳುಹಿಸಿ, ಕರೆ ಮಾಡಿ ಅಶ್ಲೀಲವಾಗಿ ಸಂಭಾಷಿಸಿ ಮಾನಸಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಮಂಗಳೂರು ಪೊಲೀಸರು ಬಂಧಿಸಿದ್ದಾರೆ. 

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮೂಲದ, ಸದ್ಯ ಬೆಂಗಳೂರು ವಾಸಿ ಸಂತೋಷ್ ಎಂಬಾ ಬಂಧಿತ ಆರೋಪಿ.

ದೂರು ನೀಡಿರುವ ಮಹಿಳೆಯ ಅಕ್ಕನ ಪುತ್ರಿಯನ್ನು ಮೂಡಿಗೆರೆ ಮೂಲದ, ಸದ್ಯ ಬೆಂಗಳೂರಿನಲ್ಲಿ ನಿವಾಸಿ ಆರೋಪಿ ಸಂತೋಷ್ ಪ್ರೀತಿಸುತ್ತಿದ್ದ. ಇದಕ್ಕೆ ಯುವತಿಯ ಮನೆಯವರಿಂದ ವಿರೋಧ ವ್ಯಕ್ತವಾಗಿತ್ತು. ಬಳಿಕ ಇವರಿಬ್ಬರ ಬಾಂಧವ್ಯವನ್ನು ಮುರಿಯಲು ಆಕೆಯನ್ನು ಮಂಗಳೂರಿನಲ್ಲಿರುವ ಚಿಕ್ಕಮ್ಮನ ಮನೆಗೆ ಕಳುಹಿಸಿದ್ದರು. ಆದರೆ, ಸಂತೋಷ್ ಯುವತಿಯ ಮೊಬೈಲ್ ಗೆ ವಾಟ್ಸ್ಆ್ಯಪ್ ಸಂದೇಶ ಕಳುಹಿಸುವುದು ಹಾಗೂ ಕರೆ ಮಾಡಿ ಮಾತನಾಡುವುದನ್ನು ಮುಂದುವರಿಸುತ್ತಲೇ ಇದ್ದ.

ಇದು ತಿಳಿದ ಬಳಿಕ ಚಿಕ್ಕಮ್ಮ, ಯುವತಿಯ ಮೊಬೈಲ್‌ ಸಿಮ್ ಕಾರ್ಡನ್ನು ತೆಗೆದಿಟ್ಟಿದ್ದರು. ಆ ಬಳಿಕ ಆರೋಪಿ ಸಂತೋಷ್, ಹುಡುಗಿಯ ಚಿಕ್ಕಮ್ಮನ ಮೊಬೈಲ್ ಗೆ ನಿರಂತರ ಬೇರೆ ಬೇರೆ ಮೊಬೈಲ್ ಗಳಿಂದ  ಕರೆ ಮಾಡತೊಡಗಿದ್ದಾನೆ. ಇದರಿಂದ ಬೇಸತ್ತ ಮಹಿಳೆ ಸಂತೋಷ್ ಕರೆ ಮಾಡುತ್ತಿದ್ದ ಎಲ್ಲ ನಂಬರ್ ಗಳನ್ನು ಬ್ಲಾಕ್ ಮಾಡಿದ್ದರು. 

ಆದರೆ ಈ ನಡುವೆ, ಸಂತೋಷ್ ಬೇರೊಂದು ಮೊಬೈಲ್ ನಿಂದ ಪ್ರೇಯಸಿಯ ಚಿಕ್ಕಮ್ಮನ ಮೊಬೈಲಿಗೆ ಪುರುಷರ ಗುಪ್ತಾಂಗದ ನಗ್ನ ಚಿತ್ರವನ್ನು ಕಳುಹಿಸಿದ್ದಾನೆ. ಅಲ್ಲದೆ, ತನ್ನದೇ ಅಶ್ಲೀಲ ವೀಡಿಯೋವೊಂದನ್ನು ಕಳುಹಿಸಿದ್ದಾನೆ. ಜೊತೆಗೆ ಮಹಿಳೆಗೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿದ್ದಾನೆ. ಇದರಿಂದ ಮಾನಸಿಕ ಹಿಂಸೆಗೊಳಗಾದ ಮಹಿಳೆ ಮಂಗಳೂರಿನ ಸೈಬರ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದರು. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

Ads on article

Advertise in articles 1

advertising articles 2

Advertise under the article

ಸುರ