-->
ಇತ್ತೀಚೆಗಷ್ಟೇ ಜೈಲಿನಿಂದ ಹೊರ ಬಂದಿರುವ ರಾಜ್ ಕುಂದ್ರಾ ಮೇಲೆ ಮತ್ತೊಂದು ಆರೋಪ: ನಟಿ ಶಿಲ್ಪಾ ಶೆಟ್ಟಿ ಸೇರಿದಂತೆ ಪತಿಯ ವಿರುದ್ಧ ಎಫ್ಐಆರ್ ದಾಖಲು

ಇತ್ತೀಚೆಗಷ್ಟೇ ಜೈಲಿನಿಂದ ಹೊರ ಬಂದಿರುವ ರಾಜ್ ಕುಂದ್ರಾ ಮೇಲೆ ಮತ್ತೊಂದು ಆರೋಪ: ನಟಿ ಶಿಲ್ಪಾ ಶೆಟ್ಟಿ ಸೇರಿದಂತೆ ಪತಿಯ ವಿರುದ್ಧ ಎಫ್ಐಆರ್ ದಾಖಲು

ಮುಂಬೈ: ಇತ್ತೀಚಿಗಷ್ಟೇ ಜೈಲಿನಿಂದ ಹೊರಬಂದಿರುವ ರಾಜ್ ಕುಂದ್ರಾಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಇದೀಗ ವಂಚನೆ ಆರೋಪದಡಿ ರಾಜ್​ ಕುಂದ್ರಾ ಹಾಗೂ ಅವರ ಪತ್ನಿ ಬಾಲಿವುಡ್​​ ನಟಿ ಶಿಲ್ಪಾ ಶೆಟ್ಟಿ  ವಿರುದ್ಧ ನಿತಿನ್​ ಬರೈ ಎಂಬುವರು ಬಾಂದ್ರಾ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಶನಿವಾರ ಎಫ್​ಐಆರ್​ ದಾಖಲಾಗಿದೆ.

ನಿತಿನ್ ಬರೈ ದೂರಿನ ಪ್ರಕಾರ '2014ರ ಜುಲೈನಲ್ಲಿ ಎಸ್​ಎಫ್​ಎಲ್​ ಫಿಟ್​ನೆಸ್​ ಕಂಪೆನಿಯ ನಿರ್ದೇಶಕ ಕಾಶಿಫ್​ ಖಾನ್, ಶಿಲ್ಪಾ ಶೆಟ್ಟಿ, ರಾಜ್​ ಕುಂದ್ರಾ ಹಾಗೂ ಇತರರು ಸೇರಿ ಲಾಭ ಸಿಗುತ್ತದೆ ಎಂಬ ಆಮಿಷವೊಡ್ಡಿ ಕಂಪೆನಿಯಲ್ಲಿ ಬಂಡವಾಳ ಹೂಡುವಂತೆ ನಿತಿನ್​ ರನ್ನು ಒತ್ತಾಯಿಸಿದ್ದರು. ಅದರಂತೆ ಅವರು 1.5 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಿರುವುದಾಗಿ​ ಹೇಳಿಕೊಂಡಿದ್ದಾರೆ. ​

ಅಷ್ಟೇ ಅಲ್ಲದೆ, ಪುಣೆಯ ಸಮೀಪದ ಹದಪ್ಸರ್​ ಮತ್ತು ಕೊರೆಂಗಾವ್​ ಎಂಬಲ್ಲಿ ಸ್ಪಾ ಮತ್ತು ಜಿಮ್​ ತೆರೆಯಲು ಫ್ರಾಂಚೈಸಿಯನ್ನು ಒದಗಿಸುವುದಾಗಿಯೂ ಎಸ್​ಎಫ್​ಎಲ್​ ಕಂಪೆನಿ ಭರವಸೆ ನೀಡಿತ್ತು. ಆದರೆ, ಇವರ ಯಾವ ಮಾತೂ ಕಾರ್ಯರೂಪಕ್ಕೆ ಬಂದಿರಲಿಲ್ಲ. ಆದ್ದರಿಂದ ಹಣ ಹಿಂತಿರುಗಿಸುವಂತೆ ಕೇಳಿದರೂ, ಹಣ ಕೊಡದೆ ಬೆದರಿಕೆ ಹಾಕಲಾಗುತ್ತಿದೆ ಎಂದು ದೂರಿನಲ್ಲಿ ನಿತಿನ್​ ಬರೈ ಉಲ್ಲೇಖಿಸಿದ್ದಾರೆ.

ಆದ್ದರಿಂದ ದೂರಿನ ಆಧಾರದ ಮೇಲೆ ಬಾಂದ್ರಾ ಪೊಲೀಸ್​ ಎಫ್​ಐಆರ್​ ದಾಖಲಿಸಿದ್ದು, ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಈಗಾಗಲೇ ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಜೈಲುಪಾಲಾಗಿ ಜಾಮೀನಿನ ಮೇಲೆ ಹೊರಗಿರುವ ರಾಜ್​ ಕುಂದ್ರಾಗೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ.

Ads on article

Advertise in articles 1

advertising articles 2

Advertise under the article