
ಕಡಬ: ಬೇಟೆಗೆಂದು ಬಂದು ಕೋಳಿಯ ಜೊತೆಗೆ ಬಾವಿಗೆ ಬಿತ್ತು ಚಿರತೆ; ಅರಣ್ಯ ಅಧಿಕಾರಿಗಳಿಂದ ರಕ್ಷಣೆ
11/07/2021 07:41:00 PM
ಕಡಬ: ಕೋಳಿಯನ್ನು ಹಿಡಿಯಲು ಹೋಗಿರುವ ಚಿರತೆಯೊಂದು ಬಾವಿಗೆ ಬಿದ್ದ ಘಟನೆ ಕಡಬದ ಕೊಂಬಾರು ಕಮರ್ಕಜೆಯಲ್ಲಿ ರವಿವಾರ ನಡೆದಿದೆ.
ರಾಮಯ್ಯ ಎಂಬವರ ಮನೆಯ ಬಳಿ ಕೋಳಿ ಹಿಡಿಯುವ ಪ್ರಯತ್ನದಲ್ಲಿದ್ದ ಚಿರತೆಯುವ ಅಚಾನಕ್ಕಾಗಿ ಕೋಳಿಯ ಸಮೇತ ಅವರ ಮನೆಯ ಬಾವಿಗೆ ಬಿದ್ದಿದೆ. ಘಟನೆಯಲ್ಲಿ ಕೋಳಿ ಸಾವನ್ನಪ್ಪಿದೆ. ಆದರೆ ಬಾವಿಗೆ ಬಿದ್ದ ಚಿರತೆಯು ಹೊರ ಬರಲಾರದೆ ಚಡಪಡಿಸುತ್ತಿತ್ತು.
ಸ್ಥಳಕ್ಕೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು, ರಕ್ಷಣಾ ಕಾರ್ಯಾಚರಣೆ ಮಾಡಿ ಚಿರತೆಯನ್ನು ರಕ್ಷಿಸಿದ್ದಾರೆ.
ಕಳೆದ ಕೆಲವು ತಿಂಗಳುಗಳ ಹಿಂದೆ ಈ ಪ್ರದೇಶದಿಂದ ಅನತಿ ದೂರದಲ್ಲಿ ಚಿರತೆಯೊಂದು ರಕ್ಷಣಾ ಕಾರ್ಯದ ಮತ್ತೆ ತಪ್ಪಿಸಿಕೊಂಡು ಓಡಿತ್ತು ಎಂಬುದು ತಿಳಿದುಬಂದಿದೆ.