-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾದ ಮಾಡೆಲ್ ಗಳಿಬ್ಬರು ಪಾರ್ಟಿ ಆಯೋಜಿಸಿದ್ದ ಹೊಟೇಲ್ ಮಾಲಕ ಸಿಸಿ ಕ್ಯಾಮರಾ ಡಿವಿಆರ್ ನೊಂದಿಗೆ ನಾಪತ್ತೆ

ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾದ ಮಾಡೆಲ್ ಗಳಿಬ್ಬರು ಪಾರ್ಟಿ ಆಯೋಜಿಸಿದ್ದ ಹೊಟೇಲ್ ಮಾಲಕ ಸಿಸಿ ಕ್ಯಾಮರಾ ಡಿವಿಆರ್ ನೊಂದಿಗೆ ನಾಪತ್ತೆ

ಕೊಚ್ಚಿ: ಕೇರಳದ ಮಾಡೆಲ್​ಗಳಿಬ್ಬರ ಜೀವವನ್ನು ಕಸಿದಿರುವ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಇದೀಗ ಅಪಘಾತಕ್ಕೂ ಮೊದಲು ಹೋಟೆಲೊಂದರಲ್ಲಿ ನಡೆದಿದೆ ಎನ್ನಲಾದ ಡಿಜೆ ಪಾರ್ಟಿಗೆ ಸಂಬಂಧಿಸಿದ ಸಿಸಿ ಕ್ಯಾಮರಾ ಡಿಜಿಟಲ್​ ವೀಡಿಯೋ ರೆಕಾರ್ಡರ್​ (ಡಿವಿಆರ್​) ಅನ್ನು ಪೊಲೀಸರು ಪತ್ತೆ ಹಚ್ಚ. 

ಡಿಜೆ ಪಾರ್ಟಿಯು ಪೋರ್ಟ್​ ಕೊಚ್ಚಿಯ ಹೋಟೆಲೊಂದರ ರೂಂ.  ನಂಬರ್​ 18ರಲ್ಲಿ ನಡೆದಿತ್ತು. ಈ ಪಾರ್ಟಿಯಲ್ಲಿ ಮಿಸ್​ ಕೇರಳ ವಿಜೇತರಾಗಿದ್ದ ಮಾಡೆಲ್​ಗಳಿಬ್ಬರು ಕೂಡ ಭಾಗವಹಿಸಿದ್ದರು. ಪಾರ್ಟಿ ಬಳಿಕ ಸಂಭವಿಸಿದ ರಸ್ತೆ ಅಪಘಾತದಲ್ಲಿ ಈ  ಇಬ್ಬರೂ ಮಾಡೆಲ್ ಗಳು ದುರಂತಕ್ಕೀಡಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. 

ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಅಪಘಾತಕ್ಕೆ ಮೊದಲು ಅವರು ಪಾರ್ಟಿ ಮಾಡಿರುವ ಹೋಟೆಲ್​ ಮೇಲೆ ದಾಳಿ ಮಾಡಿದಾಗ ಸಿಸಿ ವಿವಿ ಕ್ಯಾಮೆರಾ ವೀಡಿಯೋ ಲಭ್ಯವಾಗಿರಲಿಲ್ಲ. ಸಿಸಿಟಿವಿ ದೃಶ್ಯಗಳಿರುವ ಡಿವಿಆರ್​ ಅನ್ನು ಹೋಟೆಲ್​ ಮಾಲಕ ತೆಗೆದುಕೊಂಡು ಹೋಗಿದ್ದಾರೆಂಬ ಮಾಹಿತಿಯನ್ನು ಹೊಟೇಲ್ ಸಿಬ್ಬಂದಿ ಪೊಲೀಸರಿಗೆ ನೀಡಿದ್ದಾರೆ.  

ಇನ್ನು ಅಪಘಾತ ನಡೆದ ಸ್ಥಳದ ಬಳಿ ವಶಪಡಿಸಿಕೊಂಡ ಸಿಸಿ ಕ್ಯಾಮರಾ ದೃಶ್ಯದಲ್ಲಿ ಮೃತ ಅನ್ಸಿ ಕಬೀರ್​ ಹಾಗೂ ಅಂಜನಾ ಶಾಜನ್ ಸಂಚಾರ ಮಾಡಿರುವ ಕಾರನ್ನು ಮತ್ತೊಂದು ಕಾರು ಚೇಸ್​ ಮಾಡಿರುವುದು ಪೊಲೀಸರಿಗೆ ತಿಳಿದು ಬಂದಿದೆ. ಬಳಿಕ ಚೇಸ್​ ಮಾಡಿರುವ ಕಾರನ್ನು ಪತ್ತೆ ಹಚ್ಚಿ, ಅಂದು ಆ ಕಾರಿನಲ್ಲಿದ್ದವರನ್ನು ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭ ಅನ್ಸಿ ಹಾಗೂ ಆಕೆಯ ಸ್ನೇಹಿತರು ತುಂಬಾ ಕುಡಿದಿದ್ದರು. ಅದಕ್ಕೆ ಅವರಿಗೆ ಎಚ್ಚರಿಕೆ ನೀಡಲು ಹಿಂಬಾಲಿಸಿದೆವು ಎಂಬ ಉತ್ತರ ಬಂದಿದೆ. ಆದಾಗ್ಯೂ ಕಾರನ್ನು ಚೇಸ್​ ಮಾಡಿದವರು ಅದೇ ಪಾರ್ಟಿಯಲ್ಲಿ ಭಾಗವಹಿಸಿದ್ದವರೇ?. ಅದೇ ರೀತಿ ಅನ್ಸಿ ಹಾಗೂ ಆಕೆಯ ಸ್ನೇಹಿತರ ಮಧ್ಯೆ ಏನಾದರೂ ಜಗಳ ನಡೆದಿದೆಯಾ ಎಂಬ ಆಯಾಮದಲ್ಲಿಯೂ ತನಿಖೆ ನಡೆಯುತ್ತಿದೆ. 

ಬಾರ್​ ಹಾಗೂ ಇತರ ಪ್ರದೇಶಗಳ ಸಿಸಿಟಿವಿ ಫೂಟೇಜ್ ಗಳನ್ನು ಪೊಲೀಸರು ಈಗಾಗಲೇ ಸಂಗ್ರಹಿಸಿದ್ದಾರೆ. ಆದರೆ, ಇದೀಗ ಹೋಟೆಲ್​ ಮಾಲಕನ ಮೇಲೆ ಅನುಮಾನ ದಟ್ಟವಾಗಿದೆ. ಆತ, ಡಿಜೆ ಪಾರ್ಟಿಯ ಸಿಸಿಟಿವಿ ಡಿವಿಆರ್​ ಅನ್ನು ಮುಚ್ಚಿಟ್ಟಿದ್ದಾನೆ. ಅದರಲ್ಲೂ ಪಾರ್ಟಿ ಹಾಲ್​ ಮತ್ತು ಪಾರ್ಕಿಂಗ್​ ಹಾಲ್​ ವೀಡಿಯೋ ತುಣುಕುಗಳೇ ಪ್ರಮುಖವಾಗಿ ನಾಪತ್ತೆಯಾಗಿದೆ. ಪಾರ್ಟಿ ಮುಗಿದ ತಕ್ಷಣವೇ ಅನ್ಸಿ ಹಾಗೂ ಆಕೆಯ ಸ್ನೇಹಿತರು ಅಲ್ಲಿಂದ  ಹೊರಟು ಹೋಗಿದ್ದಾರೆ.

ಇದುವರೆಗೂ ಎರಡು ಬಾರಿ ಹೊಟೇಲ್​ನಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆದರೆ, ಡಿವಿಆರ್​ ಪತ್ತೆಯಾಗಿಲ್ಲ. ಹೀಗಾಗಿ ಪ್ರಕರಣದಲ್ಲಿ ಹೋಟೆಲ್​ ಮಾಲಕನ ಪಾತ್ರ ಇರಬಹುದೇ ಎಂದು ಸಂಶಯ ವ್ಯಕ್ತವಾಗುತ್ತಿದೆ. ಆತನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಲಿದ್ದಾರೆ. 

ಪಾರ್ಟಿ ಮುಗಿಸಿಕೊಂಡು ಅನ್ಸಿ ಕಬೀರ್​, ಅಂಜನಾ ಶಾಜನ್​, ಆಶಿಕ್​ ಮತ್ತು ಅಬ್ದುಲ್​ ರೆಹಮಾನ್ ಅಕ್ಟೋಬರ್​ 31ರಂದು​ ಮನೆಗೆ ಬರುತ್ತಿದ್ದರು. ಈ ವೇಳೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಿಸ್​ ಕೇರಳ ವಿಜೇತರಾದ ಅನ್ಸಿ ಕಬೀರ್​ ಮತ್ತು ಅಂಜನಾ ಶಾಜನ್​ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಆಶಿಕ್​ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಕಾರು ಚಾಲನೆ ಮಾಡುತ್ತಿದ್ದ ಅಬ್ದುಲ್​ ರೆಹಮಾನ್​ನನ್ನು ಮೊನ್ನೆಯಷ್ಟೇ ಪೊಲೀಸರು ಬಂಧಿಸಿದ್ದಾರೆ. ಕುಡಿದ ಅಮಲಿನಲ್ಲಿ ಕಾರು ಸಂಚಾರ ಮಾಡುತ್ತಿದ್ದರಿಂದಲೇ ಅವಘಡ ಸಂಭವಿಸಿದೆ ಎನ್ನಲಾಗಿದೆ. ಹೀಗಾಗಿ ರೆಹಮಾನ್​ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Ads on article

Advertise in articles 1

advertising articles 2

Advertise under the article

ಸುರ