ಆಳ್ವಾಸ್ ನೂತನ ಜಿಲ್ಲಾ ಕ.ಸಾ.ಪ. ಅಧ್ಯಕ್ಷರ ಭೇಟಿ
ಮೂಡುಬಿದಿರೆ: ಕನ್ನಡ ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಡಾ ಎಂ ಪಿ ಶ್ರೀನಾಥ್ ಗುರುವಾರ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ ಎಂ ಮೋಹನ್ ಆಳ್ವವರನ್ನು ಭೇಟಿ ಮಾಡಿದರು.
ಸುಮಾರು ಎರಡು ಗಂಟೆಗಳ ಕಾಲ ಮಾತುಕತೆ ನಡೆಸಿದ ಅವರು, ಕಸಾಪದ ಮೂಲಕ ಕನ್ನಡವನ್ನು ಸಮೃದ್ಧಿಗೊಳಿಸುವ ಬಗೆಗೆ ಚರ್ಚಿಸಿ, ಡಾ. ಮೋಹನ ಆಳ್ವ ಅವರಿಂದ ಮಹತ್ವದ ಸಲಹೆ ಸೂಚನೆಗಳನ್ನು ಪಡೆದುಕೊಂಡರು.
ಭೇಟಿಯ ಮುನ್ನ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳ ಜೊತೆ ಕೆಲವು ಹೊತ್ತು ಸಂವಾದ ನಡೆಸಿದರು.

 
 
 
 
 
 
 
 
 
 
 
 
 
 
 
 
 
 
