ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

ಉಡುಪಿಯಲ್ಲಿ ವಿಷ ಜಂತು ಕಡಿದು 26 ವರ್ಷದ ಯುವಕ ಸಾವು- ದೀಪಾವಳಿ ಬಲೀಂದ್ರ ಪೂಜೆ ವೇಳೆ ನಡೆದಿದ್ದ ಘಟನೆ


ಉಡುಪಿ : 26 ವರ್ಷದ  ಯುವಕನಿಗೆ ವಿಷ ಜಂತು ಕಡಿದ ಪರಿಣಾಮ ಆತ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಕಾಪುವಿನಲ್ಲಿ ನಡೆದಿದೆ.

ಕಾಪು ಕಲ್ಯ ನಿವಾಸಿ ರೋಹಿತ್ ಕುಮಾರ್ (26) ಸಾವನ್ನಪ್ಪಿದ ಯುವಕ.

ದೀಪಾವಳಿಯ ಬಲೀಂದ್ರ ಪೂಜೆಯ ಪ್ರಯುಕ್ತ  ರೋಹಿತ್ ಕುಮಾರ್ ಮತ್ತು ಅವರ ಸಹೋದರರು ಗದ್ದೆಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಗದ್ದೆಯಲ್ಲಿ ರೋಹಿತ್ ಅವರಿಗೆ ವಿಷ ಜಂತು ಕಡಿದಿದ್ದು , ಮನೆಯವರು   ಅವರನ್ನು ನಾಟಿ ವೈದ್ಯರ ಬಳಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದರು.

ನಾಟಿ ಚಿಕಿತ್ಸೆಯಿಂದ ರೋಹಿತ್ ಚೇತರಿಸಿಕೊಂಡಿದ್ದರು. ಆದರೆ ರೋಹಿತ್ ಅವರು ಶುಕ್ರವಾರ ಸಂಜೆ ತೀವ್ರ ಅಸ್ವಸ್ಥಗೊಂಡಿದ್ದರು.  ತಕ್ಷಣ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ