ಬಹುಭಾಷಾ ನಟಿ ಸ್ನೇಹಾಗೆ ಉದ್ಯಮಿಗಳಿಬ್ಬರಿಂದ 26 ಲಕ್ಷ ರೂ. ವಂಚನೆ: ಠಾಣೆಯ ಮೆಟ್ಟಿಲೇರಿದ ಪ್ರಕರಣ !

ಚೆನ್ನೈ: ಬಹುಭಾಷಾ ನಟಿ ಸ್ನೇಹಾ ತಮಗೆ ಇಬ್ಬರು ಉದ್ಯಮಿಗಳಿಂದ ಹಣ ವಂಚನೆ ಆಗಿದೆಯೆಂದು ನ್ಯಾಯ ದೊರಕಿಸಿಕೊಡಬೇಕೆಂದು​ ಠಾಣೆಯ​ ಮೆಟ್ಟಿಲೇರಿದ್ದಾರೆ.

ಈ ಇಬ್ಬರು ಉದ್ಯಮಿಗಳು ರಫ್ತು ಕಂಪೆನಿಯನ್ನು ನಡೆಸುತ್ತಿದ್ದರು. ಇವರಿಬ್ಬರೂ ತಮ್ಮ ಕಂಪೆನಿಯಲ್ಲಿ ಬಂಡವಾಳ ಹೂಡಿದಲ್ಲಿ ಉತ್ತಮ ಲಾಭ ಪಡೆಯಬಹುದೆಂದು ನಟಿ ಸ್ನೇಹಾ ಅವರ ಮನವೊಲಿಸಿದ್ದರು‌. ಉದ್ಯಮಿಗಳ ಮಾತನ್ನು ನಂಬಿದ ನಟಿ ಸ್ನೇಹಾ ಅವರ ಕಂಪೆನಿಯಲ್ಲಿ ಬರೋಬ್ಬರಿ 26 ಲಕ್ಷ ರೂ. ಹಣ ಹೂಡಿಕೆ ಮಾಡಿದ್ದರು. ಆದರೆ, ಉದ್ಯಮಿಗಳಿಂದ ನಟಿ ಸ್ನೇಹಾ ಅವರಿಗೆ ಯಾವುದೇ ಲಾಭಾಂಶದ ಹಣ ದೊರಕಿರಲೇ ಇಲ್ಲ. ಈ ಬಗ್ಗೆ ಅವರಲ್ಲಿ ಮಾತನಾಡಿದಾಗ ಹಣ ಕೊಡಲು ನಿರಾಕರಿಸಿರುವ ಉದ್ಯಮಿಗಳು ಸ್ನೇಹಾ ಅವರಿಗೆ ಬೆದರಿಕೆ ಹಾಕಿದ್ದಾರೆಂದು ಆರೋಪ ಮಾಡಿದ್ದಾರೆ. ಪರಿಣಾಮ ಸ್ನೇಹಾ, ಉದ್ಯಮಿಗಳ ವಿರುದ್ಧ ಚೆನ್ನೈನ ಕಣಥೋರ್​ ಪೊಲೀಸ್ ಠಾಣೆಯಲ್ಲಿ​ ದೂರು ದಾಖಲಿಸಿದ್ದು, ತನಿಖೆ ಆರಂಭವಾಗಿದೆ. 

ಇನ್ನು  ನಟಿ ಸ್ನೇಹಾ ಅವರ ಸಿನಿಮಾ ವಿಚಾರಕ್ಕೆ ಬಂದರೆ, ಕೊನೆಯದಾಗಿ ಅವರು ತೆಲುಗಿನ ರಾಮ್ ಚರಣ್ ಅಭಿನಯದ ‘ವಿನಯ ವಿಧೇಯ ರಾಮ’ದಲ್ಲಿ ಕಾಣಿಸಿಕೊಂಡರು. ಸದ್ಯ ಅವರು ‘ಶಾಟ್ ಬೂಟ್ 3’ ಎಂಬ ತಮಿಳು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.