ಚಿಕಾಗೋ: ಅಪಾರ್ಟ್ಮೆಂಟ್ವೊಂದರ 17ನೇ ಮಹಡಿಯ ಕಿಟಕಿಯಿಂದ ಬಿದ್ದು ಮೂರು ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಚಿಕಾಗೊದಲ್ಲಿ ನಡೆದಿದೆ.
ಲಾಮರ್ ರೋಚ್ ಜೂನಿಯರ್ ಮೃತಪಟ್ಟ ಬಾಲಕ. 
ಲಾಮರ್ ರೋಚ್ ತನ್ನ ಮನೆಯ ಕಿಟಕಿಗೆ ಹಾಕಿರುವ ಪರದೆಯನ್ನು ಹೊರಗೆ ತಳ್ಳಿ ಆಟವಾಡುತ್ತಿದ್ದ. ಈ ಸಂದರ್ಭದಲ್ಲಿ ಆತ ಅಚಾನಕ್ಕಾಗಿ 17ನೇ ಮಹಡಿಯಿಂದ ಬಿದ್ದಿದ್ದಾನೆ. ತಕ್ಷಣ ಬಾಲಕನನ್ನು ಮಕ್ಕಳ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ  ಚಿಕಿತ್ಸೆ ಫಲಕಾರಿಯಾಗದೆ ಲಾಮರ್ ರೋಚ್ ಮೃತಪಟ್ಟಿದ್ದಾನೆ ಎಂದು ಚಿಕಾಗೋ ಪೊಲೀಸರು ತಿಳಿಸಿದ್ದಾರೆ.
ಬಾಲಕನ ಸಾವಿನ ಕುರಿತು ಚಿಕಾಗೋ ಪೊಲೀಸರು ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
 
   
 
 
 
 
 
 
 
 
 
 
 
 
 
 
 
 
