
ಸುರತ್ಕಲ್ ನ ಎರಡು ಕಡೆ ಉಲಯಿ ಪಿದಯಿ- 15 ಮಂದಿ ವಶಕ್ಕೆ
11/05/2021 08:34:00 AM
ಮಂಗಳೂರು; ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಎರಡು ಕಡೆ ಉಲಯಿ ಪಿದಯಿ ಎಂದು ಇಸ್ಪೀಡ್ ಆಟವಾಡುತ್ತಿದ್ದ ಪ್ರದೇಶಕ್ಕೆ ದಾಳಿ ಮಾಡಿದ ಪೊಲೀಸರು 15 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ನವೆಂಬರ್ 4 ರಂದು ಸುರತ್ಕಲ್ ಠಾಣಾ ಪಿ ಎಸ್ ಐ ಪುನೀತ್ ಎಂ ಗಾಂವ್ಕರ್ ಇವರು ಠಾಣಾ ಪಿಸಿ ಮಂಜಿನಾಥ ಇವರಿಗೆ ದೊರೆತ ಮಾಹಿತಿ ಮೇರೆಗೆ ಠಾಣಾ ಸಿಬ್ಬಂದಿಗಳ ಜೊತೆಯಲ್ಲಿ ರಾತ್ರಿ 10-30 ಗಂಟೆಗೆ ಕಾಟಿಪಳ್ಳ ಗ್ರಾಮದ ಕಾಟಿಪಳ್ಳ 2 ನೇಯ ಬ್ಲಾಕ್ ದ .ಕ ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆಯ ಎದುರಿನ ಮೈದಾನದ ಪಶ್ಚಿಮ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕ್ಯಾಂಡೆಲ್ ಮತ್ತು ಅಲ್ಲಿನ ವಿದ್ಯುತ್ ದೀಪದ ಬೆಳಕಿನ ಸಹಾಯದಿಂದ ನೆಲದ ಮೇಲೆ ಬೆಡ್ ಸೀಟ್ ನ್ನು ಹಾಸಿ ನಡೆಯುತ್ತಿದ್ದ ಇಸ್ಪೀಟ್ ಅಡ್ಡೆಗೆ ದಾಳಿ ನಡೆಸಿದ್ದಾರೆ.
10 ಮಂದಿ ಸುತ್ತುವರಿದು ಕುಳಿತು ಓರ್ವ ವ್ಯಕ್ತಿಯು ತನ್ನ ಕೈಯಲ್ಲಿ ಇಸ್ಪೀಟ್ ಎಲೆಗಳನ್ನು ಒಂದೊಂದು ಹಾಸಿದ್ದ ಬೆಡ್ ಸೀಟ್ ಮೇಲೆ ಹಾಕುತ್ತಿದ್ದು ಇವರುಗಳು ಹಣವನ್ನು ಪಣವಾಗಿರಿಸಿ ಇಸ್ಪೀಟ್ ಎಲೆಗಳ ಸಹಾಯದಿಂದ ಜೂಜಾಟ ಆಡುತ್ತಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ದಾಳಿ ನಡೆಸಿ 10 ಮಂದಿಯನ್ನು ( 1)ಮಲ್ಲಪ್ಪ 2)ಮಂಜುನಾಥ 3)ಮರಿಯಪ್ಪ 4)ವಸಂತ 5)ಮಂಜು 6)ದೇವರಾಜ್ 7)ಸತೀಶ್ 8)ಸಲ್ಮಾನ್ 9) ಸೋಮಣ್ಣ 10)ರಾಜಾಸಾಬ ) ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳ ವಶದಲ್ಲಿದ್ದ ಇಸ್ಪೀಟ್ ಆಟಕ್ಕೆ ಉಪಯೋಗಿಸಿದ ಇಸ್ಪೀಟ್ ಎಲೆಗಳು-52, ನಗದು ರೂ 6300/- , ಕ್ಯಾಂಡಲ್ ಹಾಗೂ ನೆಲಕ್ಕೆ ಹಾಸಿದ ಬೇಡ್ ಶೀಟ್ ವಶಕ್ಕೆ ಪಡೆದುಕೊಂಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ನವೆಂಬರ್5 ರಂದು ಮಧ್ಯಾಹ್ನ 14:45 ಗಂಟೆಗೆ ಹೋಯ್ಸಳ ಕರ್ತವ್ಯದಲ್ಲಿದ್ದ ಹೆಚ್.ಸಿ ಅಜೀತ್ ಮ್ಯಾಥ್ಯೂ ಇವರಿಗೆ ಸುರತ್ಕಲ್ ನ ತಡಂಬೈಲ್ ಎಂಬಲ್ಲಿ ಅಬ್ದುಲ್ ಭಾಸ್ಮೀತ್ ಇವರ ಬೀಗ ಹಾಕಿರುವ ಮನೆಯ ಬಳಿಯ ಇಸ್ಪೀಟು ಜೂಜಾಟ ಆಡುತ್ತಿರುವ ಮಾಹಿತಿ ಬಂದಿದೆ.
ಅದರಂತೆ ಸುರತ್ಕಲ್ ಗ್ರಾಮದ ಸುರತ್ಕಲ್ ನ ಪುರಾತನ ಮಾರಿಗುಡಿ ಬಳಿಯ ನಾಗೇಶ್ ಪೈ ಇವರ ಅಂಗಡಿ ಬಳಿ ಅಬ್ದುಲ್ ಬಸೀಲ್ ಇವರ ಮನೆಯ ಬಳಿಗೆ ಬಂದು ಮನೆಯ ದಕ್ಷಿಣ ಬದಿಯ ಖಾಲಿ ಸ್ಥಳದಲ್ಲಿ ನೆಲದ ಮೇಲೆ ಹಳೆಯ ನ್ಯೂಸ್ ಪೇಪರ್ ನ್ನು ಹಾಸಿ ಅದರ ಸುತ್ತ 4-5 ಮಂದಿ ಸುತ್ತುವರಿದು ಕುಳಿತ್ತು ಓರ್ವ ವ್ಯಕ್ತಿಯು ತನ್ನ ಕೈಯಲ್ಲಿ ಇಸ್ವೀಟ್ ಎಲೆಗಳನ್ನು ಒಂದೊಂದು ಹಾಸಿದ್ದ ಬೆಡ್ ಶೀಟ್ ಮೇಲೆ ಹಾಕುತ್ತಾ “ಒಳಗೆ-ಹೊರಗೆ” ಎಂಬುದಾಗಿ ಹೇಳುತ್ತಾ ಜೂಜಾಟವಾಡುತ್ತಿದ್ದರು.
ಇದರ ಸುತ್ತುವರಿದು ಕುಳಿತಿದ್ದ ವ್ಯಕ್ತಿಗಳು ರೂಪಾಯಿ 100 ಒಳಗೆ ಮತ್ತೆ ಕೆಲವರು ರೂಪಾಯಿ 50 ಹೊರಗೆ ಅಂತ ಹೇಳುತ್ತಾ ತಮ್ಮ ಕೈಯಲ್ಲಿದ್ದ ಹಣವನ್ನು ಮಧ್ಯದಲ್ಲಿ ಹಾಕುತಿದ್ದು ಇವರುಗಳು ಹಣವನ್ನು ಪಣವಾಗಿರಿಸಿ ಇಸ್ಪಿಟ್ ಎಲೆಗಳ ಸಹಾಯದಿಂದ ಜೂಜಾಟ ಆಡುತ್ತಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ದಾಳಿ ನಡೆಸಿದ ಪೊಲೀಸರು ಶರಣ್, ಶರಣಪ್ಪ ಶೇಖಬ್ಬ, ಮಾರುತಿ ಮತ್ತು ಬೀರಪ್ಪ ಎಂಬವರನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ವಶದಲ್ಲಿ ಇಸ್ಫೀಟ್ ಆಟಕ್ಕೆ ಉಪಯೋಗಿಸಿದ ಇಸ್ವೀಟ್ ಎಲೆಗಳು-52, ನಗದು ರೂ, 2,900/ ನ್ನು ವಶಪಡಿಸಿಕೊಂಡಿದ್ದಾರೆ.