-->
ಬಸ್ ಮತ್ತು ಟ್ರಕ್ ಮಧ್ಯೆ ಭೀಕರ ಅಪಘಾತ- ಹೊತ್ತಿ ಉರಿದ ಬಸ್ - 12 ಮಂದಿ ಸಾವು

ಬಸ್ ಮತ್ತು ಟ್ರಕ್ ಮಧ್ಯೆ ಭೀಕರ ಅಪಘಾತ- ಹೊತ್ತಿ ಉರಿದ ಬಸ್ - 12 ಮಂದಿ ಸಾವು


ರಾಜಸ್ಥಾನ: Barmer-Jodhpur national highway ಯಲ್ಲಿ ಬಸ್​ ಮತ್ತು ಟ್ರಕ್​ ಮಧ್ಯೆ ನಡೆದ ಭೀಕರ  ಅಪಘಾತದಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ.

ಅಪಘಾತದ ತೀವ್ರತೆಗೆ ಬಸ್​ ಹೊತ್ತಿ ಉರಿದು ಹೋಗಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ಖಾಸಗಿ ವಾಹನಗಳ ಮೂಲಕ ನಗರದ ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಬಸ್​ಗೆ ಹೊತ್ತಿ ಉರಿದ ಪರಿಣಾಮ  ಬೆಂಕಿಯನ್ನು ನಂದಿಸಲು ಅಲ್ಲಿ ನೆರೆದಿದ್ದ ಜನರು ಹರಸಾಹಸಪಟ್ಟಿದ್ದಾರೆ. 

ಬಸ್ ಬಲೋತ್ರಾದಿಂದ ಹೊರಟಿದ್ದು ಇದರಲ್ಲಿ 25 ಮಂದಿ ಪ್ರಯಾಣಿಸುತ್ತಿದ್ದರು. ಹೆದ್ದಾರಿಯಲ್ಲಿ ಬಸ್ ಹೋಗುತ್ತಿದ್ದ ವೇಳೆ ಟ್ರಕ್​ ಬಸ್​ ಎದುರಿನಿಂದ ಬಂದು ಡಿಕ್ಕಿ ಹೊಡೆದಿದೆ. ಈ ವೇಳೆ ಬಸ್​ಗೆ ಬೆಂಕಿ ಹತ್ತಿಕೊಂಡಿದೆ.   ಇಡೀ ಬಸ್​ಗೆ ಬೆಂಕಿ ಆವರಿಸಿಕೊಂಡು ಬಸ್ ನಲ್ಲಿದ್ದ 12 ಮಂದಿ ಸಾವನ್ನಪ್ಪಿದ್ದಾರೆ.

 

Ads on article

Advertise in articles 1

advertising articles 2

Advertise under the article