ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ 'ಅಣ್ಣಾತ್ತೆ' ಸಿನಿಮಾ ಇಂದು ರಿಲೀಸ್: ಅಭಿಮಾನಿಯಿಂದ ಸಿನಿಮಾ ಯಶಸ್ಸಾಗಲು 1 ರೂ.ಗೆ ದೋಸೆ ಮಾರಾಟ

ಚೆನ್ನೈ: ಹೆಚ್ಚಿನ ಸಿನಿಮಾ ಸ್ಟಾರ್ ಗಳಿಗೆ ಸಾಕಷ್ಟು ಅಭಿಮಾನಿಗಳಿರುತ್ತಾರೆ. ಕೆಲವರು ತಮ್ಮ ನೆಚ್ಚಿನ ನಟ - ನಟಿಯರ ಅಭಿಮಾನದ ದ್ಯೋತಕವಾಗಿ ಏನೇನೋ ಮಾಡಲು ಸಿದ್ಧರಿರುತ್ತಾರೆ. 

ಇಲ್ಲೊಬ್ಬ ತಿರುಚ್ಚಿಯ ರಜನಿಕಾಂತ್ ಕಟ್ಟಾ ಅಭಿಮಾನಿ, ಹೊಟೇಲ್ ಮಾಲಕನೋರ್ವರು ಇಂದು ರಿಲೀಸ್ ಆಗಿರುವ ರಜನಿಕಾಂತ್ ಸಿನಿಮಾ  ‘ಅಣ್ಣಾತ್ತೆ’ ಸಿನಿಮಾ ಯಶಸ್ಸಾಗಲೆಂದು ತನ್ನ ಹೊಟೇಲ್ ಗೆ ಬಂದವರಿಗೆ 1 ರೂ.ಗೆ ದೋಸೆ ಮಾರುತ್ತಿದ್ದಾರೆ.

ದೀಪಾವಳಿಯ ದಿನವೇ ಇಙದು ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯಿಸಿರುವ ‘ಅಣ್ಣಾತ್ತೆ’ ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಿದೆ. ಈ ಹಿನ್ನೆಲೆಯಲ್ಲಿ ತಿರುಚ್ಚಿಯ ರಜನಿಕಾಂತ್ ಕಟ್ಟಾ ಅಭಿಮಾನಿಯಾಗಿರುವ ಹೊಟೇಲ್ ಮಾಲಕ ಕರ್ಣನ್ ಎನ್ನುವವರು ಇಂದು ತಮ್ಮ ಹೊಟೇಲ್ ಗೆ ಬಂದವರಿಗೆ 1 ರೂ.ಗೆ ದೋಸೆ ವಿತರಿಸುತ್ತಿದ್ದಾರೆ. “ಜನರು ಹೆಚ್ಚಿನ ಸಂಖ್ಯೆಯಲ್ಲಿ ಅಣ್ಣಾತ್ತೆ ಸಿನಿಮಾ ನೋಡಲು ಥಿಯೇಟರ್ ಗೆ ಆಗಮಿಸಲಿ. ಅಲ್ಲದೆ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಲಿ ಎಂದು ನಾನು ಬಯಸುತ್ತೇನೆ” ಎಂದು ಕರ್ಣನ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

'ಅಣ್ಣಾತ್ತೆ' ತಮಿಳು ಭಾಷೆಯ ಆಕ್ಷನ್ ಡ್ರಾಮಾ ಸಿನಿಮಾ ಆಗಿದೆ.‌‌ ಈ ಸಿನಿಮಾ ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಕಲಾನಿಧಿ ಮಾರನ್ ನಿರ್ಮಿಸಿದ್ದು, ಶಿವ ನಿರ್ದೇಶಿಸಿದ್ದಾರೆ. ಸಿನಿಮಾದಲ್ಲಿ ರಜನಿಕಾಂತ್ ರೊಂದಿಗೆ ಮೀನಾ, ಖುಷ್ಬು, ನಯನತಾರಾ ಮತ್ತು ಕೀರ್ತಿ ಸುರೇಶ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಅಣ್ಣಾತ್ತೆ ಸಿನಿಮಾ ಯುಎಸ್‌ನಲ್ಲಿ 677 ಸ್ಕ್ರೀನ್‌ಗಳಲ್ಲಿ, ಯುಎಇ ಯಲ್ಲಿ 117, ಮಲೇಷ್ಯಾದಲ್ಲಿ 110, ಶ್ರೀಲಂಕಾದಲ್ಲಿ 86, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ 85, ಯುರೋಪ್‌ನಾದ್ಯಂತ 43, ಯುಕೆಯಲ್ಲಿ 35 ಸ್ಕ್ರೀನ್‌ಗಳಲ್ಲಿ ಪ್ರೀಮಿಯರ್ ಆಗಲಿದೆ. ಸಿಂಗಾಪುರದಲ್ಲಿ 23 ಮತ್ತು ಕೆನಡಾದಲ್ಲಿ 17 ಸ್ಕ್ರೀನ್ ಗಳಲ್ಲಿ ಪ್ರದರ್ಶನಗೊಳ್ಳಲಿದೆ. ತೆಲುಗಿನಲ್ಲೂ 'ಅಣ್ಣಾತ್ತೆ' ಸಿನಿಮಾ ತೆಲುಗಿನಲ್ಲೂ ‘ಪೆದ್ದಣ್ಣ’ ಎಂಬ ಟೈಟಲ್ ನೊಂದಿಗೆ ಬಿಡುಗಡೆಯಾಗಲಿದೆ.
BREAKING NEWS
Loading latest news...
Join our WhatsApp Channel Powered By : Online Pudu