-->

Job: 150 Typist post in High Court of Karnataka- ನ್ಯಾಯಾಂಗ ಇಲಾಖೆಯಲ್ಲಿ ಟೈಪಿಸ್ಟ್ ಹುದ್ದೆ: 150 ಹುದ್ದೆಗೆ ನೇರ ನೇಮಕಾತಿ ನೇಮಕಾತಿ

Job: 150 Typist post in High Court of Karnataka- ನ್ಯಾಯಾಂಗ ಇಲಾಖೆಯಲ್ಲಿ ಟೈಪಿಸ್ಟ್ ಹುದ್ದೆ: 150 ಹುದ್ದೆಗೆ ನೇರ ನೇಮಕಾತಿ ನೇಮಕಾತಿ

ನ್ಯಾಯಾಂಗ ಇಲಾಖೆಯಲ್ಲಿ ಟೈಪಿಸ್ಟ್ ಹುದ್ದೆ: 150 ಹುದ್ದೆಗೆ ನೇರ ನೇಮಕಾತಿ ನೇಮಕಾತಿ





ಪದವೀಧರರಿಗೆ ನ್ಯಾಯಾಂಗ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅಪೂರ್ವ ಅವಕಾಶ ಒದಗಿಬಂದಿದೆ. ರಾಜ್ಯ ಹೈಕೋರ್ಟ್ 27-11-2021ರಂದು ಅಧಿಸೂಚನೆ ಹೊರಡಿಸಿದ್ದು, 150 ಟೈಪಿಸ್ಟ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ.



ಆಸಕ್ತರು ಈ ಕೆಳಗಿನ ಲಿಂಕ್ ಮೂಲಕ ಟೈಪಿಸ್ಟ್ ಹುದ್ದೆಗೆ ಅರ್ಜಿ ಸಲ್ಲಿಸಬಹುದು.


ಕನಿಷ್ಟ ವಿದ್ಯಾರ್ಹತೆ:



ಟೈಪಿಸ್ಟ್ ಹುದ್ದೆಗೆ ನೇಮಕಾತಿ ಬಯಸುವ ಅಭ್ಯರ್ಥಿಗಳು ಕನಿಷ್ಟ ಸೈನ್ಸ್, ಆರ್ಟ್ಸ್, ಕಾಮರ್ಸ್, ಬಿಸಿನೆಸ್ ಮ್ಯಾನೇಜ್‌ಮೆಂಟ್ ಯಾ ಕಂಪ್ಯೂಟರ್ ಅಪ್ಲಿಕೇಷನ್ ವಿಷಯದಲ್ಲಿ ಪದವಿ ಪಡೆದಿರಬೇಕು. (ಅಂಗೀಕೃತ ವಿವಿಯಿಂದ)



ಕನ್ನಡ ಮತ್ತು ಇಂಗ್ಲಿಷ್ ವಿಷಯದಲ್ಲಿ ಸೀನಿಯರ್ ಗ್ರೇಡ್ ಟೈಪಿಂಗ್ ಪರೀಕ್ಷೆಯಲ್ಲಿ ಪಾಸ್ ಅಗಿರಬೇಕು. ಕಂಪ್ಯೂಟರ್ ಜ್ಞಾನ ಇರಬೇಕು. (ಕಂಪ್ಯೂಟರ್ ಜ್ಞಾನ ಎಂದರೆ, ಕಂಪ್ಯೂಟರ್ ಶಿಕ್ಷಣ ನೀಡುವ ಸಂಸ್ಥೆಯಿಂದ ಯಾವುದೇ ಬೇಸಿಕ್ ಕೋರ್ಸ್ ನ ಪ್ರಮಾಣ ಪತ್ರ ಪಡೆದಿರತಕ್ಕದ್ದು)




ವೇತನ: 25,500ರಿಂದ 81,100 ಜೊತೆಗೆ ಹೈಕೋರ್ಟ್ ಅಧಿಕಾರಿಗಳ ವೇತನ ನಿಯಮ- 2018ರ ಪ್ರಕಾರ ಭತ್ಯೆ




ಪ್ರೊಬೇಷನರಿ ಸಮಯ: ನೇಮಕವಾದ ಬಳಿಕ ಕನಿಷ್ಟ ಎರಡು ವರ್ಷದ ಅವಧಿ




ವಯೋಮಿತಿ: ಕನಿಷ್ಟ 18ರಿಂದ ಗರಿಷ್ಟ 35 ವರ್ಷ (ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ)



ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿಗಳು ರೂ. 350 /-


ಪರಿಶಿಷ್ಟ ಜಾತಿ/ಪಂಗಡ ಮತ್ತು ಪ್ರವರ್ಗ -Iಕ್ಕೆ ಸೇರಿದವರಿಗೆ, ದೈಹಿಕ ಅಂಗವಿಕತೆ ಹೊಂದಿರುವ ಅಭ್ಯರ್ಥಿಗಳಿಗೆ ರು. 200/-



ಶುಲ್ಕ ಪಾವತಿ ಹೇಗೆ?: ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಮೇಲೆ ಅರ್ಜಿಯಲ್ಲಿ ಸೂಚಿಸಿದಂತಹ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆನ್‌ಲೈನ್ ಪೆಮೆಂಟ್ ಗೇಟ್‌ವೇ ಮೂಲಕ ಶುಲ್ಕವನ್ನು ಸಂದಾಯ ಮಾಡತಕ್ಕದ್ದು


ಅಥವಾ


ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಮೇಲೆ ಅರ್ಜಿಯಲ್ಲಿ ಸೂಚಿಸಿದಂತಹ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆನ್‌ಲೈನ್ ಪೆಮೆಂಟ್ ಗೇಟ್‌ವೇ ಮೂಲಕ PDF ನಮೂನೆಯಲ್ಲಿ ಚಲನ್ ಡೌನ್‌ಲೋಡ್ ಮಾಡಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಯಾವುದೇ ಶಾಖೆಯಲ್ಲಿ ನಿಗದಿತ ಶುಲ್ಕವನ್ನು ಪಾವತಿ ಮಾಡಬೇಕು.



ಅರ್ಜಿ ಸಲ್ಲಿಸಲು ಕೊನೆ ದಿನ: 27/11/2021


ಆನ್‌ಲೈನ್ ಯಾ ಚಲನ್ ಮೂಲಕ ಶುಲ್ಕ ಪಾವತಿಗೆ ಕೊನೆ ದಿನ: 30/11/2021



ಅರ್ಜಿ ಸಲ್ಲಿಸುವ ಮುನ್ನ ಹೈಕೋರ್ಟ್‌ನ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಿ...


https://karnatakajudiciary.kar.nic.in/recruitmentNotifications/typ2021/NTYP2021.pdf




ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಬಳಸಿ


https://karnatakajudiciary.kar.nic.in/recruitment.php




Ads on article

Advertise in articles 1

advertising articles 2

Advertise under the article