-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಫೇಸ್ಬುಕ್, ವ್ಯಾಟ್ಸ್ಆ್ಯಪ್, ಇನ್ ಸ್ಟಾಗ್ರಾಂ ಸ್ಥಗಿತ; ಟೆಲಿಗ್ರಾಂನತ್ತ ಹೊರಳಿದ ಜಾಲತಾಣಿಗರು

ಫೇಸ್ಬುಕ್, ವ್ಯಾಟ್ಸ್ಆ್ಯಪ್, ಇನ್ ಸ್ಟಾಗ್ರಾಂ ಸ್ಥಗಿತ; ಟೆಲಿಗ್ರಾಂನತ್ತ ಹೊರಳಿದ ಜಾಲತಾಣಿಗರು

ನವದೆಹಲಿ: ಜನಪ್ರಿಯ ಜಾಲತಾಣಗಳಾದ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಹಾಗೂ ಇನ್‌ಸ್ಟಾಗ್ರಾಂ  ಜಾಲತಾಣಗಳು ಅ.3ರ ರಾತ್ರಿ 9 ಗಂಟೆಯಿಂದ ಜಗತ್ತಿನಾದ್ಯಂತ ಏಕಾಏಕಿ ನಿಷ್ಕ್ರಿಯವಾಗಿತ್ತು.‌ ಆ ಬಳಿಕ ಅಂದು ಮಧ್ಯರಾತ್ರಿ ಸುಮಾರು 2:30 ಗಂಟೆಯಿಂದ ಮತ್ತೆ ಮರು ಚಾಲನೆಗೊಂಡಿದ್ದವು. ಇದು ಡಿಎನ್‌ಎಸ್‌ ಸರ್ವರ್‌ನಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆಯ ಕಾರಣದಿಂದ ಆಗಿತ್ತು ಎಂಬ ಸ್ಪಷ್ಟನೆಯೂ ದೊರಕಿತ್ತು. 

ಆದರೆ, ಇದೇ ಅವಧಿಯಲ್ಲಿ ಮತ್ತೊಂದು ಮಹತ್ತರವಾದ ಬದಲಾವಣೆ ನಡೆದಿದೆ. ಅಂದರೆ ಈ ಅವಧಿಯಲ್ಲಿ ಸಾಮಾಜಿಕ ಜಾಲತಾಣವಾದ ಟೆಲಿಗ್ರಾಂಗೆ 7 ಕೋಟಿ ಗ್ರಾಹಕರು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ.

ಮೂರು ಪ್ರಮುಖ ಜಾಲತಾಣಗಳು ನಿಷ್ಕ್ರಿಯವಾದಾಗಲೂ ಟೆಲಿಗ್ರಾಂ ಮಾತ್ರ ಕಾರ್ಯನಿರ್ವಹಿಸುತ್ತಿತ್ತು. ಅಲ್ಲದೆ, ಟೆಲಿಗ್ರಾಂ ಜಾಲತಾಣವು ವಾಟ್ಸ್‌ಆ್ಯಪ್‌ಗೆ ಸಮನಾದ ಜಾಲತಾಣವಾಗಿರುವುದರಿಂದ ವಿಶ್ವದ ಅನೇಕರು ತಮ್ಮ ಸಂದೇಶ, ಚಿತ್ರಗಳು, ವೀಡಿಯೋಗಳನ್ನು ತಮಗೆ ಬೇಕಾದವರಿಗೆ ರವಾನಿಸಲು ಟೆಲಿಗ್ರಾಂನತ್ತ ಹೊರಳಿದ್ದಾರೆ. ಟೆಲಿಗ್ರಾಂನ ಮಾಸಿಕ ಬಳಕೆದಾರರ ಸಂಖ್ಯೆ ಸರಾಸರಿ 50 ಕೋಟಿಯಾಗಿದ್ದು, ಇದರ ಶೇ.10ರಷ್ಟು ಹೊಸ ಗ್ರಾಹಕರು ಕೇವಲ ಆ ಐದಾರು ಗಂಟೆಗಳಲ್ಲಿ ಟೆಲಿಗ್ರಾಂಗೆ ದೊರಕಿದ್ದಾರಂತೆ. 

ಈ ಮೂಲಕ ಸಾಮಾಜಿಕ ಜಾಲತಾಣಗಳ ಸ್ಪರ್ಧಾತ್ಮಕ ವ್ಯವಸ್ಥೆಯಲ್ಲಿ ಒಂದು ನಿಷ್ಕ್ರಿಯಗೊಂಡಲ್ಲಿ ಮತ್ತೊಂದು ವ್ಯವಸ್ಥೆಗೆ ಹೇಗೆ ಲಾಭವಾಗುತ್ತದೆ ಎಂಬುದಕ್ಕೆ ಇದು ನಿದರ್ಶನವಾಗಿದೆ.

Ads on article

Advertise in articles 1

advertising articles 2

Advertise under the article

ಸುರ