-->
ನಗುತ್ತಲೇ ಪತಿಯನ್ನು ಕೆಲಸಕ್ಕೆ ಕಳುಹಿಸಿಕೊಟ್ಟ ಮರುಕ್ಷಣವೇ ಆತ್ಮಹತ್ಯೆ ಮಾಡಿಕೊಂಡ ಪತ್ನಿ: ಮನನೊಂದು ಪತಿಯೂ ನೇಣಿಗೆ ಶರಣು

ನಗುತ್ತಲೇ ಪತಿಯನ್ನು ಕೆಲಸಕ್ಕೆ ಕಳುಹಿಸಿಕೊಟ್ಟ ಮರುಕ್ಷಣವೇ ಆತ್ಮಹತ್ಯೆ ಮಾಡಿಕೊಂಡ ಪತ್ನಿ: ಮನನೊಂದು ಪತಿಯೂ ನೇಣಿಗೆ ಶರಣು

ವಿಜಯನಗರ: ಮದುವೆಯಾದ ಆರು ತಿಂಗಳಿಗೇ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ. 

ವಿಜಯನಗರ ಜಿಲ್ಲೆಯ ಕೊಟ್ಟವಲಸ ಮಂಡಲದ ಚೀಪುರುವಲಸಾ ನಿವಾಸಿ ರಾಮು ಹಾಗೂ ಹೇಮಾ ಮೃತ ದಂಪತಿ. 

ವೃತ್ತಿಯಲ್ಲಿ ಜೆಸಿಬಿ ಆಪರೇಟರ್​ ಆಗಿದ್ದ ರಾಮುವಿಗೆ ಬೇರೆ ಬೇರೆ ಕಡೆಗಳಲ್ಲಿ ಕೆಲಸವಿದ್ದುದರಿಂದ ದಿನವೂ ಮನೆಗೆ ಬರಲು ಆಗುತ್ತಿರಲಿಲ್ಲ. ಆದ್ದರಿಂದ ಕೆಲ ದಿನಗಳ ಬಳಿಕ ರಾಮು ಪತ್ನಿಯನ್ನು ಭೇಟಿಯಾಗಿ ಮತ್ತೆ ಕೆಲಸಕ್ಕೆಂದು ಹೊರ ಹೋದ ಮರು ಗಳಿಗೆಯಲ್ಲೇ ಹೇಮಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇತ್ತ ಪತ್ನಿ ಮೃತಪಟ್ಟ ಸುದ್ದಿ ತಿಳಿದು ರಾಮು ಸಹ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

ಸಾವಿಗೂ ಮುನ್ನ ಹೇಮಾ, ಪತಿಯೊಡನೆ ಸಂತೋಷವಾಗಿಯೇ ಇದ್ದಳು. ನಗು ನಗುತ್ತಲೇ ಮಾತನಾಡಿದ್ದಳು. ಆದರೆ, ಕೊನೆಯ ಘಳಿಗೆಯಲ್ಲಿ ಏನಾಗಿದೆ ಎಂಬುದೇ ಇದೀಗ ಯಕ್ಷ ಪ್ರಶ್ನೆಯಾಗಿದೆ. 

ರಾಮು ಹಾಗೂ ಹೇಮಾಗೆ ಕಳೆದ ಜುಲೈ 1ರಂದು ವಿವಾಹವಾಗಿತ್ತು. ರಾಮು ಜೆಸಿಬಿ ಆಪರೇಟರ್​ ಆಗಿದ್ದು, ಕೆಲಸಕ್ಕೆಂದು ಆತ ಊರೂರು ತಿರುಗಬೇಕಿತ್ತು. ಕೆಲವೊಮ್ಮೆ ಮನೆಗೆ ಬರಲು ಆಗುತ್ತಿರಲಿಲ್ಲ. ಆದರೂ ಆತ ಬಿಡುವು ಮಾಡಿಕೊಂಡು ಪತ್ನಿಯ ಜತೆ ಉಳಿದು ಸಮಯ ಕಳೆದು ಹೋಗುತ್ತಿದ್ದ. ಶನಿವಾರವೂ ಸಹ ಪತ್ನಿಯನ್ನು ಕಾಣಲೆಂದು ಬೈಕ್​ನಲ್ಲಿ ಬಂದಿದ್ದ. ಈ ವೇಳೆ ದಂಪತಿಗಳಿಬ್ಬರೂ ತುಂಬಾ ಸಂತೋಷದಿಂದಲೇ ಕಾಲ ಕಳೆದಿದ್ದರು. ಆದರೆ ರಾಮು ಕೆಲಸಕ್ಕೆಂದು ಹೊರಟ ಮರುಕ್ಷಣವೇ ಹೇಮಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇತ್ತ ಪತ್ನಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ಸುದ್ದಿ ಕೇಳಿ ರಾಮು ಕೂಡ ನೇಣಿಗೆ ಶರಣಾಗಿದ್ದಾನೆ. ಈ ಘಟನೆಯಿಂದ ಕುಟುಂಬಸ್ಥರನ್ನು ಆಘಾತಕ್ಕೊಳಗಾಗಿದ್ದಾರೆ. ಹೇಮಾ ಯಾಕೆ ಆತ್ಮಹತ್ಯೆ ಮಾಡಿಕೊಂಡರು ಎಂಬುದು ಪ್ರಶ್ನೆಯಾಗಿ ಉಳಿದಿದೆ. 

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. 

Ads on article

Advertise in articles 1

advertising articles 2

Advertise under the article