
Lovers Suicide: ಪ್ರೀತಿಯ ಬಗ್ಗೆ ಮನೆಯಲ್ಲಿ ಹೇಳಲು ಹೆದರಿದ 'ಪ್ರೇಮಿಗಳು' ವಿಷ ಸೇವಿಸಿ ಆತ್ಮಹತ್ಯೆಗೆ ಶರಣು!
10/26/2021 01:08:00 AM
ನಲ್ಗೊಂಡ(ತೆಲಂಗಾಣ): ಪೋಷಕರು ಪುತ್ರಿಗೆ ಇಷ್ಟವಿಲ್ಲದ ವಿವಾಹ ಮಾಡಲು ಮುಂದಾಗಿರುವ ಹಿನ್ನೆಲೆಯಲ್ಲಿ ಪ್ರೇಮಿಗಳಿಬ್ಬರು ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯ ತಿರುಮಲಗಿರಿ (ಸಾಗರ್) ತಾಲೂಕಿನ ತೆಟ್ಟಕುಂಟ ಗ್ರಾಮದಲ್ಲಿ ನಡೆದಿದೆ.
ಮಟ್ಟಿಪಲ್ಲಿ ಕೊಂಡಲು (22) ಹಾಗೂ ಸಂಧ್ಯಾ (20)ಮೃತ ದುರ್ದೈವಿ ಪ್ರೇಮಿಗಳು.
ಮಟ್ಟಿಪಲ್ಲಿ ಕೊಂಡಲು ಹಾಗೂ ಸಂಧ್ಯಾ ಒಬ್ಬರಿಗೊಬ್ಬರು ಪ್ರಾಣಕ್ಕಿಂತ ಹೆಚ್ಚೇ ಎಂಬಷ್ಟು ಪ್ರೀತಿಸುತ್ತಿದ್ದರು. ಆದರೆ ಅವರಿಗೆ ತಮ್ಮ ಪ್ರೀತಿಯ ಬಗ್ಗೆ ಹಿರಿಯರ ಬಳಿ ತಿಳಿಸಲು ಹೆದರಿಕೆ. ಆದರೆ ಪರಸ್ಪರ ದೂರವಾಗಲೂ ಇಚ್ಚಿಸದೆ ಇಬ್ಬರೂ ಕೊನೆಗೆ ಅನ್ಯ ಮಾರ್ಗ ಕಾಣದೆ ವಿಷ ಪ್ರಾಷಣ ಮಾಡಿಕೊಂಡು ಸಾವಿನ ಮನೆ ಸೇರಿದ್ದಾರೆ.
ತಿರುಮಲಗಿರಿ (ಸಾಗರ್) ತಾಲೂಕಿನ ತೆಟ್ಟಕುಂಟ ಗ್ರಾಮದ ನಿವಾಸಿ ಉಗ್ಗಿರಿ ನಾಗಯ್ಯ ಮತ್ತು ಸೈದಮ್ಮ ದಂಪತಿಗೆ ವೆಂಕಟೇಶ್ವರ್ಲು ಹಾಗೂ ಸಂಧ್ಯಾ ಇಬ್ಬರು ಮಕ್ಕಳು. ಪಿಯುಸಿ ಮುಗಿಸಿದ ಬಳಿಕ ಸಂಧ್ಯಾ ಕೃಷಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಈಕೆಯ ಸಹೋದರ ವೆಂಕೆಟೇಶ್ವರ್ಲು ಕಳೆದ ವರ್ಷ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ.
ಆಗ ಆತನ ಸ್ನೇಹಿತ ಮಟ್ಟಿಪಲ್ಲಿ ಕೊಂಡಲು ಗೆಳೆಯನ ಮನೆ ಹಾಗೂ ಕುಟುಂಬದ ಹತ್ತಿರವೇ ಇದ್ದು, ಸಹಾಯ ಮಾಡುತ್ತಿದ್ದನಂತೆ. ಈ ವೇಳೆಯಲ್ಲಿ ಸಂಧ್ಯಾ ಮತ್ತು ಕೊಂಡಲು ನಡುವೆ ಪ್ರೀತಿ ಮೊಳಕೆಯೊಡೆದಿದೆ. ಇವರಿಬ್ಬರ ಸಂದರ್ಭ ಸಂಧ್ಯಾ ಹಾಗೂ ಕೊಂಡಲು ಒಟ್ಟಿಗೆ ಆತ್ಮಹತ್ಯೆ ಗೈಯ್ಯಲಫ್ಯಾನಿಗೆರಿಸಿದ್ದಾರೆ. ಪೋಷಕರು ಪುತ್ರಿಗೆ ಹತ್ತಿರ ಸಂಬಂಧಿಕರ ಯುವಕನೊಂದಿಗೆ ನಿಶ್ಚಿತಾರ್ಥ ಮುಗಿಸಿದ್ದಾರೆ. ಮದುವೆ ದಿನಾಂಕ ನಿಶ್ಚಿಯಿಸಲು ಸಂಧ್ಯಾ ಪೋಷಕರು ಹೊರಗಡೆ ತೆರಳಿದ್ದಾರೆ.
ಈ ಸಂದರ್ಭ ಇಬ್ಬರೂ ಒಟ್ಟಾಗಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಮೊದಲಿಗೆ ಇಬ್ಬರೂ ಮ್ಯಾಗಿ ಮಾಡಿ ತಿಂದಿದ್ದಾರೆ. ಬಳಿಕ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಆದರೆ ಈ ಪ್ರಯತ್ನ ಸಫಲವಾಗಿರದ ಕಾರಷ ಇಬ್ಬರೂ ಕೀಟನಾಶಕವನ್ನು ಸೇವಿಸಿದ್ದಾರೆ.
ವಿಷ ಸೇವನೆ ಬಳಿಕ ಸಂಧ್ಯಾ ಮತ್ತು ಕೊಂಡಲು ತಮ್ಮ ತಮ್ಮ ಮನೆಗೆ ತೆರಳಿದ್ದಾರೆ. ಈ ಸಂದರ್ಭ ಸಂಧ್ಯಾ ಅಸ್ವಸ್ಥಳಾಗಿದ್ದಾರೆ. ಆಕೆ ವಾಂತಿ ಮಾಡಲು ಆರಂಭಿಸಿದ್ದಾರೆ. ಇದನ್ನು ಗಮನಿಸಿದ ಆಕೆಯ ಅಜ್ಜಿ ಅಕ್ಕ-ಪಕ್ಕದವರನ್ನು ಸಹಾಯಕ್ಕಾಗಿ ಕರೆದಿದ್ದಾರೆ. ತಕ್ಷಣ ಸ್ಥಳೀಯರು ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇತ್ತ ಕೊಂಡಲು ಕೂಡಾ ಅಸ್ವಸ್ಥನಾಗಿ ಮನೆಯಲ್ಲಿ ಬಿದ್ದಿದ್ದಾನೆ. ಕೊಂಡಲ ಸ್ಥಿತಿ ಚಿಂತಾಜನಕವಾಗಿರುವುದರಿಂದ ಆತನ ಪೋಷಕರು ನಲ್ಗೊಂಡದಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಇಬ್ಬರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇಬ್ಬರ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಮನೆಯವರಿಗೆ ಹಸ್ತಾಂತರ ಮಾಡಲಾಗಿದೆ.