ಮಂಗಳೂರಿನಲ್ಲಿ ವ್ಯಕ್ತಿಗೆ ಚೂರಿ ಇರಿತ- ಪಕ್ಕೆಲುಬು, ಸೊಂಟಕ್ಕೆ ಗಾಯ




ಮಂಗಳೂರು: ಮಂಗಳೂರಿನ ಕಾವೂರು ಠಾಣಾ ವ್ಯಾಪ್ತಿಯ ಮಾಲಾಡಿ ಬಳಿ ವ್ಯಕ್ತಿಯೊಬ್ಬರಿಗೆ ಅಪರಿಚಿತ ದುಷ್ಕರ್ಮಿಗಳ ತಂಡ ಚೂರಿಯಿಂದ ಇರಿದು ಪರಾರಿಯಾಗಿದೆ.

ಬುಧವಾರ ತಡರಾತ್ರಿ ಮನೆಗೆ ಹೋಗುತ್ತಿದ್ದ ವ್ಯಕ್ತಿಯ ಬೆನ್ನಿಗೆ ಇರಿದು ತಂಡ ಪರಾರಿಯಾಗಿದೆ.

 ಮಂಗಳೂರಿನ ಪಂಜಿಮೊಗರು ನಿವಾಸಿ ರಾಜೇಶ್ (45)ಗಾಯಗೊಂಡವರು.ಇವರ ಪಕ್ಕೆಲುಬು ಮತ್ತು ಸೊಂಟಕ್ಕೆ ಮೂರು ಬಾರಿ ಇರಿಯಲಾಗಿದೆ.

 ರಾಜೇಶ್ ಅವರು  ಎಂದಿನಂತೆ ಕೆಲಸ ಮುಗಿಸಿ ಕೊಟ್ಟಾರದಿಂದ ಮನೆಗೆ ಸಾಗುತ್ತಿದ್ದಾಗ ಮಾಲೆಮಾರ್ ಬಳಿ ಈ ಘಟನೆ ನಡೆದಿದೆ.  ಅಪರಿಚಿತ ದುಷ್ಕರ್ಮಿಗಳು ಬೆನ್ನಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದು ಸ್ಥಳೀಯರು ಗಾಯಗೊಂಡ ರಾಜೇಶ್ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.