ಶ್ರೀರಾಮ್ ಫೈನಾನ್ಸ್ ಸಂಸ್ಥೆಯಲ್ಲಿ ಉದ್ಯೋಗ: ರಾಜ್ಯದ ವಿವಿಧೆಡೆ ಮ್ಯಾನೇಜರ್ ಸಹಿತ ಹಲವು ಹುದ್ದೆಗೆ ನೇಮಕಾತಿ
ದೇಶದ ಪ್ರಮುಖ ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ಒಂದಾಗಿರುವ ಶ್ರೀರಾಮ್ ಸಿಟಿ ಯೂನಿಯನ್ ಫೈನಾನ್ಸ್ ಲಿ. ಸಂಸ್ಥೆಯಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.
ಸಂಸ್ಥೆಯ ರಾಜ್ಯದ ವಿವಿಧೆಡೆ ಇರುವ ಶಾಖೆಗಳಲ್ಲಿ ಸೀನಿಯರ್ ಮ್ಯಾನೇಜರ್, ಶಾಖಾ ಮ್ಯಾನೇಜರ್ ಮತ್ತು ರಿಕವರಿ ಮ್ಯಾನೇಜರ್ ಸಹಿತ ಹಲವು ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಸಂಸ್ಥೆ: ಶ್ರೀರಾಮ್ ಸಿಟಿ ಯೂನಿಯನ್ ಫೈನಾನ್ಸ್ ಲಿ.
ಹುದ್ದೆಯ ಹೆಸರು:
1) ಸೀನಿಯರ್ ಮ್ಯಾನೇಜರ್ - 5
2) ಶಾಖಾ ಮ್ಯಾನೇಜರ್ - 29
3) ರಿಕವರಿ ಮ್ಯಾನೇಜರ್ -29
4) ಕ್ಲೆರಿಕಲ್ ಸ್ಟಾಫ್ - 85
ಶೈಕ್ಷಣಿಕ ಅರ್ಹತೆ: ಯಾವುದೇ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಬಿ.ಕಾಂ ಅಥವಾ ಯಾವುದೇ ಪದವಿ
ಅನುಭವ: ಕನಿಷ್ಟ 1.5 ವರ್ಷಗಳ ಅನುಭವ (ಆಯಾ ಹುದ್ದೆಗೆ ಅವಲಂಬಿಸಿ)
ವಯೋಮಿತಿ: ಕನಿಷ್ಟ 21 ಗರಿಷ್ಟ 45
ವೇತನ: ಅನುಭವ, ಶೈಕ್ಷಣಿಕ ಅರ್ಹತೆಯನ್ನು ಆಧರಿಸಿ ಆಕರ್ಷಕ ವೇತನವನ್ನು ನಿಗದಿಪಡಿಸಲಾಗುವುದು.
ಅರ್ಹ ಅಭ್ಯರ್ಥಿಗಳು ಇಮೇಲ್ ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು.
ಇ ಮೇಲ್ ವಿಳಾಸ: hrscufkar@gmail.com
ಶಾರ್ಟ್ ಲಿಸ್ಟ್ ಮಾಡಲಾದ ಅಭ್ಯರ್ಥಿಗಳಿಗೆ ನೇರ ಸಂದರ್ಶನದ ದಿನಾಂಕಗಳನ್ನು ದೂರವಾಣಿ ಮೂಲಕ ತಿಳಿಸಲಾಗುವುದು.
ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಮೊಬೈಲ್ ಸಂಪರ್ಕಿಸಬಹುದು: 9071776589 / 7892255379
