'ಶಾರುಖ್ ಖಾನ್ ಪ್ರತೀ ಪಾರ್ಟಿಯಲ್ಲಿ ಮಾದಕ ನಶೆ ಇತ್ತು': ಶರ್ಲಿನ್ ಚೋಪ್ರಾ ಹಳೆಯ ವೀಡಿಯೋ ವೈರಲ್

ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿರುವ ಆರ್ಯನ್ ಖಾನ್ ಬಂಧನವಾದ ಬೆನ್ನಲ್ಲೇ ನಟಿ ಶರ್ಲಿನ್ ಚೋಪ್ರಾ ಸಂದರ್ಶನದ ಹಳೆಯ ವಿಡಿಯೋವೊಂದು ಮುನ್ನೆಲೆಗೆ ಬಂದಿದೆ. 

ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಶರ್ಲಿನ್ ಚೋಪ್ರಾ “ಬಾಲಿವುಡ್‍ ಡ್ರಗ್ಸ್ ಪಾರ್ಟಿ”ಯ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಅಕ್ಟೋಬರ್ 2 ರಂದು ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಪುತ್ರನ ಬಂಧನವಾಗಿದೆ. ಅದಾದ ಎರಡು ದಿನಗಳ ಬಳಿಕ ಶೆರ್ಲಿನ್ ಚೋಪ್ರಾ ತಮ್ಮ ಸಂದರ್ಶನದ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

ಆ ವೀಡಿಯೋ ಸಂದರ್ಶನದಲ್ಲಿ ಅವರು "ತಾನು ಐಪಿಎಲ್‌ನ ಕೆಕೆಆರ್‌ ಪಾರ್ಟಿಯಲ್ಲಿ ನಾನು ಡ್ಯಾನ್ಸ್‌ ಮಾಡುತ್ತಿದ್ದೆ. ಪಾರ್ಟಿಯ ಮಧ್ಯದಲ್ಲಿ ನಾನು ಶೌಚಾಲಯಕ್ಕೆ ಹೋದಾಗ ಅಲ್ಲಿ ಬಾಲಿವುಡ್‌ನ ಸ್ಟಾರ್‌ ನಟರ ಪತ್ನಿಯರು ಕೊಕೇನ್‌ ಸೇವಿಸಿ ಮತ್ತಿನಲ್ಲಿದ್ದರು" ಅವರನ್ನು ನೋಡಿ ನನಗೆ ಶಾಕ್ ಆಯಿತು.

ಮುಂದಕ್ಕೆ ಮಾತನಾಡಿದ ಅವರು, "ಶಾರುಖ್ ಖಾನ್ ಅವರ ಪ್ರತೀ ಪಾರ್ಟಿಗಳಲ್ಲೂ ಮಾದಕ ನಶೆ ಇರುತ್ತಿತ್ತು. ಆ ಬಳಿಕ ನಾನು ನಿಧಾನವಾಗಿ ಕೆಕೆಆರ್‌ ಪಾರ್ಟಿಗಳಿಂದ ದೂರವಾದೆ. ಬಾಲಿವುಡ್‌ನಲ್ಲಿ ಇಂತಹ ಪಾರ್ಟಿಗಳು ಇರುತ್ತವೆ ಎಂಬುದು ನನಗೆ ಆಗ ಅರ್ಥವಾಯಿತು" ಎಂದು ಶೆರ್ಲಿನ್‌ ಹೇಳಿದ್ದಾರೆ.