ಜೈಲಿನಲ್ಲಿದ್ದ ಗ್ಯಾಂಗ್ ಸ್ಟರ್ ಸಕಿಲ್ ಗೆ ಕ್ರಿಮಿನಲ್ ಸಹಕಾರ ನೀಡುತ್ತಿದ್ದ 'ಪ್ರೇಯಸಿ'ಯ ಬಂಧನ

ಕಟಕ್​: ಒಡಿಶಾದ ಬಿಲ್ಡರೊಬ್ಬರಿಂದ  ಹಣ ಸುಲಿಗೆ ಮಾಡಿರುವ ಆರೋಪದಡಿ ಗ್ಯಾಂಗ್​​ಸ್ಟರ್​ ಸಕಿಲ್​ ಪ್ರೇಯಸಿ​ ಮಾನಸಿ ನಾಯಕ್​ ಅಲಿಯಾಸ್​ ಬೇಬಿ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. 

ಕಟಕ್​ ನಗರದ ವಿವಿಧ ಪೊಲೀಸ್​ ಠಾಣೆಗಳಲ್ಲಿ ಮಾನಸಿ ನಾಯಕ್ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದು ಬಂದಿದೆ. 2015ರಲ್ಲಿ ಕೊಲೆ ಪ್ರಕರಣದಲ್ಲಿ ಈಕೆ ಜೈಲು ಪಾಲಾಗಿದ್ದಳು. ಜೈಲಿನಿಂದ ಹೊರಬಂದ ಈಕೆಗೆ ಗ್ಯಾಂಗ್​​ಸ್ಟರ್​ ಸಕಿಲ್ ಪರಿಚಯವಾಗಿದೆ. ಆ ಬಳಿಕ ಅವನ ಪರವಾಗಿ ಕೆಲಸ ಮಾಡುತ್ತಿದ್ದಳು.​ 

ಸಕಿಲ್​ ಜೈಲು ಪಾಲಾಗಿದ್ದರೂ ಅಲ್ಲಿಯೇ ಇದ್ದುಕೊಂಡು ಇದೇ ಮಾನಸಿ ನಾಯಕ್ ಮೂಲಕ ತನ್ನ ಕ್ರಮಿನಲ್​ ಕಾರ್ಯಗಳನ್ನು ನಡೆಸುತ್ತಿದ್ದ. ವಿವಿಧ ಪ್ರಕರಣಗಳ ಆರೋಪಿಯಾಗಿ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಳ್ಳುತ್ತಿದ್ದ ಬೇಬಿ ಮೇಲೆ ಕಳೆದ ಕೆಲವು ತಿಂಗಳಿಂದ ಕಣ್ಣಿಡಲಾಗಿತ್ತು. ಇದೀಗ ಬಿಲ್ಡರ್​ ಒಬ್ಬರು ಆಕೆಯ ವಿರುದ್ಧ ಹಣ ಸುಲಿಗೆ ಮಾಡಿದ್ದಾಳೆಂದು ಆರೋಪಿಸಿ ದೂರು ನೀಡಿದ್ದಾರೆ. ಇದೇ ಆಧಾರದ ಮೇಲೆ ಮಾನಸಿ ನಾಯಕ್ ಸೇರಿದಂತೆ ಆಕೆಯ ಮೂವರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu