-->
ವಿಮಾನದಲ್ಲಿ ನಟಿಗೆ ಕಿರುಕುಳ ನೀಡಿದ ಉದ್ಯಮಿ ಪೊಲೀಸ್ ವಶಕ್ಕೆ

ವಿಮಾನದಲ್ಲಿ ನಟಿಗೆ ಕಿರುಕುಳ ನೀಡಿದ ಉದ್ಯಮಿ ಪೊಲೀಸ್ ವಶಕ್ಕೆ

ಮುಂಬೈ: ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ನಟಿಯೋರ್ವರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಸಹಪ್ರಯಾಣಿಕ ಉದ್ಯಮಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಉತ್ತರಪ್ರದೇಶದ ಘಾಜಿಯಾಬಾದ್​ ನಿವಾಸಿ, ಉದ್ಯಮಿ ನಿತಿನ್​(36) ಬಂಧಿತ ಆರೋಪಿ. 

ಮುಂಬೈ ನಿವಾಸಿ 40 ವರ್ಷದ ಕಲಾವಿದೆಯೋರ್ವರು ಅಕ್ಟೋಬರ್​ 1 ರಂದು ದೆಹಲಿಗೆ ಪ್ರಯಾಣ ಬೆಳೆಸಿದ್ದರು. ಅ.3 ರಂದು ಮರಳಿ ದೆಹಲಿಯಿಂದ ಮುಂಬೈಗೆ ವಿಮಾನದ ಮೂಲಕ ಹಿಂತಿರುಗುತ್ತಿದ್ದರು. ವಿಮಾನವು ಮುಂಬೈನ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿರುವ ಹಿನ್ನೆಲೆಯಲ್ಲಿ ಆಕೆ ಓವರ್​ಹೆಡ್​ ಸ್ಟೋರೇಜ್​ನಿಂದ ತನ್ನ ಹ್ಯಾಂಡ್​ಬ್ಯಾಗ್​ ತೆಗೆದುಕೊಳ್ಳುತ್ತಿದ್ದರು. ಆಗ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಸಹಪ್ರಯಾಣಿಕ ನಿತಿನ್ ನಟಿಯ ಸೊಂಟ ಹಿಡಿದು ತನ್ನೆಡೆಗೆ ಎಳೆದುಕೊಂಡ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ನಟಿ ತಕ್ಷಣ ವಿಮಾನದ ಸಿಬ್ಬಂದಿಗೆ ದೂರು ನೀಡಿದ್ದಾರೆ. ಅವರು ಆರೋಪಿ‌ ನಿತಿನ್ ನನ್ನು ಪಕ್ಕಕ್ಕೆ ಬಂದು ನಿಲ್ಲಲು ಹೇಳಿದ್ದರು. ಬಳಿಕ ಈಮೇಲ್​ ಮೂಲಕ ಏರ್​ಲೈನ್ಸ್​​ಗೆ ನಟಿ ದೂರು ನೀಡಿದ್ದಾರೆ. ವಿಮಾನ ನಿಲ್ದಾಣದಿಂದ ಹೊರಬಂದ ಬಳಿಕ ಸಹಾರ್​ ಪೊಲೀಸ್​ ಠಾಣೆಯಲ್ಲೂ ಲಿಖಿತ ದೂರು ನೀಡಿದ್ದರು.

ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದು, ವಿಮಾನದ ಪ್ರಯಾಣಿಕರ ಮಾಹಿತಿ ಪಡೆದಿದ್ದಾರೆ.‌ ಅಲ್ಲದೆ ನಟಿಯ ಸೀಟಿನ ಆಸುಪಾಸಿನಲ್ಲಿ ಕುಳಿತಿದ್ದವರ ಫೋಟೋಗಳನ್ನು ತರಿಸಿಕೊಂಡರು. ಸಂತ್ರಸ್ತ ನಟಿಯು ಆರೋಪಿಯನ್ನು ಗುರುತು ಹಿಡಿದಿದ್ದು, ಆತನನ್ನು ಅ.14 ರಂದು ಪೊಲೀಸ್​ ಠಾಣೆಗೆ ಕರೆಸಿ, ವಿಚಾರಣೆ ನಡೆಸಿದ್ದಾರೆ‌. ತನಿಖೆಯಲ್ಲಿ ಆತ ಕೃತ್ಯ ಎಸಗಿರುವುದಾಗಿ ಕಂಡು ಬಂದಿರುವುದರಿಂದ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

Ads on article

Advertise in articles 1

advertising articles 2

Advertise under the article