-->

SBI Loan Festival - ಮಂಗಳೂರು: ವಾರಾಂತ್ಯದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ವತಿಯಿಂದ ಗೃಹ ಸಾಲ ಮೇಳ

SBI Loan Festival - ಮಂಗಳೂರು: ವಾರಾಂತ್ಯದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ವತಿಯಿಂದ ಗೃಹ ಸಾಲ ಮೇಳ

ಮಂಗಳೂರು: ವಾರಾಂತ್ಯದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ವತಿಯಿಂದ ಗೃಹ ಸಾಲ ಮೇಳ





ಮಂಗಳೂರು: ದೇಶದ ಅತಿ ದೊಡ್ಡ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್ ಪ್ರತಿ ಹಂತದಲ್ಲೂ ಗ್ರಾಹಕ ಕೇಂದ್ರಿತ ಸೇವೆಗಳ ಮೂಲಕ ಜನರಿಗೆ ಹೆಚ್ಚು ಹತ್ತಿರವಾಗಿದ್ದು ದೇಶದ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಕಾರಣವಾಗಿದೆ. ತನ್ನ ವಿಭಿನ್ನ ಗ್ರಾಹಕ ಸ್ನೇಹಿ ಸಾಲ ಸೌಲಭ್ಯಗಳನ್ನು ಜನರಿಗೆ ತಲುಪುವಂತೆ ಮಾಡಲು ಅನೇಕ ವಿನೂತನ ಕಾರ್ಯ ಯೋಜನೆಗಳನ್ನು ಹಮ್ಮಿಕೊಳ್ಳುವಲ್ಲಿಯೂ ಸದಾ ಮುಂದಿದೆ.


ಶೇಕಡಾ 6.70 ಬಡ್ಡಿ ದರದಲ್ಲಿ ಗೃಹ ಸಾಲವನ್ನು ಒದಗಿಸುತ್ತಿರುವ ಬ್ಯಾಂಕ್ ಎಂಬ ಹೆಗ್ಗಳಿಕೆ ಇರುವ ಎಸ್‌ಬಿಐ, ಇದೀಗ ಮಂಗಳೂರಿನ ಜನರ ಸ್ವಂತ ಮನೆ ಖರೀದಿಸುವ ಕನಸನ್ನು ನನಸಾಗಿಸಲು ಅತ್ಯುತ್ತಮ ಅವಕಾಶವೊಂದನ್ನು ಕಲ್ಪಿಸಿದೆ.


ಬೃಹತ್ ಗೃಹ ಸಾಲ ಹಬ್ಬ- ಪ್ರವೇಶ ಉಚಿತ


ಇದಕ್ಕಾಗಿ ಅಕ್ಟೋಬರ್ 9 ಶನಿವಾರ ಮತ್ತು 10ರ ರವಿವಾರದಂದು ನಗರದ ಟಿಎಂಎ ಪೈ ಹಾಲ್‌ನಲ್ಲಿ ಬೃಹತ್ ಗೃಹ ಸಾಲ ಹಬ್ಬ ಆಯೋಜಿಸುತ್ತಿದೆ. ಎರಡು ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ನಗರದ 25ಕ್ಕೂ ಹೆಚ್ಚಿನ ಪ್ರಮುಖ ನಿರ್ಮಾಣ ಸಂಸ್ಥೆಗಳು, 40ಕ್ಕೂ ಹೆಚ್ಚಿನ ಯೋಜನೆಗಳೊಂದಿಗೆ ಭಾಗವಹಿಸಲಿದ್ದಾರೆ.


ಜನರು ಎಲ್ಲಾ ನಿರ್ಮಾಣ ಸಂಸ್ಥೆಗಳು ಒದಗಿಸುವ ಸೌಲಭ್ಯಗಳನ್ನು ಹಾಗೂ ಸೌಕರ್ಯಗಳನ್ನು ಸ್ಥಳದಲ್ಲೇ ಹೋಲಿಕೆ ಮಾಡಿ ಸೂಕ್ತ ಎನಿಸಿದ ಕನಸಿನ ಮನೆಯನ್ನು ಆಯ್ಕೆ ಮಾಡಿಕೊಳ್ಳುವ ಜೊತೆಗೆ ಎಸ್‍ಬಿಐನ ಶೇಕಡ 6.70 ಕನಿಷ್ಠ ಬಡ್ಡಿ ದರದ ಸಾಲ ಸೌಲಭ್ಯವನ್ನು ಸಹ ಸ್ಥಳದಲ್ಲಿ ಪಡೆಯುವ ಅವಕಾಶವನ್ನು ಒದಗಿಸಲಾಗಿದೆ.


ಒಂದರ್ಥದಲ್ಲಿ ಈ ಹಬ್ಬವು ಮನೆ ಕೊಳ್ಳುವ ಕನಸಿನೊಂದಿಗೆ ಬಂದಿರುವ ಗ್ರಾಹಕರು ಹಾಗೂ ಅವರ ಜೊತೆಗೆ ಬಂದಿರುವ ಮಕ್ಕಳು ಇಬ್ಬರಿಗೂ ಮೆಚ್ಚುಗೆ ಆಗುವುದಂತೂ ಖಂಡಿತ. ಈ ಹಬ್ಬದಲ್ಲಿ ಗೃಹ ಸಾಲದ ಜೊತೆಗೆ ಕಾರು ಸಾಲ, ಚಿನ್ನದ ಸಾಲ, ಶೈಕ್ಷಣಿಕ ಸಾಲ, ಎಸ್‍ಎಮ್‍ಇ ಸಾಲ, ವೈಯ್ಯಕ್ತಿಕ ಸಾಲ, ಪಿಂಚಣಿ ಸಾಲ ಇತ್ಯಾದಿ ಸಾಲ ಸೌಲಭ್ಯಗಳ ಬಗ್ಗೆಯೂ ಸೂಕ್ತ ರೀತಿಯ ಮಾಹಿತಿ ಹಾಗೂ ಅರ್ಹತಾ ಮಾನದಂಡಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ.


ಒಟ್ಟಿನಲ್ಲಿ ನಿಮ್ಮ ಕನಸಿನ ಮನೆಗೆ ಮುನ್ನುಡಿ ಬರೆಯಲು ಇದು ಸಕಾಲ.

Ads on article

Advertise in articles 1

advertising articles 2

Advertise under the article