2 ಲಕ್ಷ ಸಂಬಳ: LLB ಪದವೀಧರರಿಗೆ ಸೇನೆಯಲ್ಲಿ ಭರ್ಜರಿ ಆಫರ್
ಭಾರತೀಯ ಸೇನೆಯಲ್ಲಿ ಕೆಲಸ ಮಾಡಲು ಇಚ್ಚಿಸುವ ಅರ್ಹ ಅಭ್ಯರ್ಥಿಗಳು ಕಾನೂನು ಪದವಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಉತ್ತಮ ಅವಕಾಶ ಒದಗಿಬಂದಿದೆ.
ಒಟ್ಟು 7 ಹುದ್ದೆಗಳು ಕಾನೂನು ಪದವೀಧರರಿಗೆ ತೆರೆದುಕೊಂಡಿದೆ.
ಭಾರತೀಯ ಸೇನೆ ನೇಮಕಾತಿ 2021ರ ಕುರಿತು ಮಾಹಿತಿ ಇಲ್ಲಿದೆ.
ಹುದ್ದೆಯ ಹೆಸರು: ಕಾನೂನು ಪದವಿ ಹುದ್ದೆ
ಒಟ್ಟು ಖಾಲಿ ಇರುವ ಹುದ್ದೆ: ಏಳು
ವಿದ್ಯಾರ್ಹತೆ : ಎಲ್‌ಎಲ್‌ಬಿ
ಕೆಲಸದ ಸ್ಥಳ: ದೇಶದ ಎಲ್ಲೆಡೆ
ಅರ್ಜಿ ಸಲ್ಲಿಕೆ ಆರಂಭ: 29/09/2021
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 28/10/2021
ಒಟ್ಟು ಖಾಲಿ ಇರುವ 7 ಹುದ್ದೆಗಳ ಪೈಕಿ ಪುರುಷರಿಗೆ ಐದು ಹುದ್ದೆಗಳು ಮೀಸಲಿಡಲಾಗಿದೆ. ಉಳಿದ ಎರಡು ಹುದ್ದೆಗಳನ್ನು ಮಹಿಳೆಯರಿಗೆ ಖಾಲಿ ಇವೆ.
ವಿದ್ಯಾರ್ಹತೆ :
ಕಾನೂನು ಪದವಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವವರು ಶೆ. 55 ಅಂಕಗಳೊಂದಿಗೆ ಎಲ್‌ಎಲ್‌ಬಿ (ಕಾನೂನು ಪದವಿ ) ಪಡೆದಿರಬೇಕು. ಇಲ್ಲವೇ PUC ಬಳಿಕ ಎಲ್‌ಎಲ್‌ಬಿ (ಬಿಎ ಲಾ) ಪದವಿ ಪಡೆದಿರಬೇಕು.
ಅಭ್ಯರ್ಥಿಗಳು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಯಾ ರಾಜ್ಯ ವಕೀಲರ ಸಂಘದಲ್ಲಿ ವಕೀಲರಾಗಿ ನೋಂದಣಿ ಹೊಂದಲು ಅರ್ಹತೆ ಪಡೆದಿರಬೇಕು.
ಬಾರ್ ಕೌನ್ಸಿಲ್ ಆಫ್ ಇಂಡಿಯಾದಿಂದ ಗುರುತಿಸಲ್ಪಟ್ಟಿರುವ ಯಾವುದೇ ವಿಶ್ವವಿದ್ಯಾನಿಲಯ ಯಾ ಕಾಲೇಜಿನಿಂದ ಪದವಿ ಪಡೆದಿರಬೇಕು.
ವಯೋಮಿತಿ- 21ರಿಂದ 27 ವರ್ಷ ವಯಸ್ಸಿನವರಾಗಿರಬೇಕು
ವೇತನ: ರೂ. 56,100/- ನಿಂದ 2,18,200/- ವರೆಗೆ
ಆಯ್ಕೆ ಪ್ರಕ್ರಿಯೆ ಹೇಗೆ?
ಎಲ್ಲ ಅರ್ಜಿಗಳನ್ನು ಪರಿಷ್ಕರಿಸಿ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಬಳಿಕ ಸಂದರ್ಶನ ನಡೆಸಲಾಗುತ್ತದೆ.
ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಲಿಂಕ್ ಬಳಸಿ:
https://joinindianarmy.nic.in/
ಅಧಿಸೂಚನೆ/ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
https://joinindianarmy.nic.in/writereaddata/Portal/NotificationPDF/JAG_MEN_27.pdf