-->
ವಿಮಾನದಲ್ಲಿ ಪ್ರಿಯಾಂಕಾ ಕುಳಿತ ಭಂಗಿಯೊಂದಕ್ಕೆ ನೆಟ್ಟಿಗರಿಂದ ಭರಪೂರ ಪ್ರಶಂಸೆಯ ಮಳೆ!

ವಿಮಾನದಲ್ಲಿ ಪ್ರಿಯಾಂಕಾ ಕುಳಿತ ಭಂಗಿಯೊಂದಕ್ಕೆ ನೆಟ್ಟಿಗರಿಂದ ಭರಪೂರ ಪ್ರಶಂಸೆಯ ಮಳೆ!

ನವದೆಹಲಿ: ಅಮೆರಿಕದ ಪಾಪ್​ ಗಾಯಕ ನಿಕ್​ ಜೋನಸ್​ ಅವರನ್ನು ವಿವಾಹವಾದ ಬಳಿಕ ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಅವರು ಹಾಲಿವುಡ್‌ನಲ್ಲಿ ಸಕತ್‌ ಬಿಜಿಯಾಗಿದ್ದಾರೆ. ಭಾರತದಲ್ಲಿ ಅವರು ಕಾಣಿಸಿಕೊಳ್ಳುವುದು ಕಡಿಮೆಯೇ ಅನ್ನಬಹುದು.‌

ಅವರೀಗ ಅಮೆರಿಕದಲ್ಲಿಯೇ‌ ಖಾಯಂ ಆಗಿ ವಾಸ್ತವ್ಯ ಹೂಡಿದ್ದಾರೆ.  ಈ ನಡುವೆ ಅವರು ಭಾರತದ‌ ಪರಂಪರೆಯನ್ನು ನೆನಪಿನಲ್ಲಿರಿಸಿ ಕೆಲವೊಂದು ಹಬ್ಬಗಳನ್ನು ಆಚರಿಸುತ್ತಿದ್ದು, ಅದರ ವಿಡಿಯೋ ಶೇರ್‌ ಮಾಡಿಕೊಳ್ಳತ್ತಾರೆ. ಈ ಮೂಲಕ ತಮ್ಮ ಅಭಿಮಾನಿಗಳನ್ನು ಖುಷಿಪಡಿಸುತ್ತಿದ್ದಾರೆ.


ಇದೀಗ ಅವರು ವಿಮಾನದಲ್ಲಿ ಕುಳಿತುಕೊಂಡಿರುವ ಭಂಗಿಯೊಂದು ಭಾರಿ ವೈರಲ್‌ ಆಗಿದ್ದು, ಈ ಫೋಟೋಗೆ ಮೆಚ್ಚುಗೆಗಳ ಮಹಾಪೂರವೇ ಹರಿದುಬಂದಿದೆ. ಪ್ರಿಯಾಂಕಾ ವಿಮಾನದಲ್ಲಿ ಚಕ್ಕಳ ಮಕ್ಕಳ ಹಾಕಿಕೊಂಡು ಕುಳಿತುಕೊಂಡಿದ್ದನ್ನು ಕಂಡು ನೆಟ್ಟಿಗರು ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ಭಾರತೀಯರು ಊಟಕ್ಕೆ ಚಕ್ಕಳ ಮಕ್ಕಳ ಹಾಕಿ ಕುಳಿತುಕೊಳ್ಳುತ್ತಾರೆ. ಈಗ ಟೇಬಲ್‌ ಸಂಪ್ರದಾಯ ಬಂದಮೇಲೆ ಈ ಪದ್ಧತಿ ಹೆಚ್ಚಿನ ಕಡೆ ಬಿಟ್ಟುಹೋಗಿದೆ.

 ಇದೀಗ ವಿಮಾನದಲ್ಲಿ ಚಕ್ಕಳ ಮಕ್ಕಳ ಹಾಕಿ ಕುಳಿತುಕೊಂಡಿರುದಕ್ಕೆ ಅಭಿಮಾನಿಗಳು‌ ಪ್ರಿಯಾಂಕಾರನ್ನು ದೇಸಿ ಹುಡುಗಿ ಎಂದು ಬಣ್ಣಿಸಿ ಈ ಫೋಟೋ ವೈರಲ್‌ ಮಾಡಿದ್ದಾರೆ. ಅಷ್ಟೇ. ಅಭಿಮಾನಿಗಳಿಗೆ ಹಾಗೆ ತಾನೆ? ತಮ್ಮ ಸ್ಟಾರ್‌ ನಟ-ನಟಿಯರು ಏನೇ ಮಾಡಿದರೂ ಚೆನ್ನ ಅವರಿಗೆ.

Ads on article

Advertise in articles 1

advertising articles 2

Advertise under the article