-->
ಮೊಮ್ಮಗಳು ಹುಟ್ಟಿರುವ ಸಂಭ್ರಮ:  ಗ್ರಾಹಕರಿಗೆ ಪೆಟ್ರೋಲ್ ಗಿಫ್ಟ್ ನೀಡಿದ ವ್ಯಕ್ತಿ

ಮೊಮ್ಮಗಳು ಹುಟ್ಟಿರುವ ಸಂಭ್ರಮ: ಗ್ರಾಹಕರಿಗೆ ಪೆಟ್ರೋಲ್ ಗಿಫ್ಟ್ ನೀಡಿದ ವ್ಯಕ್ತಿ

ಮುಂಬೈ: ಬರ್ತ್ ಡೇ, ವಿವಾಹ ದಿನ, ಯಾವುದಾದರೂ ಶುಭ ಸಂಭ್ರಮಗಳ ಸಂದರ್ಭದಲ್ಲಿ ಗಿಫ್ಟ್ ಗಳನ್ನು ನೀಡೋದು ಸರ್ವೇ ಸಾಮಾನ್ಯ. ಪ್ರೀತಿ ಪಾತ್ರರಿಗಂತೂ ಕೊಂಚ ದುಬಾರಿ ಉಡುಗೊರೆಗಳನ್ನೇ ಕೊಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್​, ಡೀಸೆಲ್ ಗಳೂ ಗಿಫ್ಟ್​ ಸಾಲಿಗೆ ಸೇರಿವೆ ಎಂದು ಹೇಳಿದರೆ ನೀವು ನಂಬಲೇಬೇಕು.

ಸದ್ಯ ಪೆಟ್ರೋಲ್​, ಡೀಸೆಲ್​ ದರವು ಗಗನಕ್ಕೇರಿದ್ದು, ದೇಶದ ಬಹುತೇಕ ಮಹಾನಗರಗಳಲ್ಲಿ ತೈಲಬೆಲೆ ನೂರರ ಗಡಿ ದಾಟಿದೆ. ಈ ಮಧ್ಯೆ ವ್ಯಕ್ತಿಯೋರ್ವನು ತನಗೆ ಮೊಮ್ಮಗಳು ಹುಟ್ಟಿದಳೆಂದು ಸಂಭ್ರಮಾಚರಣೆಯೊಂದಿಗೆ ಎಲ್ಲರಿಗೂ ಉಡುಗೊರೆ ರೂಪದಲ್ಲಿ ಪೆಟ್ರೋಲ್​ ನೀಡಿದ್ದಾರೆ.


ರಾಜೇಂದ್ರ ಸೈನಾನಿ ಎಂಬ ಈ ವ್ಯಕ್ತಿಯು ಮಧ್ಯಪ್ರದೇಶ ರಾಜ್ಯದ ಬೇತುಲ್​​ನಲ್ಲಿ ಪೆಟ್ರೋಲ್​ ಬಂಕ್ ಹೊಂದಿದ್ದರು. ಇವರ ಮಾತು ಬಾರದ, ಕಿವಿಯೂ ಕೇಳದ ಸೊಸೆಯು ಅಕ್ಟೋಬರ್​ 9ರಂದು ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಇದರಿಂದ ವಿಪರೀತ ಸಂತಸಗೊಂಡಿದ್ದ ರಾಜೇಂದ್ರ ಸೈನಾನಿ ಎಲ್ಲರಿಗೂ ಹೆಚ್ಚುವರಿ ಪೆಟ್ರೋಲ್​ ನೀಡಿದ್ದಾರೆ. 

ನಮ್ಮ ಕುಟುಂಬದಲ್ಲಿ ಹೆಣ್ಣು ಮಗು ಹುಟ್ಟಿರುವುದಕ್ಕೆ ಬಹಳ ಸಂತೋಷವಾಗಿದೆ. ಆದ್ದರಿಂದ ರಾಜೇಂದ್ರ ಸೈನಾನಿ ಅಕ್ಟೋಬರ್​  13ರಿಂದ 15ರವರೆಗೆ, ಬೆಳಗ್ಗೆ 9 ರಿಂದ 11ರವರೆಗೆ ಮತ್ತು ಸಂಜೆ 5ಗಂಟೆಯಿಂದ 7ಗಂಟೆವರೆಗೆ  ತಮ್ಮ ಬಂಕ್ ​​ಗೆ ಬಂದ ಗ್ರಾಹಕರಿಗೆ  ಹೆಚ್ಚುವರಿ ಪೆಟ್ರೋಲ್​ ನೀಡಿದ್ದಾರೆ. ಅಂದು ಅವರು 100 ರೂ. ಪೆಟ್ರೋಲ್​ ಹಾಕಿಸಿರುವ ಗ್ರಾಹಕರಿಗೆ ಶೇ.5ರಷ್ಟು ಹೆಚ್ಚು ಉಚಿತ ಪೆಟ್ರೋಲ್​ ನೀಡಿದ್ದಾರೆ. ಅಲ್ಲದೆ 200 ರೂ. 500 ರೂ.ವರೆಗಿನ ಪೆಟ್ರೋಲ್​ ಹಾಕಿಸಿದವರಿಗೆ ಶೇ.10ರಷ್ಟು ಹೆಚ್ಚು ಪೆಟ್ರೋಲ್​​​ ನೀಡಿದ್ದಾರೆ‌‌‌.  ಹೆಚ್ಚುವರಿ ನೀಡಿರುವ ಪೆಟ್ರೋಲ್​​ಗೆ ಹಣ ಪಡೆಯದೆ ಉಚಿತವಾಗಿ ನೀಡಿದ್ದಾರೆ.

Ads on article

Advertise in articles 1

advertising articles 2

Advertise under the article