-->
ಪಣಂಬೂರು ಬೀಚಿನಲ್ಲಿ  ಸಮುದ್ರಪಾಲಾಗುತ್ತಿದ್ದ  ಬೆಂಗಳೂರಿನ ಯುವಕರ ರಕ್ಷಿಸಿದ  ಬೀಚ್ ಲೈಫ್ ಗಾರ್ಡ್ಸ್- ಕಾರ್ಯಾಚರಣೆಯ ವಿಡಿಯೋ ವೈರಲ್ (VIDEO)

ಪಣಂಬೂರು ಬೀಚಿನಲ್ಲಿ ಸಮುದ್ರಪಾಲಾಗುತ್ತಿದ್ದ ಬೆಂಗಳೂರಿನ ಯುವಕರ ರಕ್ಷಿಸಿದ ಬೀಚ್ ಲೈಫ್ ಗಾರ್ಡ್ಸ್- ಕಾರ್ಯಾಚರಣೆಯ ವಿಡಿಯೋ ವೈರಲ್ (VIDEO)

  

ಮಂಗಳೂರು:  ಮಂಗಳೂರಿನ ಮನಮೋಹಕ ಕಡಲತೀರ ಪಣಂಬೂರು  ಬೀಚಿನಲ್ಲಿ  ಸಮುದ್ರದ ಸೆಳೆತಕ್ಕೆ ಸಿಲುಕಿ ಸಮುದ್ರಪಾಲಾಗುತ್ತಿದ್ದ ಬೆಂಗಳೂರಿನ ಇಬ್ಬರನ್ನು ರಕ್ಷಣೆ ಮಾಡಲಾಗಿದೆ.

 

 

 

ಬೆಂಗಳೂರಿನ ಮತ್ತಿಕೆರೆಯ ನಿವಾಸಿಗಳಾದ ಪ್ರಸಾದ್ (20) ಮತ್ತು  ರಕ್ಷಿತ್ (20) ಎಂಬಿಬ್ಬರು ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸಕ್ಕೆ ಬಂದಿದ್ದರು.  ಇಂದು ಸಂಜೆಯ ವೇಳೆಗೆ ಪಣಂಬೂರು ಬೀಚಿಗೆ ಬಂದಿದ್ದು ಸಮುದ್ರಕ್ಕೆ ಇಳಿದಿದ್ದರು. ಕೆಲ ಹೊತ್ತಿನಲ್ಲಿ ಸಮುದ್ರದ ಸೆಳೆತಕ್ಕೆ ಇವರು ಸಿಲುಕಿಕೊಂಡು ಅಪಾಯಕ್ಕೆ ಸಿಲುಕಿದ್ದರು.  ಇವರನ್ನು ಪಣಂಬೂರು ಬೀಚಿನಲ್ಲಿರುವ ಲೈಪ್ ಗಾರ್ಡ್ ಗಳು 45 ನಿಮಿಷಗಳ ಕಾರ್ಯಾಚರಣೆ ಮೂಲಕ ರಕ್ಷಿಸಿದ್ದು ಇದರ ವಿಡಿಯೋ ವೈರಲ್ ಆಗಿದೆ.
 

 

Ads on article

Advertise in articles 1

advertising articles 2

Advertise under the article