-->
ಸ್ಕ್ಯಾನಿಂಗ್ ಸೆಂಟರ್ ಶೌಚಾಲಯದಲ್ಲಿ‌ ಮೊಬೈಲ್ ಇರಿಸಿ ಮಹಿಳೆಯರ ಖಾಸಗಿ ದೃಶ್ಯ ಸೆರೆಹಿಡಿಯುತ್ತಿದ್ದ ಕಾಮುಕ ‌ಪೊಲೀಸ್ ಬಲೆಗೆ

ಸ್ಕ್ಯಾನಿಂಗ್ ಸೆಂಟರ್ ಶೌಚಾಲಯದಲ್ಲಿ‌ ಮೊಬೈಲ್ ಇರಿಸಿ ಮಹಿಳೆಯರ ಖಾಸಗಿ ದೃಶ್ಯ ಸೆರೆಹಿಡಿಯುತ್ತಿದ್ದ ಕಾಮುಕ ‌ಪೊಲೀಸ್ ಬಲೆಗೆ

ತುಮಕೂರು: ಸ್ಕ್ಯಾನಿಂಗ್ ಸೆಂಟರೊಂದರ ಶೌಚಾಲಯದಲ್ಲಿ ಮೊಬೈಲ್​ ಇಟ್ಟು ಮಹಿಳೆಯರಿಗೆ ಗೊತ್ತಾಗದಂತೆ ಅವರ ಖಾಸಗಿ ದೃಶ್ಯಗಳನ್ನು ಸೆರೆ ಹಿಡಿದು ವಿಕೃತಿ ಮರೆಯುತ್ತಿದ್ದ ಕಾಮುಕನೋರ್ವ ಕೊನೆಗೂ ಪೊಲೀಸ್ ಬಂಧಿಯಾಗಿದ್ದಾನೆ. 

ಚಾಮರಾಜನಗರ ಜಿಲ್ಲೆಯ ಹರೀಶ್ (35) ಎಂಬಾತನೇ ಈ ಕಾಮುಕ.

ಆರೋಪಿ ಹರೀಶ್ ನಗರದ ಗಾಂಧಿನಗರದಲ್ಲಿರುವ ವಿಶ್ವಗುರು ಸ್ಕ್ಯಾನಿಂಗ್ ಸೆಂಟರ್​ನಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿದ್ದ. ಈತ ಅಲ್ಲಿನ ಶೌಚಾಲಯದಲ್ಲಿ ಮೊಬೈಲ್ ಇರಿಸಿ ಮಹಿಳೆಯರ ಖಾಸಗಿ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದ. 

ಈತ ಶೌಚಗೃಹದ ಗೋಡೆ ಮೇಲೆ ಮೊಬೈಲ್ ಇರಿಸಿದ್ದು, ಗೊತ್ತಾಗಿ ಮಹಿಳೆಯೊಬ್ಬರು ಅನುಮಾನದಿಂದ ಮೊಬೈಲ್ ಪರಿಶೀಲಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಆರೋಪಿ ಹರೀಶ್ ಈ ಕೃತ್ಯ ಎಸಗಿರುವುದು ತಿಳಿದು ಬಂದಿದ್ದು, ಸಾರ್ವಜನಿಕರೇ ಆತನಿಗೆ ಸರಿಯಾಗಿ ಥಳಿಸಿ ಪೊಲೀಸರಿಗೊಪ್ಪಿದ್ದಾರೆ.  

ಆರೋಪಿಯ ಮೊಬೈಲ್​ ಅನ್ನು ಪರಿಶೀಲನೆ ನಡೆಸಿದಾಗ ಮಹಿಳೆಯರ ಹಲವಾರು ವೀಡಿಯೋಗಳಿವೆ ಎಂದು ತಿಳಿದು ಬಂದಿದೆ. ಇದೀಗ ಆತ ಪೊಲೀಸರ ಅತಿಥಿಯಾಗಿದ್ದಾನೆ. ಈ ಬಗ್ಗೆ ನಗರದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article