
ಉಡುಪಿ: ಶಿವಳ್ಳಿ ಗ್ರಾಮದ ಯುವತಿ ನಾಪತ್ತೆ: ದೂರು ದಾಖಲು
10/19/2021 11:04:00 PM
ಉಡುಪಿ: ನಗರದ ಮಣಿಪಾಲದ ಶಿವಳ್ಳಿ ಗ್ರಾಮದ ಯುವತಿಯೋರ್ವಳು ನಾಪತ್ತೆಯಾಗಿರುವ ಬಗ್ಗೆ ಪೋಷಕರು ಮಣಿಪಾಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಣಿಪಾಲ ಶಿವಳ್ಳಿ ಗ್ರಾಮದ ನಿಶಾ ಡಿ. ಎಸ್ (21) ನಾಪತ್ತೆಯಾದವರು.
ನಿಶಾ ಡಿ.ಎಸ್. ಅವರು ಅ. 11ರಂದು ರಾತ್ರಿ 7.50ರ ವೇಳೆಗೆ ಉಡುಪಿಯಲ್ಲಿರುವ ಪಿಜಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ತೆರಳಿದ್ದಳು. ಆದರೆ ನಿಶಾ ಅವರು ಪಿಜಿಗೂ ಹೋಗದೆ, ಮನೆಗೂ ಬಾರದೆ ನಾಪತ್ತೆಯಾಗಿದ್ದಾರೆ.
ಅವರ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದ್ದು, ಎಲ್ಲಾ ಕಡೆಗಳಲ್ಲಿ ಅವರಿಗೆ ಹುಡುಕಾಟ ನಡೆಸಿದರೂ, ನಿಶಾ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಅವರ ಪೋಷಕರು, ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.