Mangaluru: ನೇಣಿಗೆ ಕೊರಳೊಡ್ಡಿದ ಎಸ್ಎಸ್ಎಲ್ ಸಿ ವಿದ್ಯಾರ್ಥಿ

ಮಂಗಳೂರು: ನೇಣಿಗೆ ಕೊರಳೊಡ್ಡಿ ಎಸ್ಎಸ್ಎಲ್ ಸಿ ವಿದ್ಯಾರ್ಥಿಯೋರ್ವನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಜೆಪ್ಪು ಕುಡುಪಾಡಿಯಲ್ಲಿ ನಡೆದಿದೆ.

ಜೆಪ್ಪು ಕುಡುಪಾಡಿ ನಿವಾಸಿ ಅನೀಶ್ ಪಿ.ಪಾಯಲ್ (16) ಮೃತಪಟ್ಟ ವಿದ್ಯಾರ್ಥಿ.

ಜೆಪ್ಪು ಕುಡುಪಾಡಿ ನಿವಾಸಿ ದಿ.ಪ್ರಶಾಂತ್ ಪಾಯಲ್ ಎಂಬವರ ಪುತ್ರ ಅನೀಶ್ ಇಂದು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ ಇನ್ನೂ ಕಾರಣವೇನೆಂದು ತಿಳಿದುಬಂದಿಲ್ಲ. ಯಾವುದೋ ಕಾರಣದಿಂದ ಈತ ಮನನೊಂದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಅನೀಶ್ ತಂದೆ ಪ್ರಶಾಂತ್ ಪಾಯಲ್ ಕೂಡಾ ಮೂರು ವರ್ಷಗಳ ಹಿಂದೆ ಆತ್ಮಹತ್ಯೆಗೆ ಮಾಡಿಕೊಂಡು ಮೃತಪಟ್ಟಿದ್ದರು. ಅದರಿಂದ ಅನೀಶ್ ಮಾನಸಿಕವಾಗಿ ನೊಂದುಕೊಂಡಿದ್ದ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಈ ಕುರಿತು ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.