-->

Mangaluru: ಕ್ರೆಡಿಟ್ ಕಾರ್ಡ್ ಕ್ಯಾಶ್, ಕ್ರೆಡಿಟ್ ಲಿಮಿಟ್ ಹೆಚ್ಚು ಮಾಡುವ ಆಮಿಷವೊಡ್ಡಿ 6,94,918 ರೂ. ವಂಚನೆ

Mangaluru: ಕ್ರೆಡಿಟ್ ಕಾರ್ಡ್ ಕ್ಯಾಶ್, ಕ್ರೆಡಿಟ್ ಲಿಮಿಟ್ ಹೆಚ್ಚು ಮಾಡುವ ಆಮಿಷವೊಡ್ಡಿ 6,94,918 ರೂ. ವಂಚನೆ

ಮಂಗಳೂರು: ಆನ್ಲೈನ್ ವಂಚನೆಯ  ಸಾಕಷ್ಟು ಪ್ರಕರಣಗಳು ನಡೆಯುತ್ತಿದ್ದು, ಪೊಲೀಸರು ಈ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆ ನೀಡುತ್ತಿದ್ದರೂ, ಜನರು ಇನ್ನೂ ಜಾಗೃತರಾದಂತಿಲ್ಲ. ದಿನವೂ ಇಂತಹದ್ದೊಂದು ವಂಚನೆ ಪ್ರಕರಣಗಳು ಎಲ್ಲಾದರೊಂದು ಕಡೆಗಳಲ್ಲಿ ನಡೆಯುತ್ತಲೇ ಇದೆ‌. ಇದೀಗ ಮಂಗಳೂರು ನಗರದಲ್ಲಿ ವ್ಯಕ್ತಿಯೋರ್ವರಿಗೆ ತಮ್ಮ ಬ್ಯಾಂಕ್ ಕ್ಯಾಶ್ ಲಿಮಿಟ್ ಹಾಗೂ ಕ್ರೆಡಿಟ್ ಲಿಮಿಟ್ ಹೆಚ್ಚು ಮಾಡುವ ಭರವಸೆ ನೀಡಿ ಹಂತಹಂತವಾಗಿ 6,94,918 ರೂ. ಹಣವನ್ನು ವಂಚನೆ ಮಾಡಿರುವ ಘಟನೆ ನಡೆದಿದೆ.

ವಂಚನೆಗೊಳಗಾದ ವ್ಯಕ್ತಿಯು ಎಸ್.ಬಿ.ಐ ಕ್ರೆಡಿಟ್ ಕಾರ್ಡ್ ನ್ನು ಹೊಂದಿದ್ದರು. ಇವರಿಗೆ ಅ.29ರಂದು  ಮಧ್ಯಾಹ್ನ 3.18 ಸುಮಾರಿಗೆ  ಅಪರಿಚಿತ ಮಹಿಳೆಯೋರ್ವರು 7089961456 ಸಂಖ್ಯೆಯಿಂದ ಕರೆ ಮಾಡಿದ್ದಾರೆ. ಆಕೆ ತಾನು ಎಸ್.ಬಿ.ಐ ಕ್ರೆಡಿಟ್ ಕಾರ್ಡ್ ಕಚೇರಿಯಿಂದ ಕರೆ ಮಾಡುವುದಾಗಿ ನಂಬಿಸಿದ್ದಾರೆ‌.

ಬಳಿಕ ಆಕೆ ತಾನು ಕ್ರೆಡಿಟ್ ಕಾರ್ಡ್ ಪರಿಶೀಲನೆ ಬಗ್ಗೆ ಕರೆ ಮಾಡಿರುವುದಾಗಿ ಹೇಳಿ, ವಂಚನೆಗೊಳಗಾದವರ cash limit ಹಾಗೂ credit limit ಗಳನ್ನು  ಹೆಚ್ವಿಸುವುದಾಗಿ ನಂಬಿಸಿದ್ದಾರೆ. ಬಳಿಕ ಅವರ ಮೊಬೈಲ್ ಸಂಖ್ಯೆಗೆ ಬಂದಿರುವ OTP ಸಂಖ್ಯೆಯನ್ನು ತಿಳಿಸುವಂತೆ ಹೇಳಿದ್ದಾರೆ. ಆತ ತಮ್ಮ ಮೊಬೈಲ್ ಗೆ ಬಂದ OTP ಸಂಖ್ಯೆಯನ್ನು ತಿಳಿಸಿದ ತಕ್ಷಣ ಅವರ ಎಸ್.ಬಿ.ಐ ಕ್ರೆಡಿಟ್ ಕಾರ್ಡ್ ನಿಂದ 99,274 ರೂ. ವರ್ಗಾವಣೆಯಾಗಿದೆ. 

ಬಳಿಕ ಆಕೆ ಸುಮಾರು 3.51ಗಂಟೆಯವರೆಗೆ ಮಹಿಳೆಯು ಪೋನಿನಲ್ಲಿ ಮಾತನಾಡುತ್ತಾ 6 ಬಾರಿ OTP ಗಳನ್ನು ಪಡೆದುಕೊಂಡಿದ್ದಾಳೆ. ಪರಿಣಾಮ ವಂಚನೆಗೊಳಗಾದ ವ್ಯಕ್ತಿಯ ಕ್ರೆಡಿಟ್ ಕಾರ್ಡ್ ನಿಂದ ಹಂತಹಂತವಾಗಿ ಒಟ್ಟು 6,94,918 ರೂ. ಖಾತೆಯಿಂದ ವರ್ಗಾವಣೆಯಾಗಿದೆ.

ಈ ಬಗ್ಗೆ ತಮ್ಮ ಕ್ರೆಡಿಟ್ ಕಾರ್ಡ್ ನಿಂದ ಹಣ ವರ್ಗಾಯಿಸಿ ವಂಚನೆಮಾಡಿರುವ ಮಹಿಳೆಯ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿ ವಂಚನೆಗೊಳಗಾದ ವ್ಯಕ್ತಿ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ‌.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article