ಇಲ್ಲಿ ಅವಿವಾಹಿತೆಯರಿಗೆ 'ಲವ್' ಮಾಡಲು ತಿಂಗಳಿಗೊಂದು 'ಲೀವ್' ಕೊಡ್ತಾರಂತೆ: ಎಲ್ಲಿ ಗೊತ್ತೇ?

ಬೀಜಿಂಗ್‌: ಮಹಿಳೆಯರಿಗೆ ಉದ್ಯೋಗ ಹಾಗೂ ಮನೆಕೆಲಸಗಳ ನಡುವೆಯೇ ತಮ್ಮದೇ ವೈಯುಕ್ತಿಕ ಜೀವನ, ಆರೋಗ್ಯದ ಕಡೆಗೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ, ಅಲ್ಲದೆ ಕುಟುಂಬದ ಕಡೆಗೆ ಹೆಚ್ಚಿನ ಗಮನ ಹರಿಸಲು ಕಷ್ಟವಾಗುತ್ತಿರುವುದನ್ನು ಪರಿಗಣಿಸಿರುವ ಚೀನಾ ಸರಕಾರ ಮಹಿಳೆಯರಿಗೆ ಉಳಿದ ರಜೆಗಳ ಜೊತೆಗೆ ಲವ್‌ ಲೀವ್‌ (ಪ್ರೀತಿ ರಜೆ) ಅನ್ನು ಎಂದು ಘೋಷಣೆ ಮಾಡಿದೆ. 

ಕ್ಯಾಷುವಲ್ ಲೀವ್‌ (ಸಿಎಲ್‌), ಸಿಕ್‌ ಲೀವ್‌ (ಎಸ್‌ಎಲ್‌) ಗಳಂತೆ ತಿಂಗಳಿಗೊಮ್ಮೆ ಮಹಿಳೆಯರಿಗೆ ಲವ್‌ ಲೀವ್‌ ಎಂಬ ಹೊಸ ರಜೆಯೊಂದನ್ನು ಘೋಷಿಸಲಾಗಿದೆ. ಆದರೆ ಅವಿವಾಹಿತ ಮಹಿಳೆಯರಿಗೆ ಮಾತ್ರ ಲವ್ ಲೀವ್ ದೊರೆಯುತ್ತದೆ. ಇದಕ್ಕೆ ಕಾರಣ ನೀಡಿರುವ ಸರ್ಕಾರವು, ಚೀನಾದಲ್ಲಿ ಹೆಚ್ಚಿನ ಮಹಿಳೆಯರು ತಮ್ಮ ವೈಯುಕ್ತಿಕ ಜೀವನದ ಬಗ್ಗೆ ಯೋಚಿಸಲು ಸಮಯ ಸಿಗುತ್ತಿಲ್ಲವೆಂದು ಮದುವೆ ಮಾಡಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಮದುವೆಯಾಗದೆ ಮಕ್ಕಳಾಗುವುದಿಲ್ಲ, ಇದರಿಂದ ದೇಶಕ್ಕೆ ತೊಂದರೆ ಉಂಟಾಗಬಹುದು. ಆದ್ದರಿಂದ ತಮ್ಮ ಮಹಿಳೆಯರಿಗೆ ಸಂಗಾತಿಯ ಜತೆ, ತಿಂಗಳಿಗೊಮ್ಮೆ ಸಮಯ ಕಳೆದು ಬಳಿಕ ಅವರನ್ನು ಮದುವೆಯಾಗುವ ಚಿಂತನೆ ಮಾಡಬಹುದಾಗಿದೆ.

ಆದರೆ ಇದಕ್ಕೆ ಷರತ್ತು ವಿಧಿಸಲಾಗಿದ್ದು, ಅದೇನೆಂದರೆ, ಲವ್ ಲೀವ್ ದೊರೆಯಬೇಕಾದರೆ ಮಹಿಳಾ ಉದ್ಯೋಗಿಗಳಿಗೆ 30 ವರ್ಷಕ್ಕಿಂತ ಹೆಚ್ಚಿನ ವಯಸ್ಸಾಗಿರಬೇಕು ಹಾಗೂ ಮದುವೆಯಾಗಿರಬಾರದು. ಈಗಾಗಲೇ ಚೀನಾದ ಹ್ಯಾಂಗ್ಜೌದಲ್ಲಿರುವ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ಡೇಟಿಂಗ್ ರಜೆ ನೀಡುತ್ತಿವೆ. ಶಾಲಾ ಶಿಕ್ಷಕರಿಯರಿಗೂ ನೂತನವಾಗಿ ಡೇಟಿಂಗ್‌ ರಜೆ ಆರಂಭಿಸಲಾಗಿದೆ.‌‌ ಪ್ರೀತಿ ಯಾವಾಗ, ಎಲ್ಲಿ ಆರಂಭಗುತ್ತದೆ ಎಂದು ಹೇಳಲು ಹೇಳಲಾಧ್ಯವಾದ ಕಾರಣ, ಒಂದು ದಿನ ಮುಂಚಿತವಾಗಿ ರಜೆ ಹಾಕಿದರೆ ಸಾಕಂತೆ.