ತ್ರಿವಳಿ ಮಕ್ಕಳಿಗೆ‌ ಜನ್ಮ ನೀಡಿದ ಮಹಾತಾಯಿ


ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯ  ಕುಮಟಾದ  ಸುಭಾಸ್ ರಸ್ತೆಯ ಪ್ರಸಿದ್ಧ ಡಾ.ಜಾನು ಆಸ್ಪತ್ರೆಯಲ್ಲಿ ಗರ್ಭಿಣಿಯೊಬ್ಬರು  ತ್ರಿವಳಿ ಶಿಶುಗಳಿಗೆ ಜನ್ಮ ನೀಡಿದ್ದಾರೆ.

ಏಳನೆ ತಿಂಗಳಿನಲ್ಲಿ ಹೆರಿಗೆಯಾಗಿದ್ದು ತಾಯಿ ಮತ್ತು ಮಗು ಸುರಕ್ಷಿತರಾಗಿದ್ದಾರೆ.  ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಪ್ರಸಿದ್ಧಿಯಾಗಿರುವ ಡಾ.ಜಾನು ಮಣಕಿಕರ್ಸ್ ಮೆಟರ್ನಿಟಿ ಮತ್ತು ನರ್ಸಿಂಗ್ ಹೋಂನಲ್ಲಿ ಈ ಹೆರಿಗೆ ನಡೆದಿದೆ.


  ಗೋಕರ್ಣದ ಗಂಗಾವಳಿ ನಿವಾಸಿಯಾದ 24 ವರ್ಷದ ಹಲೀಮಾ ಸಾದಿಕ್ ಸಾಬ್ ಅವರು ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದವರು.


 ಇವರಿಗೆ ಹೊಟ್ಟೆ ನೋವು ಕಾಣಿಸಿಕೊಂಡ   ತಕ್ಷಣ ಜಾನು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.  ಡಾ.ಪ್ರಶಾಂತ್ ಮಣಕಿಕರ್ ಅವರು ಸ್ವಾಭಾವಿಕ ಹೆರಿಗೆ ಮಾಡಿಸಿದ್ದಾರೆ.


  ಹಲೀಮಾ ಸಾದಿಕ್ ಸಾಬ್ ಅವರು 2 ಹೆಣ್ಣು ಮತ್ತು ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದು ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ.  ಕಂದಮ್ಮಗಳ ಆರೋಗ್ಯ  ದೃಷ್ಠಿಯಿಂದ ಮತ್ತು ಹೆಚ್ಚಿನ ಚಿಕಿತ್ಸೆಗಾಗಿ  ಮಣಿಪಾಲ ಆಸ್ಪತ್ರೆಯ ಶಿಶು ಸುರಕ್ಷತಾ ಕೇಂದ್ರದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.