
ಸಾಮಾಜಿಕ ಜಾಲತಾಣಗಳಲ್ಲಿ ನಟಿ ಕಾಜಲ್ ಅಗರ್ವಾಲ್ ಹೊಸ ಮೈಲಿಗಲ್ಲು: ಇನ್ಸ್ಟಾಗ್ರಾಂನಲ್ಲಿ ಇವರ ಫಾಲೋವರ್ಸ್ 2 ಕೋಟಿಗೆ ಏರಿಕೆ
10/26/2021 03:31:00 AM
ಹೈದರಾಬಾದ್: ಹೆಚ್ಚಿನ ಎಲ್ಲಾ ನಟಿಯರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದು, ಎಲ್ಲರೂ ತಮ್ಮದೇ ಫಾಲೋವರ್ರ್ಸ್ ಗಳನ್ನು ಹೊಂದಿದ್ದಾರೆ. ಎಲ್ಲರೂ ತಮ್ಮದೇ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿದ್ದು, ಅವರ ಕೋಟ್ಯಂತರ ಅಭಿಮಾನಿಗಳು ಈ ಫೋಟೋಗಳನ್ನು ಲೈಕ್ ಕೊಡುತ್ತಲೇ ಇರುತ್ತಾರೆ.
ಇದೀಗ ಇನ್ಸ್ಟಾಗ್ರಾಂನಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್ವಾಲ್ ಹೊಸ ಮೈಲಿಗಲ್ಲು ತಲುಪಿದ್ದು, ಅವರು ಒಟ್ಟು 2 ಕೋಟಿ (20 ಮಿಲಿಯನ್) ಹಿಂಬಾಲಕರು ಹೊಂದಿದ್ದಾರೆ.
ಈ ಮೂಲಕ ಅವರು ಅತೀ ಹೆಚ್ಚು ಹಿಂಬಾಲಕರು ಹೊಂದಿರುವ ದಕ್ಷಿಣ ಭಾರತದ ನಟಿಯರ ಪೈಕಿ ಎರಡನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಮೊದಲ ಸ್ಥಾನದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ (22 ಮಿಲಿಯನ್) ಇದ್ದರೆ, ಇನ್ನುಳಿದಂತೆ ಸಮಂತಾ (19 ಮಿ), ತಾಪ್ಸೀ (19 ಮಿ), ರಾಕುಲ್ ಪ್ರೀತ್ ಸಿಂಗ್ (17 ಮಿ), ಪೂಜಾ ಹೆಗ್ಡೆ (15 ಮಿ), ತಮನ್ನಾ (14 ಮಿ), ಕೀರ್ತಿ ಸುರೇಶ್ (1 ಕೋಟಿ) ಹಿಂಬಾಲಕರು ಹೊಂದಿದ ನಾಯಕಿಯರಾಗಿದ್ದಾರೆ.