-->

Job in Railways- ದಕ್ಷಿಣ ಕೇಂದ್ರ ರೈಲ್ವೇನಲ್ಲಿ 4103 ಅಪ್ರೆಂಟಿಸ್ ಹುದ್ದೆ: SSLC, ITI ಪಾಸಾದವರಿಗೆ ಅವಕಾಶ

Job in Railways- ದಕ್ಷಿಣ ಕೇಂದ್ರ ರೈಲ್ವೇನಲ್ಲಿ 4103 ಅಪ್ರೆಂಟಿಸ್ ಹುದ್ದೆ: SSLC, ITI ಪಾಸಾದವರಿಗೆ ಅವಕಾಶ

ದಕ್ಷಿಣ ಕೇಂದ್ರ ರೈಲ್ವೇನಲ್ಲಿ 4103 ಅಪ್ರೆಂಟಿಸ್ ಹುದ್ದೆ: SSLC, ITI ಪಾಸಾದವರಿಗೆ ಅವಕಾಶ





ದಕ್ಷಿಣ ಕೇಂದ್ರ ರೈಲ್ವೇ ವಿಭಾಗದಲ್ಲಿ ಅಪ್ರೆಂಟಿಸ್ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. 



ರೈಲ್ವೇ ವಿಭಾಗದಲ್ಲಿ ಖಾಲಿ ಇರುವ ಒಟ್ಟು 4103 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ ಮತ್ತು ಈ ನೇಮಕಾತಿ ನೇರ ನೇಮಕಾತಿಯಾಗಿರುತ್ತದೆ.



ಖಾಲಿ ಇರುವ ಹುದ್ದೆಗಳ ಒಟ್ಟು ಸಂಖ್ಯೆ: 4103 ಅಪ್ರೆಂಟಿಸ್ ಹುದ್ದೆ



ಹುದ್ದೆಗಳ ವಿವರ:


ಎಸಿ ಮೆಕ್ಯಾನಿಕ್ - 250 ಹುದ್ದೆಗಳು


ಕಾರ್ಪೆಂಟರ್ - 8 ಹುದ್ದೆಗಳು


ಡೀಸಲ್ ಮೆಕ್ಯಾನಿಕ್ - 531 ಹುದ್ದೆಗಳು


ಎಲೆಕ್ಟ್ರಿಷನ್ 1019 ಹುದ್ದೆಗಳು


ಎಲೆಕ್ಟ್ರಾನಿಕ್ ಮೆಕ್ಯಾನಿಕ್ಸ್ - 92 ಹುದ್ದೆಗಳು


ಫಿಟ್ಟರ್- 1460 ಹುದ್ದೆಗಳು


ಮೆಷಿನಿಸ್ಟ್ - 71 ಹುದ್ದೆಗಳು


ಎಂಎಂಟಿಎಂ - 5 ಹುದ್ದೆಗಳು


ಎಂಎಂಡಬ್ಲ್ಯು- 24 ಹುದ್ದೆಗಳು


ಪೈಂಟರ್ - 80 ಹುದ್ದೆಗಳು


ವೆಲ್ಡರ್ - 553 ಹುದ್ದೆಗಳು



ವಿದ್ಯಾರ್ಹತೆ: SSLC, PUC, ITI


ತರಬೇತಿ ಭತ್ಯೆ: ಭಾರತ ಸರ್ಕಾರದ ನಿಯಮಗಳ ಪ್ರಕಾರ ತರಬೇತಿ ಸಮಯದಲ್ಲೂ ಭತ್ಯೆ ನೀಡಲಾಗುವುದು.


ವಯೋಮಿತಿ: ಅಕ್ಟೋಬರ್ 2021ಕ್ಕೆ ಅನ್ವಯವಾಗುವಂತೆ ಕನಿಷ್ಟ 15ರಿಂದ ಗರಿಷ್ಟ 24 ವರ್ಷದವರಾಗಿರಬೇಕು. ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ.


ನೇಮಕಾತಿ ವಿಧಾನ: ಎಸ್‌.ಎಸ್‌.ಎಲ್‌.ಸಿ. ಹಾಗೂ ಐ.ಟಿ.ಐ.ನಲ್ಲಿ ಪಡೆದ ಮಾರ್ಕ್‌ಗಳ ಆಧಾರದಲ್ಲಿ ಮೆರಿಟ್ ಲಿಸ್ಟ್ ಸಿದ್ಧಪಡಿಸಿ, ಬಳಿಕ ನೇರ ನೇಮಕಾತಿ ಮಾಡಿಕೊಳ್ಳಲಾಗುವುದು.


ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ನೇರವಾಗಿ ಅಂತರ್ಜಾಲದ ಮೂಲಕವೇ ಸಲ್ಲಿಸಬೇಕು. 



ಶೈಕ್ಷಣಿಕ ದಾಖಲೆ, ವಯಸ್ಸಿನ ದೃಢೀಕರಣ ಸಹಿತ ಸೂಕ್ತ ದಾಖಲೆಗಳನ್ನು ಅರ್ಜಿ ಸಲ್ಲಿಸುವ ಸಂದರ್ಭದಲ್ಲೇ ಅಪ್‌ಲೋಡ್ ಮಾಡಬೇಕು. ಅಧಿಸೂಚನೆಯಲ್ಲಿ ಎಲ್ಲ ವಿವರಗಳನ್ನು ನೀಡಲಾಗಿದೆ.



ಅರ್ಜಿ ಸಲ್ಲಿಸಲು ಕೊನೆ ದಿನಾಂಕ- 3/11/2021




ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ. ಇಲ್ಲಿದೆ ಲಿಂಕ್:

https://scr.indianrailways.gov.in/



ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ:

http://20.198.104.232/instructions.php


ಅಧಿಸೂಚನೆಗೆ ಈ ಲಿಂಕ್ ಕ್ಲಿಕ್ ಮಾಡಿ: http://20.198.104.232/Act_App_Notification-04102021.pdf


Ads on article

Advertise in articles 1

advertising articles 2

Advertise under the article