-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಇಸ್ಲಾಂ ಧರ್ಮವನ್ನು ತೊರೆದು ಹಿಂದೂ ಧರ್ಮಿಯಾಗಲಿರುವ ಇಂಡೋನೇಷ್ಯಾದ ಅಧ್ಯಕ್ಷನ ಪುತ್ರಿ: ಮುಸ್ಲಿಂ ದೇಶದಲ್ಲಿ ಭಾರೀ ಸಂಚಲನ!

ಇಸ್ಲಾಂ ಧರ್ಮವನ್ನು ತೊರೆದು ಹಿಂದೂ ಧರ್ಮಿಯಾಗಲಿರುವ ಇಂಡೋನೇಷ್ಯಾದ ಅಧ್ಯಕ್ಷನ ಪುತ್ರಿ: ಮುಸ್ಲಿಂ ದೇಶದಲ್ಲಿ ಭಾರೀ ಸಂಚಲನ!

ಇಂಡೋನೇಷ್ಯಾ: ಇಸ್ಲಾಂ ಧರ್ಮವೇ ಅತೀ ದೊಡ್ಡ ಧರ್ಮವಾಗಿರುವ ಇಂಡೋನೇಷ್ಯಾದಲ್ಲಿ ಇದೀಗ ಭಾರೀ ಸಂಚಲನವೊಂದು ಸೃಷ್ಟಿಯಾಗಿದೆ. ಇಲ್ಲಿನ ಮಾಜಿ ಅಧ್ಯಕ್ಷ, ಇಂಡೋನೇಷ್ಯಾದ ಸ್ಥಾಪಕ ಸುಕರ್ಣೋ ಅವರ ಪುತ್ರಿ ಸುಕ್ಮಾವತಿ ಸುಕರ್ಣೋಪುತ್ರಿ(70) ಇಸ್ಲಾಂ ಧರ್ಮ ತೊರೆದು ಹಿಂದೂ ಧರ್ಮಕ್ಕೆ ಮತಾಂತರ ಆಗಲಿರುವೆ ಎಂದು‌ ಘೋಷಿಸಿದ್ದಾರೆ. ಈ ವಿಚಾರ ಮುಸ್ಲಿಂ ದೇಶವಾದ ಇಂಡೋನೇಷ್ಯಾದಲ್ಲಿ ಇದೀಗ ಭಾರಿ ಸಂಚಲನ ಮೂಡಿಸಿದೆ. 

ಅ.26ರಂದು ಸುಕ್ಮಾವತಿಯವರ ಮತಾಂತರ ಕಾರ್ಯ ನಡೆಯಲಿದ್ದು, ಬಾಲಿ ಅಗುಂಗ್ ಸಿಂಗರಾಜದಲ್ಲಿ ಸುಕರ್ಣೋ ಸೆಂಟರ್ ಹೆರಿಟೇಜ್ ಏರಿಯಾದಲ್ಲಿ ಈ ಸಮಾರಂಭವನ್ನು ಆಯೋಜಿಸಲಾಗಿದೆ ಎನ್ನಲಾಗಿದೆ. ಈ ಮತಾಂತರಕ್ಕೆ ಸುಕ್ಮಾವತಿಯವರ ಮಕ್ಕಳು ಮತ್ತು ಕುಟುಂಬಸ್ಥರು ಸಂಪೂರ್ಣವಾಗಿ ಸಹಕಾರ ಸೂಚಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸುಕ್ಮಾವತಿಯವರ ವಕೀಲರಾದ ವಿಟಾರಿಯೊನೊ ಈ ಕುರಿತು ಸ್ಪಷ್ಟಪಡಿಸಿದ್ದಾರೆ.


ಸುಕ್ಮಾವತಿಯವರು ಸುಕರ್ಣೋ ಹಾಗೂ ಅವರ 3ನೇ ಪತ್ನಿ ಫಾತ್ಮವತಿಯ ಮೂರನೇ ಮಗಳು. ಅಲ್ಲದೆ ಇಂಡೋನೇಷಿಯಾದ ಅಧ್ಯಕ್ಷೆಯಾಗಿದ್ದ ಮೇಗಾವತಿಯವರ ಸಹೋದರಿ ಕೂಡ.  

ಸುಕ್ಮಾವತಿಯವರು, ಹಿಂದೂ ಧರ್ಮಶಾಸ್ತ್ರದ ವಿಷಯಗಳನ್ನು ಚೆನ್ನಾಗಿ ಓದಿದ್ದಾರೆ. ಹಿಂದೂ ಧರ್ಮವೇ ಶ್ರೇಷ್ಠ ಎಂದು ತಿಳಿದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಿಂದೂ ಧರ್ಮದಿಂದ ಪ್ರಭಾವಿತರಾಗಿರುವ ಅವರು ಮತಾಂತರಗೊಳ್ಳಲು ಸಿದ್ಧತೆ ನಡೆಸಿದ್ದಾರೆ ಎಂದು ವಕೀಲರಾದ ವಿಟಾರಿಯೊನೊ ಹೇಳಿಕೊಂಡಿದ್ದಾರೆ.

ಅದಲ್ಲದೆ 2018ರಲ್ಲಿ ಸುಕ್ಮಾವತಿ ಅವರು ಇಸ್ಲಾಂ ಧರ್ಮವನ್ನು ಅವಮಾನಿಸುವ ಕವಿತೆಯನ್ನು ಓದಿದ್ದರು. ಆ ಸಮಯದಲ್ಲಿ ಇದು ಭಾರಿ ವಿವಾದವನ್ನು ಸೃಷ್ಟಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಕೆಲವು ಇಸ್ಲಾಮಿಕ್ ಗುಂಪುಗಳು ಸುಕ್ಮಾವತಿ ವಿರುದ್ಧ ಧರ್ಮದ್ರೋಹದ ಆರೋಪವನ್ನು ಮಾಡಿದ್ದರು. ಬಳಿಕ ಸುಕ್ಮಾವತಿಯವರು ಈ ಬಗ್ಗೆ ಕ್ಷಮೆಯನ್ನು ಕೂಡಾ ಕೇಳಿದ್ದರು ಎನ್ನಲಾಗಿದೆ.

Ads on article

Advertise in articles 1

advertising articles 2

Advertise under the article

ಸುರ