ಪತ್ನಿ ಜೆನಿಲಿಯಾಗೆ “ಅಶ್ಲೀಲ ಆಂಟಿ” ಎಂದು ಲೇವಡಿ ಮಾಡಿರುವ ನೆಟ್ಟಿಗನಿಗೆ ರಿತೇಶ್ ದೇಶ್ ಮುಖ್ ನೀತಿ ಪಾಠ

ನವದೆಹಲಿ: ನಟ ರಿತೇಶ್ ದೇಶ್​ಮುಖ್‌ ಅವರು ತಮ್ಮ ಪತ್ನಿ, ನಟಿ ಜೆನಿಲಿಯಾ ಡಿಸೋಜಾರನ್ನು “ಅಶ್ಲೀಲ ಆಂಟಿ” ಎಂದು ಲೇವಡಿ ಮಾಡಿರುವ ನೆಟ್ಟಿಗನಿಗೆ ನೀತಿ ಪಾಠ ಮಾಡಿದ್ದಾರೆ. 

ರಿತೇಶ್ ದೇಶ್​ಮುಖ್‌-ಜೆನಿಲಿಯಾ ದಂಪತಿ ಇತ್ತೀಚಿಗಷ್ಟೇ ಅರ್ಬಾಜ್​ ಖಾನ್​ ಅವರು ನಡೆಸುಕೊಡುತ್ತಿರುವ ‘ಪಿಂಚ್’​ ಟಾಕ್​ ಶೋನಲ್ಲಿ ಭಾಗವಹಿಸಿದ್ದರು. ಈ ವೇಳೆ ಅರ್ಬಾಜ್​ ಖಾನ್​ ಅವರು ರಿತೇಶ್​ ಹಾಗೂ ಜೆನಿಲಿಯಾ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಕೆಲ ಕಾಮೆಂಟ್ಸ್​ಗಳನ್ನು ಓದಿದರು.

ನೆಟ್ಟಿಗನೊಬ್ಬ ತನ್ನ ಕಾಮೆಂಟ್ಸ್ ನಲ್ಲಿ ಜೆನಿಲಿಯಾ ವಯಸ್ಸು ಗುರಿಯಾಗಿರಿಸಿ ಆಕೆಯನ್ನು ಆಂಟಿ ಎಂದು ಸಂಭೋದಿಸಿದ್ದ. ಅಲ್ಲದೆ, ಆಕೆ ಯಾವಾಗಲೂ ಓವರ್​ ಆ್ಯಕ್ಟಿಂಗ್​ ಮಾಡುತ್ತಾರೆಂದು ಟೀಕಿಸಿದ್ದ. 

ಈ ರೀತಿ ಕಾಮೆಂಟ್​ ಮಾಡಿದವನನ್ನು ಉದ್ದೇಶಿಸಿ ಉತ್ತರಿಸಿದ ಜೆನಿಲಿಯಾ, ನಾನೇನು ಅಂತಹ ಅಸಭ್ಯ ಪಾತ್ರಗಳಲ್ಲಿ ಹೆಚ್ಚಾಗಿ ನಟಿಸಿಲ್ಲ. ನಾನು ಯಾವಾಗಲೋ ಮದುವೆಯಾಗಿರುವವಳು. ನೀವು ಮನೆಗೆ ಕರೆದುಕೊಂಡು ಹೋಗಲು ಇಷ್ಟಪಡುವಂತಹ ಸಭ್ಯ ಹುಡುಗಿ ಎಂದು ತಿರುಗೇಟು ನೀಡಿದ್ದಾರೆ.

ಇದೇ ವೇಳೆ ಅವರ ತಾರಾ ಪತಿ ರಿತೇಶ್​ ಕೂಡ ಪ್ರತಿಕ್ರಿಯೆ ನೀಡಿದ್ದು, ಅದಕ್ಕೂ ಮುನ್ನ ನೆಟ್ಟಿಗನ ಹೆಸರೇನು ಎಂದು ಕೇಳಿದ್ದಾರೆ‌‌. ಆಗ ಅರ್ಬಾಜ್ ಆತನ ಯೋಗದ ಪ್ರೊಫೈಲ್​ ಚಿತ್ರದೊಂದಿಗೆ ಶಾರ್ಟ್​ ನೇಮ್​ ಇದೆ ಎಂದು ಹೇಳಿದ್ದಾರೆ. ಆಗ ಅವರು, ಆತ ಚಿತ್ರದಲ್ಲಿರುವಂತೆ ಪ್ರತಿದಿನವೂ ಯೋಗವನ್ನು ಅಭ್ಯಾಸ ಮಾಡುವುದು ಒಳಿತು. ಅದರಲ್ಲೂ ಕಪಾಲಭಾತಿ ಮತ್ತು ಶವಾಸನವನ್ನು ಮರೆಯಬೇಡಿ ಎನ್ನುವ ಮೂಲಕ ನಿಮ್ಮ ಮನಸ್ಸಿನಲ್ಲಿರುವ ಕೊಳಕನ್ನು ತೆಗೆಯಿರಿ ಎಂದು ನೆಟ್ಟಿಗನಿಗೆ ರಿತೇಶ್​ ನೀತಿ ಪಾಠ ಮಾಡಿದ್ದಾರೆ. 

ಇನ್ನು ಜೆನಿಲಿಯಾ ಡಿಸೋಜ ಅವರು ತುಜೆ ಮೇರಿ ಕಸಮ್, ಸಾಂಬಾ, ಚೆನ್ನೈ ಕಾದಲ್, ಸಂತೋಷ್ ಸುಬ್ರಮಣ್ಯಂ, ಜಾನೆ ತು ಯಾ ಜಾನೆ ನಾ ಮತ್ತು ತೇರೇ ನಾಲ್ ಲವ್ ಹೋ ಗಯಾ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ರಿತೀಶ್ ದೇಶಮುಖ್ ಕೊನೆಯದಾಗಿ ಭಾಗಿ 3ರಲ್ಲಿ ಕಾಣಿಸಿಕೊಂಡಿದ್ದಾರೆ.