ನವದೆಹಲಿ:  ಯುವತಿಯೊಬ್ಬಳ
ಮೇಲೆ ಸಾಮುಹಿಕ ಅತ್ಯಾಚಾರ ಸೆವಗಿದ ಪ್ರಕರಣದಲಲ್ಇ ಅಟೋ ಚಾಲಕನೋರ್ವನನ್ನು ದೆಹಲಿ  ಪೊಲೀಸರು ಬಂಧಿಸಿದ್ದಾರೆ.
ಸೆಂಟ್ರಲ್ ದೆಹಲಿಯ ಐಟಿಓ ಪ್ರದೇಶದಲ್ಲಿ ಯುವತಿಯೊಬ್ಬಳನ್ನು ಸಾಮೂಹಿಕ
ಅತ್ಯಾಚಾರ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು.
27 ವರ್ಷದ ಮಹಿಳೆಯನ್ನು ಶನಿವಾರ  ಅಟೋ ರಿಕ್ಷಾ ಚಾಲಕ ಮತ್ತು ಇತರ ಮೂವರು ಸೇರಿ ಸಾಮೂಹಿಕ ಅತ್ಯಾಚಾರ
ಮಾಡಿದ್ದರು.  ಈಶಾನ್ಯ ದೆಹಲಿಯಿಂದ ಕಾಶ್ಮಿರಿ ಗೆಟ್
ಗೆ ತೆರಳಲು ಯುವತಿ ರಿಕ್ಷಾವನ್ನು ಹತ್ತಿದ್ದ  ವೇಳೆ
ಯುವತಿಯನ್ನು ಐಟಿಓ ಯಮುನಾ ಸೆತುವೆಯ  ಬಳಿಯ ಕೋಣೆಯೊಂದಕ್ಕೆ
ಕರೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. 
ಈ ಬಗ್ಗೆ  ಯುವತಿ ದೂರು
ನೀಡಿದ್ದು ಪ್ರಕರಣ ದಾಖಲಿಸಿಕೊಂಡ  ಪೊಲೀಸರು ಆರೋಪಿ
ರಿಕ್ಷಾ ಚಾಲಕನನ್ನು ಬಂಧಿಸಿದ್ದಾರೆ