-->

ಫೇಸ್ ಬುಕ್ ನಲ್ಲಿ ಯುವತಿಯರ ಹೆಸರಿನಲ್ಲಿ ಖಾತೆ ತೆರೆದು ಹನಿಟ್ರ್ಯಾಪ್ - ಮೈ ಮುಟ್ಟದೆ ಬೆತ್ತ*ಲೆ ಗೊಳಿಸುತ್ತಿದ್ದವರು ಅಂದರ್!

ಫೇಸ್ ಬುಕ್ ನಲ್ಲಿ ಯುವತಿಯರ ಹೆಸರಿನಲ್ಲಿ ಖಾತೆ ತೆರೆದು ಹನಿಟ್ರ್ಯಾಪ್ - ಮೈ ಮುಟ್ಟದೆ ಬೆತ್ತ*ಲೆ ಗೊಳಿಸುತ್ತಿದ್ದವರು ಅಂದರ್!



ಬೆಂಗಳೂರು: ಸಾಮಾಜಿಕ ಜಾಲತಾಣದ ಮೂಲಕ ಹನಿಟ್ರ್ಯಾಪ್ ದಂಧೆ  ನಡೆಸುತ್ತಿದ್ದ ತಂಡವೊಂದನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. 

ಯುವತಿಯರ  ಹೆಸರಲ್ಲಿ ಫೇಸ್​ಬುಕ್​ನಲ್ಲಿ ನಕಲಿ ಖಾತೆ ತೆರೆದು ಇವರು ಬ್ಲ್ಯಾಕ್​ಮೇಲ್​ ಮಾಡುತ್ತಿದ್ದು ಮೈಮುಟ್ಟದ ಬಟ್ಟೆ ಬಿಚ್ಚಿಸಿ ಹಣ ವಸೂಲಿ ಮಾಡುತ್ತಿದ್ದ ಈ ಗ್ಯಾಂಗ್ ಇದೀಗ ಸಿಐಡಿ ಬಲೆಗೆ ಬಿದ್ದಿದೆ.

ರಾಜಸ್ಥಾನ ಮೂಲದ ಕಸಮ್ ಖಾನ್,ಸಾಕಿರ್,  ಜಮೀಲ್ ಖಾನ್ ಬಂಧಿತರು.ಇವರನ್ನು  ಸಿಐಡಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. 

Honeytrap  ಬಗ್ಗೆ ಸಿಐಡಿಯಲ್ಲಿ ಹಲವು ದೂರುಗಳು ದಾಖಲಾಗಿದ್ದವು.  ಈ  ಹಿನ್ನೆಲೆಯಲ್ಲಿ ತನಿಖೆಗಿಳಿದ ಸಿಐಡಿ ಪೊಲೀಸರು  ಮೂರು ಮಂದಿಯನ್ನು ಬಂಧಿಸಿದ್ದಾರೆ.

ಇವರು ಯುವತಿಯರ ಹೆಸರಿನಲ್ಲಿ ಫೇಸ್​ಬುಕ್​ ಖಾತೆ ತೆರೆದು ಫೇಸ್​​ಬುಕ್ ಮೂಲಕವೇ ಯುವಕರ ಮೊಬೈಲ್​ಫೋನ್​ ನಂಬರ್ ಪಡೆದುಕೊಂಡು ವಿಡಿಯೋ ಕಾಲ್ ಮಾಡುತ್ತಿದ್ದರು. ವಿಡಿಯೋ ಕಾಲ್​ನಲ್ಲಿ ‌ಮಾದಕವಾಗಿ  ಮಾತನಾಡಿಸಿ, ಅವರ ಬಟ್ಟೆ ಬಿಚ್ಚಿಸುತ್ತಿದ್ದರು.


ಇದನ್ನು ರೆಕಾರ್ಡ್ ಮಾಡಿಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಲು ಶುರುವಿಟ್ಟುಕೊಳ್ಳುವ ಇವರು ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದರು.



 ಈ ಗ್ಯಾಂಗ್ ಬಗ್ಗೆ  ಮಾಹಿತಿ ಕಲೆ ಹಾಕಿದ ಸಿಐಡಿ ಪೊಲೀಸರು ಆರೋಪಿಗಳ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.


 .

Ads on article

Advertise in articles 1

advertising articles 2

Advertise under the article