ಅಮೇರಿಕಾದಿಂದ ಬಂದು ಅಪ್ಪನ ಅಂತಿಮ ದರ್ಶನ ಪಡೆದ ಪುನಿತ್ ರಾಜ್ ಕುಮಾರ್ ಪುತ್ರಿ


ಬೆಂಗಳೂರು: ಅಮೇರಿಕಾದಲ್ಲಿದ್ದ  ಪುನೀತ್ ರಾಜ್ ಕುಮಾರ್ ಪುತ್ರಿ ಧೃತಿ ಬೆಂಗಳೂರಿಗೆ ಬಂದು  ತಂದೆಯ ಅಂತಿಮ ದರ್ಶನವನ್ನು ಪಡೆದರು.



ಪುನೀತ್ ರಾಜ್ ಕುಮಾರ್ ನಿಧನರಾದ ಸುದ್ದಿ ಬಂದಾಗ ಧೃತಿ ಅಮೇರಿಕಾದಲ್ಲಿದ್ದರು.  ಈ ಸುದ್ದಿ ತಿಳಿಯುತ್ತಿದ್ದಂತೆಯೇ ಧೃತಿ  ಅವರು ಕೂಡಲೇ ಅಮೆರಿಕಾದಿಂದ ತವರಿನತ್ತ  ವಿಶೇಷ ವಿಮಾನದ ಮೂಲಕ ಹೊರಟಿದ್ದರು.

ಅಮೇರಿಕಾದಿಂದ ವಿಶೇಷ ವಿಮಾನದಲ್ಲಿ ಹೊರಟಿದ್ದ ಅವರು ಇಂದು ಮಧ್ಯಾಹ್ನ ದೆಹಲಿಗೆ ಬಂದಿಳಿದು ಅಲ್ಲಿಂದ  ವಿಶೇಷ ವಿಮಾನದ ಮೂಲಕ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸಂಜೆ 4.15ರ ಸುಮಾರಿಗೆ ತಲುಪಿದ್ದಾರೆ.





 ಪೊಲೀಸ್ ಭದ್ರತೆಯಲ್ಲಿಯೇ ಬೆಂಗಳೂರು ವಿಮಾನ‌ನಿಲ್ದಾಣದಿಂದ ನೇರವಾಗಿ  ಸದಾಶಿವ ನಗರದ ನಿವಾಸಕ್ಕೆ  ತೆರಳಿ ಅಲ್ಲಿಂದ ಕಂಠೀರವ ಸ್ಟೇಡಿಯಂಗೆ ಬಂದಿದ್ದಾರೆ. ಅಲ್ಲಿ ಅಪ್ಪನಿಗೆ ಅಂತಿಮ ನಮನವನ್ನು ಸಲ್ಲಿಸಿದರು. 



ಧೃತಿ ಅಮೇರಿಕಾದಿಂದ ಬಂದ  ಬಳಿಕ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ  ಕತ್ತಲಾವರಿಸುತ್ತಿರುವುದರಿಂದ ಪುನೀತ್ ಅಂತ್ಯ ಕ್ರಿಯೆ ನಾಳೆ ನಡೆಯಲಿದೆ.