ಮಂಗಳವಾರ ಸುಳ್ಯ ನ್ಯಾಯಾಲಯಕ್ಕೆ ಹಾಜರಾಗಲಿರುವ ಡಿ ಕೆ ಶಿವಕುಮಾರ್


ಮಂಗಳೂರು ; ಕೆಪಿಸಿಸಿ ಅಧ್ಯಕ್ಷ ‌ಡಿ ಕೆ ಶಿವಕುಮಾರ್ ಮಂಗಳವಾರ ಸುಳ್ಯ ನ್ಯಾಯಾಲಯಕ್ಕೆ ‌ಹಾಜರಾಗಲಿದ್ದಾರೆ.

ಇಂಧನ ಸಚಿವರಾಗಿದ್ದ ವೇಳೆ ನಡೆದಿದ್ದ ಪ್ರಕರಣವೊಂದರಲ್ಲಿ ಡಿ ಕೆ ಶಿವಕುಮಾರ್ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಸತತ ಗೈರಿನಿಂದ ಅವರಿಗೆ ವಾರಂಟ್ ಇಸ್ಯು ಮಾಡಲಾಗಿತ್ತು. ಇತ್ತೀಚಿಗೆ ನವೆಂಬರ್ 9 ರೊಳಗೆ ಹಾಜರಾಗುವಂತೆ ಕೋರ್ಟ್ ಸೂಚನೆ ನೀಡಿತ್ತು.

ಈ ಹಿನ್ನೆಲೆಯಲ್ಲಿ ಮಂಗಳವಾರ ( ಅಕ್ಟೋಬರ್ 5 ) ರಂದು ಅವರು ಸುಳ್ಯ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ. ಅಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರು ತಲುಪುವ ಅವರು 11.30 ಕ್ಕೆ ಸುಳ್ಯ ನ್ಯಾಯಾಲಯಕ್ಕೆ ತಲುಪಲಿದ್ದಾರೆ. 


ನ್ಯಾಯಾಲಯಕ್ಕೆ ಹಾಜರಾದ ಬಳಿಕ 1.30 ಕ್ಕೆ ಕುಕ್ಕೆ ಸುಬ್ರಹ್ಮಣ್ಯ  ಕ್ಕೆ ಹೋಗಲಿದ್ದು ಅಲ್ಲಿ ದೇವರ ದರ್ಶನ ಬಳಿಕ ಮಂಗಳೂರಿಗೆ ತೆರಳಲಿದ್ದಾರೆ. ರಾತ್ರಿ 8 ಗಂಟೆಗೆ ಬೆಂಗಳೂರಿಗೆ ಹೋಗಲಿದ್ದಾರೆ.