ಸ್ಕಾಂಟ್ಲೆಂಡ್: ಹೆತ್ತವರ ಮೊಬೈಲ್ ಚಪಲಕ್ಕೆ ಹೆಣ್ಣು ಮಗುವೊಂದು ಬಲಿಯಾದ ಹೃದಯವಿದ್ರಾವಕ ಘಟನೆ ಸ್ಕಾಂಟ್ಲೆಂಡ್‌ನಲ್ಲಿ ನಡೆದಿದೆ.
ಮಗು ರೂಂನಲ್ಲಿ ಮಲಗಿದ್ದು, ಅದರ ಅಪ್ಪ-ಅಮ್ಮ ಇಬ್ಬರೂ ಮೊಬೈಲ್‌ನಲ್ಲಿ ಗೇಮ್ಸ್ ಆಡುತ್ತಾ ಹಾಲ್ ನಲ್ಲಿ ಇದ್ದರು. ಅಲ್ಲದೆ ಟಿವಿಯನ್ನೂ ನೋಡುತ್ತಿದ್ದರಂತೆ. ಆದರೆ ರೂಂನಲ್ಲಿ ಮಲಗಿದ್ದ ಮಗು ಹೊರಳಾಡಿ ಮಂಚದಿಂದ ಬಿದ್ದು, ತಲೆಗೆ ಏಟು ಮಾಡಿಕೊಂಡು ವಿಪರೀತ ರಕ್ತಸ್ರಾವವಾಗಿ ಮೃತಪಟ್ಟಿದೆ.
ವಿಚಿತ್ರ ಸಂಗತಿಯೆಂದರೆ ಹೆತ್ತವರಿಗೆ ಮರುದಿನ ಮಧ್ಯಾಹ್ನದವರೆಗೂ ಮಗು ಮೃತಪಟ್ಟಿರುವ ವಿಷಯವೇ ತಿಳಿದಿಲ್ಲವಂತೆ.
ನಾಲ್ಕು ವರ್ಷಗಳ ಹಿಂದೆ ಪ್ರಕರಣ ನಡೆದಿದ್ದು, ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿತ್ತು. ಪ್ರಕರಣದ ತೀರ್ಪು ಇದೀಗ ಹೊರಬಿದ್ದಿದ್ದು, ನ್ಯಾಯಾಲಯ ತಂದೆಯನ್ನು ದೋಷಿ ಎಂದು ತೀರ್ಪು ನೀಡಿದೆ. ಹೆಣ್ಣುಮಗುವೊಂದನ್ನೇ ಹಾಸಿಗೆ ಮೇಲೆ ಮಲಗಿಸಿ ತಂದೆತಾಯಿ ಹಾಲ್‌ನಲ್ಲಿ ಮೊಬೈಲ್, ಟಿವಿಯಲ್ಲಿ ಬ್ಯುಸಿಯಾಗಿದ್ದರು.
ಮರುದಿನ ಮೂರು ಗಂಟೆವರೆಗೂ ಮಗು ಸತ್ತಿದೆ ಎನ್ನುವ ವಿಷಯ ಅವರಿಗೆ ತಿಳಿದೇ ಇಲ್ಲವೆನ್ನುವುದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತ್ತು. ಇದೀಗ 24 ವರ್ಷದ ಮಗುವಿನ ತಾಯಿ ತನ್ನನ್ನು ದೋಷಿ ಎಂದು ತೀರ್ಪು ನೀಡದಂತೆ ವಿನಂತಿಸಿದ್ದು, ನ್ಯಾಯಾಲಯ ಅದನ್ನು ಸ್ವೀಕರಿಸಿದೆ.