Big Shock:ಪುನೀತ್ ರಾಜ್ ಕುಮಾರ್ ಇನ್ನಿಲ್ಲ- ಸಾವಿನಲ್ಲೂ ತ್ಯಾಗ ಮಾಡಿದ ಅಪ್ಪು

 



ಬೆಂಗಳೂರು: ಹೃದಯಾಘಾತದಿಂದ ಗಂಭಿರವಾಗಿ ಚಿಕಿತ್ಸೆ ಪಡೆಯುತ್ತಿದ್ದ  ಖ್ಯಾತ ನಟ ಪುನೀತ್ ರಾಜ್ ಕುಮಾರ್  ಕೊನೆಯುಸಿರೆಳೆದಿದ್ದಾರೆ

 

46 ವರ್ಷದ ಪುನೀತ್ ರಾಜ್ ಕುಮಾರ್ ಗೆ ಬೆಳಿಗ್ಗೆ 11.30 ಕ್ಕೆ ಎದೆನೋವು ಕಾಣಿಸಿಕೊಂಡಿದ್ದು ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ಬರುವ ವೇಳೆಗೆ ಅವರ ಸ್ಥಿತಿ ಗಂಭೀರವಾಗಿದ್ದು ಈಗ ಯಾವುದನ್ನು ಹೇಳುವ ಸ್ಥಿತಿಯಲ್ಲಿ ಇಲ್ಲ ಎಂದು ವೈದ್ಯರು ಹೇಳಿದ್ದರು.

 

 

ಪುನೀತ್ ರಾಜ್ ಕುಮಾರ್ ಅವರನ್ನು ವಿಕ್ರಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನಿಡಲಾಗುತ್ತಿತ್ತು.  ಪುನೀತ್ ರಾಜ್ ಕುಮಾರ್ ಅವರು ನಿಧನರಾಗಿದ್ದು ಇದೀಗ ಕಂಠಿರವ ಸ್ಟೇಡಿಯಂನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.

 

ಕಣ್ಣು ದಾನ:

 

ಪುನೀತ್ ರಾಜ್ ಕುಮಾರ್ ಸಾವಿನಲ್ಲೂ ತ್ಯಾಗ ಮಾಡಿದ್ದು ಅವರ ಕಣ್ಣುಗಳನ್ನು ದಾನ ಮಾಡಲು ಕುಟುಂಬ ವರ್ಗ ನಿರ್ಧರಿಸಿದೆ. ಪುನೀತ್ ನಿಧನ ಸುದ್ದಿ ಯಿಂದ ಕನ್ನಡ ಚಿತ್ರರಂಗ ಕಣ್ಣೀರಾಗಿದೆ.