-->
ಭಾರತದ ವಿರುದ್ಧ ಗೆಲುವಿನ ನಗೆ ಬೀರಿದ ಪಾಕ್ ಕ್ರಿಕೆಟ್  ನಾಯಕನಿಗೆ ಸಂಕಟವಾದಳು ಈ ಯುವತಿ!

ಭಾರತದ ವಿರುದ್ಧ ಗೆಲುವಿನ ನಗೆ ಬೀರಿದ ಪಾಕ್ ಕ್ರಿಕೆಟ್ ನಾಯಕನಿಗೆ ಸಂಕಟವಾದಳು ಈ ಯುವತಿ!

ಇಸ್ಲಮಾಬಾದ್​: ಟಿ20 ವಿಶ್ವಕಪ್​ ಪಂದ್ಯದ ಮೊದಲ ಪಂದ್ಯದಲ್ಲೇ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಜಯಭೇರಿ ಭಾರಿಸಿದ ಸಂತಸದಲ್ಲಿ ಪಾಕಿಸ್ತಾನ ತೇಲಾಡುತ್ತಿದೆ. ಅದರಲ್ಲೂ ಪಾಕ್​ ತಂಡದ ನಾಯಕ ಬಾಬರ್​ ಅಜಾಮ್​ ಬಗ್ಗೆ ಭರಪೂರ ಮೆಚ್ಚುಗೆಯ ಸುರಿಮಳೆಯೇ ಹರಿಯುತ್ತಿದೆ. ಅಲ್ಲದೆ, ಅವರನ್ನು ಹೀರೊ ಎಂಬರ್ಥದಲ್ಲಿ ಬಿಂಬಿಸಲಾಗುತ್ತಿದೆ. ಆದರೆ, ಈ ನಡುವೆ ಅವರ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬರುತ್ತಿದೆ. ಆತ ಹೀರೋ ಅಲ್ಲ ವಿಲನ್ ಎಂದು ಯುವತಿಯೊಬ್ಬಳು ಆರೋಪಿಸಿದ್ದಾಳೆ. 

ಹಮೀಜಾ ಮುಕ್ತಾರ್ ಎಂಬ ಯುವತಿಯೇ ಪಾಕ್ ನಾಯಕನ ವಿರುದ್ಧ ಈ ಗಂಭೀರ ಆರೋಪ ಮಾಡಿದವಳು. ಇದೀಗ ಇಡೀ ಪಾಕ್​ನಲ್ಲಿ ಕೋಲಾಹಲ ಸೃಷ್ಟಿಸಿದೆ. ಒಂದೆಡೆ ಪಾಕ್​ ಭಾರತದ ವಿರುದ್ಧ ಗೆಲುವು ಸಾಧಿಸಿದ ವಿಜಯೋತ್ಸವದಲ್ಲಿದ್ದರೆ, ತಂಡದ ನಾಯಕನಿಗೆ ಮಾತ್ರ ಈ ಹಮೀಜಾ ಮುಕ್ತಾರ್​ ಬಿಸಿ ತಲೆನೋವಾಗಿ ಪರಿಣಮಿಸಿದ್ದಾಳೆ.

ಬಾಬರ್​ ವಿರುದ್ಧ ಆಕೆ ಸಾಕಷ್ಟು ಸಮಯಗಳ ಹಿಂದೆಯೇ ಗಂಭೀರ ಆರೋಪ ಮಾಡಿದ್ದಳು.‌ಇದೇ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ತನ್ನನ್ನು ತಾನು ಬಾಬರ್​ ಗರ್ಲ್​ಫ್ರೆಂಡ್​ ಎಂದು ಹೇಳಿಕೊಂಡಿರುವ ಮುಕ್ತಾರ್​, ಆತ ನನ್ನನ್ನು ದೇಹತೃಷೆಗೆ ಬಳಸಿಕೊಂಡು ಗರ್ಭಿಣಿಯಾದ ಬಳಿಕ ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾನೆಂದು ಆರೋಪ ಮಾಡಿದ್ದಾರೆ.

ಕೆಲವರ್ಷಗಳ ಹಿಂದೆಯೇ ಬಾಬರ್​ ವಿವಾದವೊಂದಕ್ಕೆ ಸಿಲುಕಿದ್ದಾರೆ. ಅದೇ ರೀತಿ ಬಾಬರ್​ ಸುದ್ದಿಯಾದಗಲೆಲ್ಲ ಅವರ ಮೇಲಿನ ಈ ಗಂಭೀರ ಆರೋಪವೂ ಸುದ್ದಿಯಾಗುತ್ತಲೇ ಇರುತ್ತದೆ. ವಿವಾಹವಾಗುವೆನೆಂದು ನಂಬಿಸಿರುವ ಬಾಬರ್ ತನ್ನನ್ನು ಲೈಂಗಿಕವಾಗಿ ಬಳಸಿಕೊಂಡು ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾನೆಂದು ಕೈಯಲ್ಲಿ ಕುರಾನ್​ ಹಿಡಿದು ಮುಕ್ತಾರ್ ಆರೋಪಿಸಿದ್ದಾಳೆ. ಇದನ್ನು ಪಾಕ್​ ಮಾಧ್ಯಮವೊಂದರ ಸಂದರ್ಶನದಲ್ಲಿ ಮುಕ್ತಾರ್​ ಮುಕ್ತವಾಗಿ ಹೇಳಿಕೊಂಡಿದ್ದಾಳೆ.

 ಅದಲ್ಲದೆ, ಬಾಬರ್​ ವಿರುದ್ಧ ಮುಕ್ತಾರ್​ ನ್ಯಾಯಾಲಯದಲ್ಲಿ ಮೆಟ್ಟಿಲೇರಿದ್ದಾಳೆ. ಈ ಪ್ರಕರಣವನ್ನು ಹಿಂಪಡೆದುಕೊಳ್ಳಲು ಬಾಬರ್​ ಕುಟುಂಬ 20 ಲಕ್ಷ ರೂ. ಆಫರ್​ ಕೂಡಾ ನೀಡಿದೆ ಎಂದು ಮತ್ತೊಂದು ಆರೋಪ ಮಾಡಿದ್ದಾಳೆ. ಅಲ್ಲದೆ, ಹಣ ಪಡೆದುಕೊಂಡು ಹಿಂತಿರುಗಿಸದೆ ವಂಚನೆ ಮಾಡಲಾಗಿದೆ ಎಂಬ ಆರೋಪವನ್ನು ಮಾಡಿದ್ದಾಳೆ.

"ನಾನು ಹಾಗೂ ಬಾಬರ್​ ಪರಸ್ಪರ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದೆವು. 2011ರಲ್ಲಿ ಇಬ್ಬರೂ ಮನೆ ಬಿಟ್ಟು ಓಡಿ ಬೇರೆಡೆ ನೆಲೆಸಿದ್ದೆವು. ಈ ಸಂದರ್ಭ ನಾವಿಬ್ಬರೂ ಲಾಹೋರ್​ನಲ್ಲಿ ಲಿವಿಂಗ್​ ಟುಗೆದರ್​ನಲ್ಲಿದ್ದೆವು. ಇದಕ್ಕೆ ಸಂಬಂಧಿಸಿದಂತೆ ಸಾಕಷ್ಟು ದಾಖಲೆಗಳು ಹಾಗೂ ಸಾಕ್ಷಿಗಳು ನನ್ನ ಬಳಿ ಇವೆ ಎಂದು ಮುಕ್ತಾರ್​ ಹೇಳಿಕೊಂಡಿದ್ದಾರೆ. ಇದೀಗ ಬಾಬರ್​ ಹೆಸರು ಹೆಚ್ಚಾಗಿ ಕೇಳಿಬರುತ್ತಿರುವುದರಿಂದ, ಆತನ ವಿರುದ್ಧದ ಆರೋಪವೂ ಮತ್ತೆ ಚರ್ಚೆಗೆ ಗ್ರಾಸವಾಗಿದೆ. 

Ads on article

Advertise in articles 1

advertising articles 2

Advertise under the article