-->
ಮಧ್ಯರಾತ್ರಿ ಗರ್ಲ್ ಫ್ರೆಂಡ್ ಬೆಡ್ ರೂಂ ಬಾಗಿಲು ಬಡಿದ ಯುವಕ ಮಾಡಿದ್ದೇನು ಗೊತ್ತೇ?

ಮಧ್ಯರಾತ್ರಿ ಗರ್ಲ್ ಫ್ರೆಂಡ್ ಬೆಡ್ ರೂಂ ಬಾಗಿಲು ಬಡಿದ ಯುವಕ ಮಾಡಿದ್ದೇನು ಗೊತ್ತೇ?

ಹೈದರಾಬಾದ್​: ಮಧ್ಯರಾತ್ರಿ ಗರ್ಲ್​ಫ್ರೆಂಡ್​ ಮನೆಗೆ ನುಗ್ಗಿದ ಯುವಕನೋರ್ವ ಬೆಡ್​ರೂಮ್​ಗೆ ಬಾಗಿಲು ಬಡಿದಿದ್ದಾನೆ. ಬಾಗಿಲು ತೆಗೆದ ಆಕೆಯ ಕತ್ತನ್ನು ಹರಿತವಾದ ಚಾಕುವಿನಿಂದ ಸೀಳಿ ಹತ್ಯೆ ಮಾಡಲು ಯತ್ನಿಸಿದ ಘಟನೆ ಹೈದರಾಬಾದ್​ನ ಗಾಚಿಬೌಲಿ ಪೊಲೀಸ್​ ಠಾಣಾ ವ್ಯಾಪ್ತಿಯ ವಟ್ಟಿನಗುಪಲ್ಲಿಯಲ್ಲಿ ನಡೆದಿದೆ.

ಆರೋಪಿ ಜೀಡಿಮೆಟ್ಲ ನಿವಾಸಿ, ಕುಕಟಪಲ್ಲಿ ಹೌಸಿಂಗ್ ಬೋರ್ಡ್ ಕಾಲನಿ (ಕೆಪಿಬಿಎಚ್) ಎಂಎನ್​ಆರ್​ ಪದವಿ ಕಾಲೇಜಿನ ವಿದ್ಯಾರ್ಥಿ‌ ಬಯಾನಾ ಪ್ರೇಮ್​ ಸಿಂಗ್​ (21) ಕೊಲೆ ಮಾಡಲು ಯತ್ನಿಸಿದ ಆರೋಪಿ. ಮಧುಫುರ್​ನ ವೆಂಕಟೇಶ್ವರ ಫೈನ್​ ಆರ್ಟ್ಸ್​ ಕಾಲೇಜಿನ ವಿದ್ಯಾರ್ಥಿನಿ ರುಖಿ ಸಿಂಗ್​ (21)‌ ಗಾಯಾಳು ಯುವತಿ.

ಯುವತಿ ಜೋರಾಗಿ ಕೂಗಿ ಕೊಳ್ಳುತ್ತಿದ್ದಂತೆ ಎಚ್ಚೆತ್ತ ಪಾಲಕರು ಆರೋಪಿ ಯುವಕನನ್ನು ಹಿಡಿದು, ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. 

ರುಖಿ ಸಿಂಗ್ ಹಾಗೂ ಬಯಾನಾ ಪ್ರೇಮ್​ ಸಿಂಗ್ ಇಬ್ಬರೂ ಸಂಬಂಧಿಕರು. ಇದರಿಂದ ಒಬ್ಬರಿಗೊಬ್ಬರು ಪರಿಯಸ್ಥರಾಗಿದ್ದರು. ಬುಧವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಪ್ರೇಮ್​ ಸಿಂಗ್​, ವಟ್ಟಿನಗುಲಪಲ್ಲಿಯಲ್ಲಿನ ರುಖಿ ಸಿಂಗ್​ ಮನೆಗೆ ಹೋಗಿದ್ದು, ಆಕೆಯ ಬೆಡ್​ ರೂಮ್​ ಬಾಗಿಲನ್ನು ಬಡಿಯುತ್ತಾನೆ. ರುಖಿ ಸಿಂಗ್ ಬಾಗಿಲು ತೆಗೆಯುತ್ತಿದ್ದಂತೆ ಆರೋಪಿ ಆಕೆಯ ಕತ್ತು ಸೀಳಲು  ಯತ್ನಿಸಿದ್ದಾನೆ. ಇದರಿಂದ ಆತಂಕಕ್ಕೆ  ಒಳಗಾದ ರುಖಿ ಸಿಂಗ್​ ಜೋರಾಗಿ ಬೊಬ್ಬೆ ಇಟ್ಟಿದ್ದಾಳೆ.

ತಕ್ಷಣ ಎಚ್ಚರಗೊಂಡ ಕುಟುಂಬಸ್ಥರು ಆರೋಪಿಯನ್ನು ಹಿಡಿದು, ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಅದೇ ರೀತಿ ಚಾಕುವಿನ ದಾಳಿಯಿಂದ ಗಂಟಲು, ಅಂಗೈ, ಕಾಲು ಹಾಗೂ ಮೊಣಕೈಯಲ್ಲಿ ಗಾಯಗೊಂಡಿದ್ದ ರುಖಿ ಸಿಂಗ್​ಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆರೋಪಿ ಪ್ರೇಮ್​ ಸಿಂಗ್​ ಗಾಂಜಾ ನಶೆಯಲ್ಲಿ ಈ ಕೃತ್ಯ ಎಸಗಿದ್ದಾನೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. 

ಪ್ರಕರಣ ಸಂಬಂಧ ಗಾಚಿಬೌಲಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌ 

Ads on article

Advertise in articles 1

advertising articles 2

Advertise under the article