-->
ಗೋವಾದಲ್ಲಿ ‘ಆಲ್ಕೊಹಾಲ್​ ಮ್ಯೂಸಿಯಂ’ ಆರಂಭ: ಶತಮಾನಗಳ ಹಿಂದಿನ ಮದ್ಯ ಬಾಟಲಿಗಳು ಇಲ್ಲಿ ಲಭ್ಯ

ಗೋವಾದಲ್ಲಿ ‘ಆಲ್ಕೊಹಾಲ್​ ಮ್ಯೂಸಿಯಂ’ ಆರಂಭ: ಶತಮಾನಗಳ ಹಿಂದಿನ ಮದ್ಯ ಬಾಟಲಿಗಳು ಇಲ್ಲಿ ಲಭ್ಯ

ಪಣಜಿ: ಮದ್ಯಪ್ರಿಯರಿಗೆ  ವಿಶೇಷವಾಗಿ ಆಸಕ್ತಿ ಮೂಡಿಸಬಲ್ಲ ಭಾರತದ ಮೊಟ್ಟಮೊದಲ ‘ಆಲ್ಕೊಹಾಲ್​ ಮ್ಯೂಸಿಯಂ’ ಗೋವಾದಲ್ಲಿ ನಿರ್ಮಾಣವಾಗಿದೆ. ಈ ಮೂಲಕ‌ ಮದ್ಯಪ್ರಿಯರಿಗೆ ಕುತೂಹಲ ಕೆರಳಿಸುವ ವಿವಿಧ ಬ್ರ್ಯಾಂಡ್ ಗಳ ಮದ್ಯಗಳನ್ನು ಇಲ್ಲಿ ವೀಕ್ಷಿಸಬಹುದು.

ನಂದನ್​ ಕುಡ್​ಚಡ್ಕರ್ ಎಂಬ ಸ್ಥಳೀಯ ಉದ್ಯಮಿಯೋರ್ವರು ​ಉತ್ತರ ಗೋವಾದ ಕ್ಯಾಂಡೋಲಿಂನಲ್ಲಿ​ ಈ ‘ಆಲ್​ ಎಬೌಟ್ ಆಲ್ಕೊಹಾಲ್​’ ಎಂಬ ಮ್ಯೂಸಿಯಂ ಅನ್ನು ತೆರೆದಿದ್ದಾರೆ.

ಈ ಮ್ಯೂಸಿಯಂನಲ್ಲಿ ಶತಮಾನಗಳ ಹಿಂದಿನ ಆಲ್ಕೊಹಾಲ್ ಬಾಟಲಿಗಳು, ಗ್ಲಾಸ್​ಗಳು ಮತ್ತು ಉತ್ಪಾದನಾ ಯಂತ್ರಗಳನ್ನು ಜೋಡಿಸಲಾಗಿದೆ. ಗೋವಾದ ಖ್ಯಾತ ಹಾಗೂ ಪಾರಂಪರಿಕ ಪಾನೀಯವಾದ​ ಫೇನಿ ಬಗ್ಗೆಯೂ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಇದಾಗಿದೆ ಎಂದು ಉದ್ಯಮಿ​ ಹೇಳಿದ್ದಾರೆಂದು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

Ads on article

Advertise in articles 1

advertising articles 2

Advertise under the article

holige copy 1.jpg