-->
ಆನ್ ಲೈನ್ ಮೂಲಕ ಈ ಮಗು ತಿಂಗಳಿಗೆ 75 ಸಾವಿರ ರೂ. ಸಂಪಾದನೆ ಮಾಡುತ್ತಿದೆಯಂತೆ ಹೇಗೆ ಗೊತ್ತೇ?

ಆನ್ ಲೈನ್ ಮೂಲಕ ಈ ಮಗು ತಿಂಗಳಿಗೆ 75 ಸಾವಿರ ರೂ. ಸಂಪಾದನೆ ಮಾಡುತ್ತಿದೆಯಂತೆ ಹೇಗೆ ಗೊತ್ತೇ?

ನ್ಯೂಯಾರ್ಕ್: ಆಧುನಿಕ ಯುಗದಲ್ಲಿ ಬಹಳಷ್ಟು ಮಂದಿ‌ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯಲ್ಲಿ  ಹಲವಾರು ರೀತಿಯಲ್ಲಿ ಪ್ರಸಿದ್ದರಾಗುತ್ತಿರುವುದನ್ನು ನಾವು ನೋಡುತ್ತಲೇ ಇರುತ್ತೇವೆ. ಈ ಮೂಲಕ ತಮ್ಮದೇ ಆದ ಗುರುತಿಸುವಿಕೆಯನ್ನು ಮೂಡಿಸುತ್ತಿದ್ದಾರೆ. ಇದೇ ರೀತಿಯಲ್ಲಿ ಒಂದು ವರ್ಷದ ಮಗುವೊಂದು ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ತಿಂಗಳಿಗೆ 75 ಸಾವಿರ ರೂ. ಸಂಪಾದನೆ ಮಾಡುತ್ತಿದೆ ಎಂದರೆ ನೀವು ನಂಬಲೇ ಬೇಕು.

ಡೈಲಿ ಮೇಲ್ ಪ್ರಕಾರ, ಕಳೆದ ವರ್ಷ ಅ.14 ರಂದು ಜನಿಸಿದ ಬ್ರಿಗ್ಸ್ ಹೆಸರಿನ ಈ ಮಗು ಕೇವಲ ಮೂರು ವಾರಗಳ ವಯಸ್ಸಿನಲ್ಲಿ ತನ್ನ ಮೊದಲ ಪ್ರವಾಸ ಮಾಡಿದೆ. ಎಲ್ಲರ ಆಕರ್ಷಣೆಗೆ ಒಳಗಾಗಿರುವ ಈ ಮಗು ಈಗಾಗಲೇ 45 ವಿಮಾನಗಳಲ್ಲಿ ಪ್ರಯಾಣ ಬೆಳೆಸಿದೆ. ಅಲಾಸ್ಕಾ, ಕ್ಯಾಲಿಫೋರ್ನಿಯಾ, ಫ್ಲೋರಿಡಾ, ಉತಾಹ್ ಹಾಗೂ ಇಡಾಹೋ ಸೇರಿದಂತೆ 16 ಯುಎಸ್ ರಾಜ್ಯಗಳಿಗೆ ಭೇಟಿ ನೀಡಿದೆ. ಅಲಾಸ್ಕಾದ ಕರಡಿಗಳನ್ನು, ಯೆಲ್ಲೊಸ್ಟೋನ್ ರಾಷ್ಟ್ರೀಯ ಉದ್ಯಾನದಲ್ಲಿ ತೋಳಗಳನ್ನು, ಉತಾಹ್ ನ ಸೂಕ್ಷ್ಮವಾದ ಕಮಾನು ಮತ್ತು ಕ್ಯಾಲಿಫೋರ್ನಿಯಾದ ಕಡಲತೀರಗಳನ್ನು ಮಗು ಈಗಾಗಲೇ ನೋಡಿದೆ ಎಂದು ಮಗುವಿನ ತಾಯಿ ಜೆಸ್ ಮಾಹಿತಿ ನೀಡಿದ್ದಾರೆ.

ಇನ್ ಸ್ಟಾಗ್ರಾಮ್ ನಲ್ಲಿ 30,000 ಕ್ಕೂ ಅಧಿಕ ಫಾಲೊವರ್ಸ್ ಗಳನ್ನು ಹೊಂದಿರುವ ಬ್ರಿಗ್ಸ್ ಗೆ ಅಪಾರ ಅಭಿಮಾನಿಗಳಿದ್ದಾರೆ. ಮಗುವಿನ ತಾಯಿ ಈಗಾಗಲೇ ಪಾರ್ಟ್ ಟೈಮ್ ಟೂರಿಸ್ಟ್ಸ್ ಎಂಬ ಬ್ಲಾಗ್ ಅನ್ನು ನಡೆಸುತ್ತಿದ್ದರು. ಅದರ ಮೂಲಕ ಆಕೆ ಪ್ರಪಂಚಾದ್ಯಂತ ಪ್ರಯಾಣ ಮಾಡಲು ಹಣ ಪಡೆಯುತ್ತಿದ್ದರು.  "2020 ರಲ್ಲಿ ತಾನು ಬ್ರಿಗ್ಸ್‌ ನ ಗರ್ಭಿಣಿಯಾಗಿದ್ದಾಗ, ನನ್ನ ವೃತ್ತಿಜೀವನವು ಮುಗಿಯಿತೆಂದು ಭಾರೀ ಹೆದರುತ್ತಿದ್ದೆ, ಏಕೆಂದರೆ ಮಗುವಿನೊಂದಿಗೆ ಮುಂದುವರಿಯುವುದು ಸಾಧ್ಯವೇ ಎಂದು ನನಗೆ ತಿಳಿದಿರಲಿಲ್ಲ” ಎಂದು ಜೆಸ್ ಹೇಳಿದರು.

ಲಾಕ್‌ಡೌನ್‌ ವೇಳೆ ಕುಟುಂಬವು ಸರಿಯಾದ ಮುನ್ನೆಚ್ಚರಿಕೆಗಳೊಂದಿಗೆ ಮೂಲಕ ಪ್ರಯಾಣ ಬೆಳೆಸಿತು. “ನಾವು ದೊಡ್ಡ ನಗರ ಪ್ರಯಾಣವನ್ನು ತಪ್ಪಿಸಿದೆವು, ಹಾಗಾಗಿ ನಾವು ನ್ಯೂಯಾರ್ಕ್ ನಗರದಂತಹ ಸ್ಥಳಗಳಿಗೆ ಹೋಗಿಲ್ಲ. ಬದಲಾಗಿ ನಾವು ಹೆಚ್ಚು ಪ್ರಚಾರ ಪಡೆಯದ ಸ್ಥಳಗಳನ್ನು ಹುಡುಕುವತ್ತ ಗಮನಹರಿಸಿದ್ದೇವೆ”ಎಂದು ಜೆಸ್ ಡೈಲಿ ಮೇಲ್‌ಗೆ  ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article